ಬೆಂಗಳೂರು: ಇಂದಿನಿಂದ ಪ್ರಾರಂಭ ಆಗಿರುವ ದ್ವಿತೀಯ ಪಿಯುಸಿ ಪರೀಕ್ಷೆ – 1 (Second PUC Exam) ಮೊದಲ ದಿನ ಯಶಸ್ವಿಯಾಗಿ ಮುಕ್ತಾಯವಾಗಿದೆ. ರಾಜ್ಯಾದ್ಯಂತ ಯಾವುದೇ ಅಕ್ರಮಗಳು ವರದಿಯಾಗದೇ ಸುಸೂತ್ರವಾಗಿ ಪರೀಕ್ಷೆ ನಡೆದಿದೆ.
ಮೊದಲ ದಿನವಾದ ಇಂದು ಕನ್ನಡ ಮತ್ತು ಅರೇಬಿಕ್ ಪರೀಕ್ಷೆಗಳು ನಡೆಯಿತು. ವಿದ್ಯಾರ್ಥಿಗಳು ಆತಂಕದಿಂದಲೇ ಬಂದು ಮೊದಲ ದಿನದ ಎಕ್ಸಾಂ ಬರೆದು ರಿಲ್ಯಾಕ್ಸ್ ಆದರು. ಮೊದಲ ದಿನದ ಪರೀಕ್ಷೆಯಲ್ಲಿ 96.87% ಹಾಜರಾತಿ ದಾಖಲಾಗಿದೆ. ಪರೀಕ್ಷೆ 5,09,085 ವಿದ್ಯಾರ್ಥಿಗಳು ನೋಂದಣಿ ಆಗಿದ್ದರು. ಇದರಲ್ಲಿ 4,93,132 ವಿದ್ಯಾರ್ಥಿಗಳು ಹಾಜರಾಗಿದ್ದರು. 15,953 ವಿದ್ಯಾರ್ಥಿಗಳು ಮೊದಲ ದಿನದ ಪರೀಕ್ಷೆಗೆ ಗೈರಾಗಿದ್ದರು. ಇದನ್ನೂ ಓದಿ: ರಾಜ್ಯ ಸರ್ಕಾರದ ಕುಸ್ತಿಯ ಗುದ್ದಾಟ ಬಜೆಟ್ ನಂತರ ಅಂತಿಮ ಘಟ್ಟಕ್ಕೆ ತಲುಪಲಿದೆ: ಬೊಮ್ಮಾಯಿ
ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬೆಂಗಳೂರಿನಲ್ಲೇ ಇದ್ದರೂ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ತೆರಳಿ ಶುಭಾಶಯ ಕೋರುವ ಕೆಲಸ ಮಾಡಲಿಲ್ಲ. ಮಧ್ಯಾಹ್ನ ಶಿಕ್ಷಕರ ಸಂಘದ ಸಮಾವೇಶದಲ್ಲಿ ಭಾಗಿಯಾಗಿದ್ದರು. ಸಚಿವರ ಈ ವರ್ತನೆಗೆ ವ್ಯಾಪಕ ವಿರೋಧಗಳು ವ್ಯಕ್ತವಾಗಿದೆ. ಇದನ್ನೂ ಓದಿ: ಆಂಧ್ರದ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ – 18 ಮಂದಿ ದುರ್ಮರಣ

