ಚಿಕ್ಕಮಗಳೂರು: ಬೇಸಿಗೆ ರಜೆಗೆ ಅಜ್ಜಿ ಮನೆಗೆ ಬಂದಿದ್ದ ಬಾಲಕಿಯೊಬ್ಬಳು ಆಟವಾಡುತ್ತಿದ್ದ ವೇಳೆ ಸೀರೆ ಕುತ್ತಿಗೆಗೆ ಬಿಗಿದು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಶೃಂಗೇರಿ (Sringeri) ತಾಲೂಕಿನ ಬೆಟ್ಟಗೆರೆ ಸಮೀಪದ ಕಲ್ಲೊಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕಿ ಮೂಲತಃ ಶೃಂಗೇರಿ ತಾಲೂಕಿನ ಮರ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಗಿನಬೈಲು ಗ್ರಾಮದ ಗಂಜೇಂದ್ರ-ಶುಭ ಅವರ ಪುತ್ರಿ ಸಪ್ತಮಿ (14) ಎಂದು ಗುರುತಿಸಲಾಗಿದ್ದು, 7ನೇ ತರಗತಿ ಓದುತ್ತಿದ್ದಳು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಅತ್ತೆ, ಗಂಡನ ಕಿರುಕುಳಕ್ಕೆ ಬೇಸತ್ತು ಡೆತ್ ನೋಟ್ ಬರೆದು ಗೃಹಿಣಿ ಆತ್ಮಹತ್ಯೆ
ಮೃತ ಬಾಲಕಿ ಸಪ್ತಮಿ ತನ್ನ ತಾಯಿ ಶುಭಾ ಅವರೊಂದಿಗೆ ಬೇಸಿಗೆ ರಜೆ ಇದ್ದ ಕಾರಣ ಅಜ್ಜಿಯ ಮನೆಗೆ ಬಂದಿದ್ದಳು. ಸೋಮವಾರ (ಮೇ 18) ಮಧ್ಯಾಹ್ನ ಊಟದ ನಂತರ ಬಾಲಕಿ ಮನೆಯ ಅಟ್ಟದ ಮೇಲೆ ಆಟವಾಡುತ್ತಿದ್ದವಳು. ಈ ವೇಳೆ ಏಣಿಯಿಂದ ಕೆಳಗೆ ಇಳಿಯುವಾಗ ಏಣಿಗೆ ಕಟ್ಟಿದ್ದ ಹಗ್ಗದ ರೂಪದಲ್ಲಿದ್ದ ಸೀರೆ ಕುತ್ತಿಗೆಗೆ ಸಿಲುಕಿದೆ. ಪರಿಣಾಮ ಏಣಿಯಿಂದ ಕಾಲು ಜಾರಿದ್ದು, ಸೀರೆ ಕುತ್ತಿಗೆಗೆ ಬಿಗಿಯಾಗಿದ್ದು, ಉಸಿರುಗಟ್ಟಿದೆ.
ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಘಟನೆ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮತದಾರರಿಗೆ ಬೆದರಿಕೆ ಕೇಸ್ ದಾಖಲಾದ ಬೆನ್ನಲ್ಲೇ ಚುನಾವಣೆಯಿಂದ ಹಿಂದೆ ಸರಿದ ಫಾಲ್ಟಾ ಟಿಎಂಸಿ ಅಭ್ಯರ್ಥಿ

