ಚಿಕ್ಕಬಳ್ಳಾಪುರ: ಚಿಮುಲ್ (Chimul), ಚಿಕ್ಕಬಳ್ಳಾಪುರ ಹಾಲು ಒಕ್ಕೂಟ, ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಉತ್ಪಾದಕ ರೈತರಿಗೆ ಗುಡ್ ನ್ಯೂಸ್ ನೀಡಿದೆ. ಲೀಟರ್ ಹಾಲಿಗೆ 50 ಪೈಸೆ ಹೆಚ್ಚಳ ಮಾಡಿ ಚಿಮುಲ್ ನಿರ್ಣಯ ಕೈಗೊಂಡಿದ್ದು, ಇದು ಹೈನುಗಾರರಿಗೆ ಲಾಭವಾಗಲಿದೆ.
ಹೊಸ ವರ್ಷಕ್ಕೆ ಜನವರಿ 1 ರಂದು ಲೀಟರ್‌ಗೆ 1 ರೂಪಾಯಿ ಹೆಚ್ಚಳ ಮಾಡಿದ್ದ ಚಿಮುಲ್ ಈಗ ಮತ್ತೆ 50 ಪೈಸೆ ಏರಿಕೆ ಮಾಡಿದೆ. ಇದರಿಂದ ಹೈನುಗಾರರಿಗೆ ಪ್ರತಿ ಲೀಟರ್‌ಗೆ 36 ರೂಪಾಯಿ 40 ಪೈಸೆ ಸಿಗಲಿದ್ದು, ಮೇ ಅಂತ್ಯದವರೆಗೂ ಈ 50 ಪೈಸೆ ಹೆಚ್ಚಳ ಇರಲಿದೆ. ಇದನ್ನೂ ಓದಿ: ಚಿಕ್ಕಮಗಳೂರು | ಜಿಲ್ಲೆಯಲ್ಲಿರೋ ಐವರು ಶಾಸಕರಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡಿ ಉಸ್ತುವಾರಿ ಕೊಡಿ: ಕೆ.ಜೆ ಜಾರ್ಜ್
ಮುಂದೆಯೂ ಚಿಮುಲ್ ಲಾಭಾಂಶ ನೋಡಿಕೊಂಡು ದರ ಹೆಚ್ಚಳ ಮುಂದವರೆಸುವ ತೀರ್ಮಾನ ಕೈಗೊಳ್ಳಲಾಗುವುದು ಎಂದು ಚಿಮುಲ್ ಅಧ್ಯಕ್ಷ ಮಂಜುನಾಥ ರೆಡ್ಡಿ ‘ಪಬ್ಲಿಕ್ ಟಿವಿ’ಗೆ ತಿಳಿಸಿದ್ದಾರೆ.

