ಬೆಂಗಳೂರು: ನಾಡಿನೆಲ್ಲೆಡೆ ದೀಪಾವಳಿ ಹಬ್ಬದ ಸಡಗರ ಸಂಭ್ರಮ ಶುರುವಾಗಿದೆ. ದೀಪಗಳ ಹಬ್ಬಕ್ಕೆ ಹಣ್ಣು, ಹೂವಿನ ಖರೀದಿಗೆ ಜನ ಮುಗಿಬಿದ್ದಿದ್ದು, ಬೆಂಗಳೂರಿನ ಕೆ.ಆರ್. ಮಾರ್ಕೆಟ್ನಲ್ಲಿ (K R Market) ಜನಜಂಗುಳಿ ಹೆಚ್ಚಾಗಿದೆ.
ದೀಪಗಳ ಹಬ್ಬದ (Diwali) ಆಚರಣೆಗೆ ಜನರೆಲ್ಲರೂ ಮಾರ್ಕೆಟ್ಗಳಿಗೆ ಹೋಗಿ ಅಂಲಕಾರಿಕ ವಸ್ತುಗಳಿಂದ ಹಿಡಿದು ಹೂವು, ಹಣ್ಣು ಖರೀದಿಗೆ ಬೆಳ್ಳಂಬೆಳಗ್ಗೆ ಇಂದು ನಗರದ ಕೆ.ಆರ್. ಮಾರ್ಕೆಟ್ಗೆ ಬಂದಿದ್ದಾರೆ.
ಬೆಳಗಿನ ಜಾವ 3 ಗಂಟೆಯಿಂದಲೇ ಮಾರ್ಕೆಟ್ಗೆ ಲಗ್ಗೆ ಇಟ್ಟ ಜನರು ಹಬ್ಬಕ್ಕೆ ಜೋರು ಖರೀದಿ ನಡೆಸಿದ್ದಾರೆ. ವರ್ಷದ ದೊಡ್ಡ ಹಬ್ಬಕ್ಕೆ ಗ್ರಾಹಕರು ಹಣ್ಣು, ಹೂವು, ಪೂಜಾ ಸಾಮಗ್ರಿಗಳನ್ನು ಖರೀದಿಸಲು ಮುಗಿಬಿದ್ದಿದ್ದಾರೆ. ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿಯಲ್ಲಿ ಜನರು ಬ್ಯುಸಿಯಾಗಿದ್ದಾರೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಜೋರಾಗಿದೆ.ಇದನ್ನೂ ಓದಿ: ಅದ್ಭುತ ದೀಪಾವಳಿ ಕಣ್ತುಂಬಿಕೊಳ್ಳಲು ಈ ತಾಣಗಳಿಗೆ ಭೇಟಿ – ಬೆಳಕಿನ ಹಬ್ಬ ಆಚರಿಸಿ
ಹಬ್ಬದ ಖರೀದಿ ಹಿನ್ನೆಲೆ ಕೆ.ಆರ್ ಮಾರ್ಕೆಟ್ನಲ್ಲಿ ಜನಸಂದಣಿ ಹೆಚ್ಚಾಗಿದೆ. ಎಲ್ಲೆಲ್ಲೂ ಬಣ್ಣದ ಹೂಗಳು ಗಮನ ಸೆಳೆಯುತ್ತಿದ್ದು, ಹೆಜ್ಜೆ ಇಡಲೂ ಆಗದಷ್ಟು ಜನಜಂಗುಳಿ ಉಂಟಾಗಿದೆ. ಇದನ್ನೂ ಓದಿ: ದೀಪಾವಳಿ ಆಫರ್ ಆಸೆಗೆ ಬಿದ್ದರೆ ಪಂಗನಾಮ ಫಿಕ್ಸ್ – OTP, ಬ್ಯಾಂಕ್ ವಿವರ ನೀಡದಂತೆ ಪೊಲೀಸರ ಎಚ್ಚರಿಕೆ
