ಬೆಂಗಳೂರು: ಅಮೆರಿಕ-ಇರಾನ್ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಬೆಂಗಳೂರಿನ (Bengaluru) ಪ್ರಸಿದ್ಧ ಕೆಆರ್ ಮಾರುಕಟ್ಟೆ (KR Market) ವ್ಯಾಪಾರಿಗಳು (Vegetable Traders) ಥಂಡಾ ಹೊಡೆದಿದ್ದಾರೆ.
ಗ್ಯಾಸ್ ಸಿಲಿಂಡರ್ ಅಭಾವದಿಂದ ಹೋಟೆಲ್‌ಗಳು ಬಂದ್ ಆಗಿದ್ದು ತರಕಾರಿಗಳನ್ನು ಕೊಳ್ಳುವವರ ಸಂಖ್ಯೆ ಭಾರೀ ಕಡಿಮೆಯಾಗಿದೆ.
ಹಣ್ಣು ಹಂಪಲು ಮತ್ತು ತರಕಾರಿ ದರ ಕಡಿಮೆಯಾಗಿದ್ದರೂ ವ್ಯಾಪಾರ ಭಾರೀ ಇಳಿಕೆಯಾಗಿದೆ. ಗೋಣಿಯಲ್ಲಿ ತಗೆದುಕೊಂಡು ಬಂದ ತರಕಾರಿಗಳು ಗೋಣಿಯಲ್ಲೇ ಇವೆ. ಎರಡು ಮೂರು ದಿನಗಳಿಂದ ತರಕಾರಿ ಮಾರಾಟವಾಗದ ಕಾರಣ ಈಗ ಮೂಟೆಕಟ್ಟಿ ಕಸದ ಗಾಡಿಗೆ ತರಕಾರಿಗಳನ್ನು ಎಸೆಯುತ್ತಿದ್ದಾರೆ. ಇದನ್ನೂ ಓದಿ: ರಷ್ಯಾದಿಂದ ಕಚ್ಚಾ ತೈಲ ಖರೀದಿಸುವಂತೆ ಅಮೆರಿಕ ಭಾರತದ ಜೊತೆ ಬೇಡಿಕೊಂಡಿದೆ: ಇರಾನ್
ಕಳೆದ 2-3 ದಿನಗಳಿಂದ ವಾಣಿಜ್ಯ ಸಿಲಿಂಡರ್ ಅಭಾವ ಇದ್ದರೂ ಕೆಲ ಹೋಟೆಲ್‌ಗಳು ನಗರದಲ್ಲಿ ತೆರೆದಿದ್ದವು. ಆದರೆ ಇಂದು ನಗರದ ಬಹುತೇಕ ಹೋಟೆಲ್‌ಗಳು ಬಂದ್ ಅಗಿವೆ.
ಇಂದು ಎರಡು ಎಲ್‌ಪಿಜಿ ಟ್ಯಾಂಕರ್‌ಗಳು ಹಾರ್ಮುಜ್ ಜಲಸಂಧಿಯನ್ನು ದಾಟಿ ಭಾರತಕ್ಕೆ ಬರುತ್ತಿವೆ. ತನ್ನ ಮೇಲೆ ದಾಳಿ ನಡೆಸಿದ್ದಕ್ಕೆ ಇರಾನ್ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿದ್ದರಿಂದ ವಿಶ್ವಾದ್ಯಂತ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ಎಲ್‌ಪಿಜಿ ವಿತರಣೆಯಲ್ಲಿ ಭಾರೀ ವ್ಯತ್ಯಯವಾಗಿದೆ. ಇದನ್ನೂ ಓದಿ: ಇರಾನ್ ನಾವಿಕರ ಶವಗಳನ್ನು ಹೊತ್ತುಕೊಂಡು ಕೊಚ್ಚಿಯಿಂದ ಅರ್ಮೇನಿಯಾಗೆ ವಿಮಾನ ಟೇಕಾಫ್

