ಶಿಲ್ಲಾಂಗ್: ಹನಿಮೂನ್‌ಗೆ ಹೋಗಿದ್ದಾಗ ಪ್ರಿಯಕರನೊಟ್ಟಿಗೆ ಸೇರಿ ಪತಿಯನ್ನು ಹತ್ಯೆಗೈದ ಪ್ರಕರಣದ ಆರೋಪಿ ಸೋನಮ್ ರಘುವಂಶಿ (Sonam Raghuvanshi) ಸುಪ್ರೀಂಕೋರ್ಟ್ (Supreme Court) ಆದೇಶದಂತೆ ಇಂದು (ಜು.30) ಶಿಲ್ಲಾಂಗ್‌ನ ವಿಚಾರಣಾ ನಾಯ್ಯಾಲಯದ ಮುಂದೆ ಶರಣಾಗಿದ್ದಾಳೆ.
ಈ ಕುರಿತು ಈಸ್ಟ್ ಖಾಸಿ ಹಿಲ್ಸ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸೈಯಮ್ ಮಾಹಿತಿ ನೀಡಿದ್ದು, ಮಂಗಳವಾರ (ಜು.28) ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಹನಿ ಮೂನ್ ಹಂತಕಿ ಸೋನಮ್‌ಗೆ ಸುಪ್ರೀಂ ಶಾಕ್ – ಜಾಮೀನು ರದ್ದು
ಸುಪ್ರೀಂ ಆದೇಶವೇನು?
ವಿಚಾರಣೆಗೆ ಅಡ್ಡಿಯಾಗಬಹುದು ಎಂಬ ಕಾರಣ ನೀಡಿ ಸೋನಮ್‌ಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಜು.23ರಂದು ರದ್ದುಗೊಳಿಸಿತ್ತು. ಜೊತೆಗೆ ಮೂರು ವಾರಗಳೊಳಗೆ ಶರಣಾಗುವಂತೆ ನಿರ್ದೇಶನ ನೀಡಿತ್ತು. ಒಂದು ವೇಳೆ ಮುಂದಿನ ಆರು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳ್ಳದಿದ್ದರೆ, ಸೋನಮ್ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಲು ಮುಕ್ತರಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಏನಿದು ಪ್ರಕರಣ?
2025ರ ಮೇ 23ರಂದು ಮೇಘಾಲಯದ ಸೋಹ್ರಾ ಪ್ರದೇಶದಲ್ಲಿ ಹನಿಮೂನ್‌ಗೆ ತೆರಳಿದ್ದ ದಂಪತಿ ನಾಪತ್ತೆಯಾಗಿದ್ದರು. ನಂತರ ಜೂನ್ 2ರಂದು ರಾಜಾ ರಘುವಂಶಿ ಅವರ ಮೃತದೇಹವು ಆಳವಾದ ಕಂದಕದಲ್ಲಿ ಪತ್ತೆಯಾಗಿತ್ತು. ತನ್ನ ಪ್ರಿಯಕರ ರಾಜ್ ಕುಶ್ವಾಹ ಜೊತೆ ಸೇರಿ ಸುಪಾರಿ ಕಿಲ್ಲರ್‌ಗಳನ್ನು ಬಳಸಿ ಹತ್ಯೆ ಮಾಡಿಸಿದ್ದಾರೆ ಎಂಬ ಆರೋಪ ಸೋನಮ್ ಮೇಲಿದೆ. ಕಳೆದ ವರ್ಷ ಜೂನ್‌ನಲ್ಲಿ ಆಕೆಯನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: ನೀವು ಶರಣಾಗುವುದು ಸೂಕ್ತ – ಹನಿಮೂನ್ ಹಂತಕಿ ಸೋನಮ್‌ಗೆ ಸುಪ್ರೀಂ ಸಲಹೆ
