ಶ್ರೀನಗರ: 2025ರ ಏಪ್ರಿಲ್ 22 ರಂದು ಬೈರಸನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಗೆ (Pahalgam Terror Attack) ಪ್ರತಿಯಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ ವೇಳೆ ಚೀನಾ ಪಾಕಿಸ್ತಾನಕ್ಕೆ ನೆರವು ನೀಡಿರುವುದು ಇತ್ತೀಚಿಗಷ್ಟೇ ಬಯಲಾಗಿದೆ. ದಾಳಿ ವೇಳೆ ಉಗ್ರರು ಬಳಿಸಿದ ಅಮೆರಿಕದಲ್ಲಿ ತಯಾರಾದ ಗೋಪ್ರೋ ಕ್ಯಾಮೆರಾಗಳನ್ನು ಚೀನಾ ಲಷ್ಕರ್-ಎ-ತೊಯ್ಬಾ ಉಗ್ರರಿಗೆ ಪೂರೈಕೆ ಮಾಡಿರುವುದು ಆತಂಕ ಹುಟ್ಟುಹಾಕಿದೆ.
ಈ ಕ್ಯಾಮೆರಾಗಳು ಹೇಗೆ ಉಗ್ರರ ಕೈ ಸೇರಿದವು ಎನ್ನುವುದರ ಕುರಿತು ಎನ್‌ಐಎ ತನಿಖೆ ನಡೆಸುತ್ತಿದೆ. ದಾಳಿ ವೇಳೆ ಭಾರತದ ಯೋಧರಿಂದ ಹತರಾದ ಉಗ್ರರಿಂದ ಈ ಹೈಟೆಕ್ ಕ್ಯಾಮೆರಾಗಳನ್ನ ವಶಕ್ಕೆ ಪಡೆಯಲಾಗಿತ್ತು. ಇದನ್ನೂ ಓದಿ: ನಿಷೇಧಿಸಲಾಗಿದ್ದ ಜಮಾತ್-ಎ-ಇಸ್ಲಾಮಿ ಸಂಘಟನೆ ಪುನಶ್ಚೇತನಕ್ಕೆ ಯತ್ನ – ಕಾಶ್ಮೀರದ ಹಲವೆಡೆ NIA ದಾಳಿ

ಈ ಕ್ಯಾಮೆರಾಗಳು ಅಮೆರಿಕದಲ್ಲಿ ತಯಾರಾಗಿ ಚೀನಾಗೆ ಪೂರೈಕೆಯಾಗಿದ್ದವು. ಹೀಗಾಗಿ ಎನ್‌ಐಎ ತನಿಖೆ ನಡೆಸಲು ಅಮೆರಿಕದ ಗೋಪ್ರೋ (US GoPro) ಇಂಕ್ ಕಂಪನಿಯಿಂದ ನೆರವು ಕೇಳಿತ್ತು. ಈ ವೇಳೆ ಅಮೆರಿಕದ ಕಂಪನಿ ಈ ಕ್ಯಾಮೆರಾಗಳನ್ನು ಚೀನಾಗೆ ಮಾರಾಟ ಮಾಡಿಲಾಗಿತ್ತು ಎಂದು ಮಹಿತಿ ನೀಡಿತ್ತು. ಇದನ್ನೂ ಓದಿ: 700 ಅಡಿ ಕಂದಕಕ್ಕೆ ಉರುಳಿದ ಸ್ಕಾರ್ಪಿಯೋ – ಮಹಾಬಲೇಶ್ವರಕ್ಕೆ ತೆರಳಿದ್ದ 8 ಮಂದಿ ದುರ್ಮರಣ
ಈ ಎಲ್ಲಾ ಮಾಹಿತಿ ಆಧಾರದಲ್ಲಿ ಚೀನಾದಿಂದ (China) ಈ ಕ್ಯಾಮೆರಾಗಳು ಲಷ್ಕರ್-ಎ-ತೊಯ್ಬಾಗೆ ಹೇಗೆ ಪೂರೈಕೆಯಾದವು ಎನ್ನುವುದರ ಜಾಡು ಹಿಡಿದು ಎನ್‌ಐಎ ತನಿಖೆ ಕೈಗೆತ್ತಿಕೊಂಡಿದೆ. ಈ ಕ್ಯಾಮೆರಾಗಳನ್ನು ಸ್ವತಃ ಪಾಕ್ ಸೇನೆಯೇ ಚೀನಾದಿಂದ ಖರೀದಿಸಿ ಉಗ್ರರಿಗೆ ತಲುಪಿಸಿರುವ ಶಂಕೆ ಹುಟ್ಟಿಕೊಂಡಿದೆ.
ಪಹಲ್ಗಾಮ್ ದಾಳಿ:
ಏಪ್ರಿಲ್ 22 2025ರಲ್ಲಿ ಜಮ್ಮು ಮತ್ತು ಕಾಶ್ಮೀರದ ಬೈರಸಾನ್ ಕಣಿವೆ ಭೀಕರ ಭಯೋತ್ಪಾದಕ ದಾಳಿಗೆ ಸಾಕ್ಷಿಯಾಗಿತ್ತು. ಈ ದಾಳಿಗೆ ಪ್ರತೀಕಾರವಾಗಿ 2025ರ ಮೇ 7ರ ಮುಂಜಾನೆ ಭಾರತೀಯ ಸೇನೆ ಆಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು ಕೈಗೊಂಡಿತ್ತು. ಈ ವೇಳೆ ಲಷ್ಕರ್-ಎ-ತೊಯ್ಬಾ ಉಗ್ರರಿಂದ ಈ ಕ್ಯಾಮೆರಾಗಳನ್ನು ವಶಪಡಿಸಿಕೊಳ್ಳಲಾಗಿತ್ತು.
