– ಪೆಟ್ರೋಲ್, ಡೀಸೆಲ್ ಮಿತ ಬಳಕೆಗೆ ಪ್ರಧಾನಿ ಕರೆ
ಹೈದರಾಬಾದ್: ಪೆಟ್ರೋಲ್, ಡೀಸೆಲ್ ಸದ್ಬಳಕೆಗೆ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಕರೆ ನೀಡಿದರು. ಇದಕ್ಕಾಗಿ ಮನೆಯಿಂದಲೇ ಕೆಲಸ (Work From Home) ಮಾಡುವಂತೆ ಸಲಹೆ ನೀಡಿದರು. ಹೈದರಾಬಾದ್‍ನ ಕಾರ್ಯಕ್ರಮವೊಂದರಲ್ಲಿ ಮಾತಾಡಿದ ಅವರು, ಆಮದು ಮಾಡಿಕೊಂಡ ಪೆಟ್ರೋಲ್ (Petrol), ಡೀಸೆಲ್ ಸದ್ಬಳಕೆಯಾಗಬೇಕು ಎಂದು ಒತ್ತಿ ಹೇಳಿದರು.
ಪೆಟ್ರೋಲ್, ಡೀಸೆಲ್ ಉತ್ಪನ್ನಗಳ ಮಿತ ಬಳಕೆ ಈಗಿನ ಅಗತ್ಯವಾಗಿದೆ. ನಾವು ಆಮದು ಮಾಡಿಕೊಂಡ ಪೆಟ್ರೋಲ್ ಉತ್ಪನ್ನಗಳನ್ನು ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಸಬೇಕಾಗಿದೆ. ಮನೆಯಿಂದಲೇ ಕೆಲಸ ಮಾಡಿ, ವಿದ್ಯುತ್ ವಾಹನಗಳನ್ನು ಬಳಸಿ, ಚಿನ್ನ ಖರೀದಿ ಕಡಿಮೆ ಮಾಡಿ, ವಿದೇಶಗಳಲ್ಲಿ ಮದುವೆ ಕಾರ್ಯಕ್ರಮ ಮಾಡದಂತೆ ಅವರು ಭಾರತೀಯರಿಗೆ ಕರೆಕೊಟ್ಟರು. ಇದು ವಿದೇಶಿ ವಿನಿಮಯವನ್ನು ಉಳಿಸುವುದಲ್ಲದೇ ಯುದ್ಧದ ಪ್ರತಿಕೂಲ ಪರಿಣಾಮವನ್ನು ಕಡಿಮೆ ಮಾಡಲಿದೆ. ಇದನ್ನೂ ಓದಿ: ಬೆಂಗ್ಳೂರು ಅಂದ್ರೆ ITBT ಮಾತ್ರ ಅಲ್ಲ, ಆಧ್ಯಾತ್ಮಿಕತೆಗೂ ಉತ್ತಮ ವಾತಾವರಣ: ಮೋದಿ
ಕಳೆದ ಕೆಲವು ವರ್ಷಗಳಿಂದ, ಸೌರಶಕ್ತಿಯ ವಿಷಯದಲ್ಲಿ ಭಾರತ ವಿಶ್ವದ ಅಗ್ರ ರಾಷ್ಟ್ರಗಳಲ್ಲಿ ಸ್ಥಾನ ಪಡೆದಿದೆ. ಪೆಟ್ರೋಲ್‍ನಲ್ಲಿ ಎಥೆನಾಲ್ ಮಿಶ್ರಣ ಮಾಡುವಲ್ಲಿ ಅಭೂತಪೂರ್ವ ಕೆಲಸ ಮಾಡಲಾಗಿದೆ ಎಂದು ಇದೇ ವೇಳೆ ಅವರು ಒತ್ತಿ ಹೇಳಿದ್ದಾರೆ.
ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ನಡುವೆ ಮೋದಿ ಹೇಳಿಕೆ ಗಂಭೀರತೆ ಪಡೆದಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಸಿಎಂ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ – ಕುರ್ಚಿ ಕಿತ್ತಾಟಕ್ಕೆ ಮೋದಿ ಲೇವಡಿ

