ಬಿಗ್ಬಾಸ್ ಸೀಸನ್ 13 ರಲ್ಲಿ ಶೋ (Bigg Boss 13) ಮಧ್ಯೆಯೇ ರೂಲ್ಸ್ ಬ್ರೇಕ್ ಮಾಡಿ ಮನೆಯಿಂದ ಹೊರಹೋಗಿದ್ದ ಮಾಡ್ರನ್ ಮಹಾಕವಿ ಮಂಜ (Modern Mahakavi Manja) ಮತ್ತೇ ಎಂಟ್ರಿ ಕೊಡಲಿದ್ದಾರೆ.
ಮಂಜು ಅವರ ಎಂಟ್ರಿ ಮೂಲಕ ಬಿಗ್ಬಾಸ್ ವೀಕ್ಷಕರಿಗೆ ದೀಪಾವಳಿಯಂದು ಸರ್ಪ್ರೈಸ್ ಸಿಗಲಿದೆ. ಬಿಗ್ಬಾಸ್ ಅಗ್ನಿಪರೀಕ್ಷೆ ಮೂಲಕ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದ ಮಾಡ್ರನ್ ಮಹಾಕವಿ ಮಂಜ ಸೆಲೆಬ್ರಿಟಿಗಳಿಗೆ ಟಕ್ಕರ್ ಕೊಡುವಂತೆ ಮಾತನಾಡಿ ಎಲ್ಲರ ಗಮನ ಸೆಳೆದಿದ್ದರು. ತಮ್ಮ ಮಾತು, ಹಾಗೂ ಕವನಗಳಿಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಗಳಿಸಿದ್ದರು.
ಅವಾಚ್ಯ ಶಬ್ಧ ಬಳಸಿ ಮನೆಯಿಂದ ಔಟ್
ಬಿಗ್ಬಾಸ್ ಮನೆಯೊಳಗಿದ್ದಾಗ ಮೂಲ ನಿಯಮಕ್ಕೆ ಧಕ್ಕೆ ತಂದ ಆರೋಪದಡಿ ಶೋನಿಂದ ಮಂಜು ಕಿಕ್ಔಟ್ ಆಗಿದ್ದರು. ಮೊದಲಿಗೆ ಸಹಸ್ಪರ್ಧಿ ಸೌಂದರ್ಯ ಜೊತೆ ಜಗಳವಾಡೋ ಸಂದರ್ಭದಲ್ಲಿ ನಿಂದನೆ ಮಾಡಿದ್ದಕ್ಕೆ ಕಿಚ್ಚ ಸುದೀಪ್ರಿಂದ ವಾರ್ನಿಂಗ್ ಕೂಡ ಬಂದಿತ್ತು. ಆದರೆ, ಮತ್ತೇ ಟಾಸ್ಕ್ ವೇಳೆ ಯಶಸ್ಗೆ ಅವಾಚ್ಯ ಶಬ್ಧಗಳನ್ನು ಬಳಕೆ ಮಾಡಿದ್ದಕ್ಕಾಗಿ ಮಂಜುಗೆ ಗೇಟ್ಪಾಸ್ ಕೊಡಲಾಗಿತ್ತು.ಇದನ್ನೂ ಓದಿ: ಕಮಲ್ ಹಾಸನ್ ಹುಟ್ಟುಹಬ್ಬಕ್ಕೆ ಸಂಡಿಯಾರ್ ಫಸ್ಟ್ ಲುಕ್ ಅನಾವರಣ
ದೀಪಾವಳಿ ಹಬ್ಬಕ್ಕೆ ಸಪ್ರೈಸ್ ಎಂಟ್ರಿ ಕೊಡಲಿರುವ ಮಂಜು ಕಂಟೆಸ್ಟೆಂಟ್ ಆಗಿರ್ತಾರಾ ಅಥವಾ ಗೆಸ್ಟ್ ರೂಪದಲ್ಲಿ ಬರ್ತಾರಾ ಅನ್ನೋದು ಮಾತ್ರ ಕುತೂಹಲ ಮೂಡಿಸಿದೆ.ಇದನ್ನೂ ಓದಿ: ಅದ್ಭುತ ದೀಪಾವಳಿ ಕಣ್ತುಂಬಿಕೊಳ್ಳಲು ಈ ತಾಣಗಳಿಗೆ ಭೇಟಿ – ಬೆಳಕಿನ ಹಬ್ಬ ಆಚರಿಸಿ
