ಬೆಂಗಳೂರು: ನಾನು ಕುಮಾರಸ್ವಾಮಿಯವರ (HD Kumaraswamy) ಪಂಥಾಹ್ವಾನ ಸ್ವೀಕರಿಸಿದ್ದೇನೆ. ಹಿಂದೆ ‘ಪಬ್ಲಿಕ್ ಟಿವಿ’ಗೆ ಹೋಗಿದ್ದ ವೇಳೆ ಪಂಥಾಹ್ವಾನಕ್ಕೆ ವೇದಿಕೆ ಸಿದ್ಧಪಡಿಸಿದ್ದರು. ಈಗ ಒಂದು ಚಾನಲ್‌ಗೆ ಬರಲ್ಲ, ಸಾರ್ವಜನಿಕವಾಗಿ ಮಾತನಾಡೋಣ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar), ಹೆಚ್‌ಡಿಕೆಗೆ ಸವಾಲ್ ಎಸೆದಿದ್ದಾರೆ.
ಬಿಡದಿ ಟೌನ್‌ಶಿಪ್ (Bidadi Township) ವ್ಯಾಪ್ತಿಯ ರೈತರ ಜೊತೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಹೇಳಿದ ಸ್ಥಳದಲ್ಲಿ ಚರ್ಚೆಗೆ ರೆಡಿ. ರೈತರು ನಾವೂ ಬರುತ್ತೇವೆ ಎಂದಿದ್ದಾರೆ. ಪಾಪ ರೈತರು ಬೇಡ. 3 ದಿನ ಮೊದಲೇ ಹೇಳಲಿ. ಅಸಂಬದ್ಧ ಪದ ಬಳಸದೆ ನಾನು ಅವರ ಜೊತೆ ಮಾತನಾಡುತ್ತೇನೆ. ಬಂಡೆಯನ್ನು ಸ್ಟೀಲ್ ಅಲ್ವಾ ಒಡೆಯೋದು, ಅವರು ದಂಡು ದಾಳಿ ಕರೆದುಕೊಂಡು ಬರಲಿ ಎಂದರು. ಇದನ್ನೂ ಓದಿ: ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನಿಗೆ ಜಾಮೀನು – ಸನ್ಮಾನ ಮಾಡಲು ಹೋದವರು ಲಾಕ್
ಅವರು ಉಕ್ಕು ಕಬ್ಬಿಣ ಸಚಿವರಲ್ವಾ, ಕಬ್ಬಿಣ ಸಿಮೆಂಟ್ ರೇಟ್ ಕಡಿಮೆ ಮಾಡಿಸಲಿ. ಅವರಿಗೆ ತಿಳಿಸಿ ಅಂತ ರೈತರು ನನಗೆ ಹೇಳಿದ್ದಾರೆ. ಟೌನ್‌ಶಿಪ್‌ಗೆ ನೈಸ್ ರೋಡ್ ಕನಕಪುರ ರೋಡ್ ಕನೆಕ್ಟ್ ಮಾಡುತ್ತೇವೆ. ಟೌನ್ ಶೀಪ್ ಹೇಗೆ ಬರುತ್ತದೆ ಎಂದು ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಶಾಲಾ-ಕಾಲೇಜು ತೆರೆಯಲು 8 ಎಕರೆ ಜಾಗ ಖರೀದಿಸಿದ್ದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕೇಸ್ ಆರೋಪಿ
ಗ್ರೇಟರ್ ಬೆಂಗಳೂರು ಟೌನ್ ಶಿಪ್ ರೈತರು ಬಂದಿದ್ದರು. ನಾನು ಪರಿಹಾರ ಘೋಷಣೆ ಮಾಡಿದ್ದಕ್ಕೆ ಶೇ.80ರಷ್ಟು ರೈತರು ಒಪ್ಪಿದ್ದಾರೆ. ಆದಷ್ಟು ಬೇಗ ಪರಿಹಾರ ಕೊಡಿ ಎಂದಿದ್ದಾರೆ. 3 ದಿನದಲ್ಲಿ ನೋಟಿಫಿಕೇಷನ್ ಹೊರಡಿಸಿ ಹಣ ನೀಡುತ್ತೇವೆ. ಇದು ನಾವು ಮಾಡಿದ್ದಲ್ಲ, ಕುಮಾರಸ್ವಾಮಿ ಅವಧಿಯಲ್ಲೇ ಮಾಡಿದ್ದು. ಅವಾಗ ವ್ಯತ್ಯಾಸ ಆಗಿ ಇದು ರೆಡ್ ಝೋನ್ ಅಂತ ಘೋಷಣೆ ಮಾಡಿದ್ದರು. ನಮ್ಮನ್ನ ಬೆಂಗಳೂರು ಅಂತ ಘೋಷಣೆ ಮಾಡಿದ್ದಿರ ಅಂತ ಖುಷಿ ಪಟ್ಟಿದ್ದಾರೆ ಎಂದು ನುಡಿದರು. ಇದನ್ನೂ ಓದಿ: 8 ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ 24 ಗಂಟೆ ಆಂಬುಲೆನ್ಸ್‌ನಲ್ಲೇ ನರಳಾಡಿದ ಗಾಯಾಳು
ಸಾಮಾಜಿಕ ಕಾರ್ಯಕರ್ತ ಎಸ್.ಆರ್. ಹಿರೇಮಠ್ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ 2019 ರಲ್ಲಿ ರಾಜಕೀಯ ವಾಕ್ಸಮರ ಹಾಗೂ ಆರೋಪ-ಪ್ರತ್ಯಾರೋಪ ಜೋರಾಗಿ ನಡೆಯುತ್ತಿತ್ತು. ಈ ವೇಳೆ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್‌ಆರ್ ರಂಗನಾಥ್ ಇಬ್ಬರಿಗೆ ಆಹ್ವಾನ ನೀಡಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು.

