ಇಟಾನಗರ: ಅರುಣಾಚಲ ಪ್ರದೇಶದ (Arunachal Pradesh) ಪಾಸಿಘಾಟ್‌ನ ಮೆಬೊ ಮತ್ತು ಸಿಗರ್ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಕಾಡ್ಗಿಚ್ಚು (Arunachal Forest Fire) ಕಾಣಿಸಿಕೊಂಡಿದ್ದು, ಬೆಂಕಿ ನಂದಿಸಲು ಭಾರತೀಯ ವಾಯುಪಡೆ (Indian Air Force) 66,000 ಲೀಟರ್ ನೀರನ್ನು ಬಳಸಿದೆ.
ಬೆಂಕಿ ನಂದಿಸಲು ಭಾರತೀಯ ವಾಯುಪಡೆ (ಐಎಎಫ್) ಮಂಗಳವಾರ ಮಿ -17 ವಿ 5 ಹೆಲಿಕಾಪ್ಟರ್‌ನ್ನು ನಿಯೋಜಿಸಿತ್ತು. ಬೆಂಕಿ ನಂದಿಸುವ ಕಾರ್ಯಾಚರಣೆಯ ಫೋಟೋ ಹಾಗೂ ವಿಡಿಯೋವನ್ನು ವಾಯುಪಡೆ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ: ಕಾಡ್ಗಿಚ್ಚು ನಿಯಂತ್ರಣಕ್ಕೆ ಕಟ್ಟೆಚ್ಚರ ವಹಿಸಲು ಈಶ್ವರ್ ಖಂಡ್ರೆ ಸೂಚನೆ
&
#IAF demonstrated rapid response & operational precision in Arunachal Pradesh, deploying a Mi-17 V5 helicopter to battle a major forest fire in the Mebo & Sigar areas of Pasighat.
Over multiple sorties, the IAF released 66,000 litres of water to contain the blaze and protect… pic.twitter.com/ZeG57nz3qG
— Indian Air Force (@IAF_MCC) March 10, 2026
nbsp;
Mi-17 V5 ಹೆಲಿಕಾಪ್ಟರ್ ಬೆಂಕಿ ನಂದಿಸುವ ಕಾರ್ಯಾಚರಣೆಯ ವೀಡಿಯೋವನ್ನು ವಾಯುಪಡೆ ಹಂಚಿಕೊಂಡಿದ್ದು, ಹೆಲಿಕಾಪ್ಟರ್‌ನ ಸಾಮರ್ಥ್ಯ ಹಾಗೂ ನಿಖರವಾದ ಕಾರ್ಯವನ್ನು ಅದರಲ್ಲಿ ನೋಡಬಹುದಾಗಿದೆ. ಹಲವಾರು ಬಾರಿ ಹಾರಾಟ ನಡೆಸಿದ Mi-17 V5 ಹೆಲಿಕಾಪ್ಟರ್ ಬೆಂಕಿ ಹೊತ್ತಿದ್ದ ಸ್ಥಳದಲ್ಲಿ ಸುಮಾರು 66,000 ಲೀಟರ್ ನೀರನ್ನು ಸುರಿದಿದೆ.
ಇತ್ತೀಚೆಗೆ ಅರುಣಾಚಲ ಪ್ರದೇಶದ ವಾಲೋಂಗ್‌ನಲ್ಲಿ, ಐಎಎಫ್ ಹೆಲಿಕಾಪ್ಟರ್‌ಗಳು ಬೆಂಕಿ ಹೊತ್ತಿಕೊಂಡ ಪ್ರದೇಶದ ಮೇಲೆ 139,800 ಲೀಟರ್ ನೀರನ್ನು ಹರಿಸುವ ಮೂಲಕ ಯಶಸ್ವಿಯಾಗಿ ನಂದಿಸಿದ್ದವು. ಅಸ್ಪಷ್ಟ ಗೋಚರತೆ ಮತ್ತು ಗಾಳಿಯಿಂದಾಗಿ ಈ ವೈಮಾನಿಕ ಕಾರ್ಯಾಚರಣೆ ಸವಾಲಿನಿಂದ ಕೂಡಿತ್ತು ಎಂದು ಅಧಿಕಾರಿಗಳು ಹೇಳಿದ್ದರು.
ಶುಷ್ಕ ಹವಾಮಾನ ಪರಿಸ್ಥಿತಿಗಳು ಮತ್ತು ಬೆಟ್ಟದ ಬುಡಕಟ್ಟು ಜನಾಂಗದವರು ಬಳಸುವ ಸಾಂಪ್ರದಾಯಿಕ ಜುಮ್ ಕೃಷಿ ಪದ್ಧತಿ ಈಶಾನ್ಯ ರಾಜ್ಯಗಳಲ್ಲಿ ಕಾಡ್ಗಿಚ್ಚಿಗೆ ಕಾರಣವಾಗಿದೆ ಎಂದು ಗುವಾಹಟಿಯಲ್ಲಿರುವ ರಕ್ಷಣಾ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ಹರಿಯಾಣ | ನಿರ್ಮಾಣ ಹಂತದ ಗೋಡೆ ಕುಸಿತ – 7 ಕಾರ್ಮಿಕರು ಸಾವು, ಐವರ ಸ್ಥಿತಿ ಚಿಂತಾಜನಕ

