ಕೋಲ್ಕತ್ತಾ: ಅಮೆರಿಕ ವಿದೇಶಾಂಗ ಕಾರ್ಯದರ್ಶಿ (US Secretary of State) ಮಾರ್ಕೊ ರೂಬಿಯೊ (Marco Rubio) ಇಂದಿನಿಂದ ನಾಲ್ಕು ದಿನಗಳ ಕಾಲ ಭಾರತ (India) ಪ್ರವಾಸ ಮಾಡಲಿದ್ದು, ಮೊದಲ ಹಂತವಾಗಿ ಕೋಲ್ಕತ್ತಾಗೆ ಭೇಟಿ ನೀಡಿದ್ದಾರೆ.
ಭಾರತದಲ್ಲಿರುವ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ (Sergio Gor) ಅವರು ಮಾರ್ಕೊ ರೂಬಿಯೊ ಅವರನ್ನು ಸ್ವಾಗತಿಸಿದರು. 2012ರಲ್ಲಿ ಹಿಲ್ಲರಿ ಕ್ಲಿಂಟನ್ ಕೊಲ್ಕತ್ತಾಗೆ ಭೇಟಿ ನೀಡಿದ್ದರು. ಇದಾಗಿ 14 ವರ್ಷಗಳ ನಂತರ ಅಮೆರಿಕದ ಪ್ರತಿನಿಧಿ ಮಾರ್ಕೊ ರೂಬಿಯೋ ಕೋಲ್ಕತ್ತಾಗೆ ಭೇಟಿ ನೀಡಿದ್ದಾರೆ. ಕೊಲ್ಕತ್ತಾದ ಮಿಷನರೀಸ್ ಆಫ್ ಚಾರಿಟಿಯ ಮದರ್ ತೆರೇಸಾ ಹೌಸ್‌ಗೆ ಮಾರ್ಕೊ ರೂಬಿಯೊ ಭೇಟಿ ಕೊಟ್ಟಿದ್ದಾರೆ. ಇದನ್ನೂ ಓದಿ: ಮೊದಲ ಬಾರಿ ಐಪಿಎಲ್‌ನ ಇಡೀ ಆವೃತ್ತಿ ಆಡದ ಧೋನಿ – 2027ಕ್ಕೂ ಮುನ್ನವೇ ನಿವೃತ್ತಿ?
ನಾಲ್ಕು ದಿನಗಳ ಭೇಟಿಯಲ್ಲಿ ಇಂಧನ, ವ್ಯಾಪಾರ, ತಂತ್ರಜ್ಞಾನ ಮತ್ತು ರಕ್ಷಣಾ ಸಹಕಾರದ ಕುರಿತು ಚರ್ಚೆ ನಡೆಸುವ ಸಾಧ್ಯತೆಯಿದೆ. ತನ್ನ 4 ದಿನಗಳ ಪ್ರವಾಸದಲ್ಲಿ ಮಾರ್ಕೊ ರೂಬಿಯೊ ಕೋಲ್ಕತ್ತಾ, ಆಗ್ರಾ, ಜೈಪುರ ಮತ್ತು ನವದೆಹಲಿಗೆ ಭೇಟಿ ನೀಡಲಿದ್ದಾರೆ. ಭಾರತದೊಂದಿಗಿನ ಇಂಧನ ಮಾತುಕತೆ ಮತ್ತು ಕ್ವಾಡ್ ಒಕ್ಕೂಟದ ರಾಷ್ಟçಗಳ ಸಚಿವರ ಸಭೆ ಹಿನ್ನೆಲೆ ಈ ಪ್ರವಾಸ ರಾಜತಾಂತ್ರಿಕವಾಗಿ ಅತ್ಯಂತ ಮಹತ್ವದ್ದಾಗಿದೆ. ಇದನ್ನೂ ಓದಿ: ವಾಹನ ಸವಾರರಿಗೆ ಮತ್ತೆ ಶಾಕ್; ಪೆಟ್ರೋಲ್ 87, ಡೀಸೆಲ್ 91 ಪೈಸೆ ಏರಿಕೆ

