ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮದ (Male Mahadeshwara Wildlife Sanctuary) ಸಫಾರಿಯಲ್ಲಿ ಪ್ರಾಣಿಗಳು ದರ್ಶನ ನೀಡುತ್ತಿದ್ದು, ಸಫಾರಿಗರು ಸಖತ್ ಖುಷ್ ಆಗಿದ್ದಾರೆ.
ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಪಿ.ಜಿ. ಪಾಳ್ಯ ಸಫಾರಿಯಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಕರಿ ಚಿರತೆ ದರ್ಶನ ಕೊಟ್ಟಿತ್ತು. ಅದಾದ ಬಳಿಕ, ಸತತ ಎರಡು ದಿನ ಮತ್ತೆ ಬ್ಲ್ಯಾಕ್ ಫ್ಯಾಂಥರ್ ಕಂಡು ಪ್ರವಾಸಿಗರು ಪುಳಕಿತಗೊಂಡಿದ್ದರು. ಇದನ್ನೂ ಓದಿ: ಬೆಂಗಳೂರಿನ ಗ್ಯಾಲಕ್ಸ್ ಐ ಅಭಿವೃದ್ಧಿ ಪಡಿಸಿದ ವಿಶ್ವದ ಮೊದಲ OptoSAR ಉಪಗ್ರಹ ಉಡಾವಣೆ ಯಶಸ್ವಿ – ಪಾಕಿಸ್ತಾನ, ಚೀನಾಗೆ ತಲೆನೋವು ಯಾಕೆ?
ನಾಗರಹೊಳೆ ಸಫಾರಿಯಲ್ಲಿ ಮಾತ್ರ ಕರಿ ಚಿರತೆ ಕಾಣಿಸಿಕೊಳ್ಳುತ್ತಿತ್ತು. ಆದರೆ, ಕಳೆದ 4 ದಿನಗಳಿಂದ ಪಿ.ಜಿ. ಪಾಳ್ಯ ಸಫಾರಿಯಲ್ಲೂ ಕರಿ ಚಿರತೆ ದರ್ಶನ ನೀಡಿದ್ದರಿಂದ ಪ್ರವಾಸಿಗರು ಕರಿ ಚಿರತೆ ಜೊತೆ ಮತ್ತೊಂದು ಚಿರತೆ ಚಿನ್ನಾಟ ಆಡುತ್ತಿದ್ದ ದೃಶ್ಯವನ್ನು ಸಫಾರಿಗರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು.
ಕರಿ ಚಿರತೆ ಬಳಿಕ ಬಿಳಿ ಜಿಂಕೆ ಕಾಣಿಸಿಕೊಂಡಿದ್ದು, ಸಫಾರಿಗರು ರೋಮಾಂಚಿತರಾಗಿದ್ದಾರೆ. ಮಲೆ ಮಹದೇಶ್ವರ ವನ್ಯಜೀವಿಧಾಮದ ಹನೂರು ಬಫರ್ ಜೋನ್ ವಲಯದ ವ್ಯಾಪ್ತಿಯಲ್ಲಿ ಸಫಾರಿಗೆ ತೆರಳಿದ್ದ ವೇಳೆ ಬಿಳಿ ಜಿಂಕೆ ಕಂಡು ಪ್ರವಾಸಿಗರು ಪುಳಕಿತರಾಗಿದ್ದಾರೆ. ವನ್ಯಜೀವಿ ಸಫಾರಿಯಲ್ಲಿ ಆನೆ, ಹುಲಿ, ಕಾಡೆಮ್ಮೆಗಳನ್ನು ಕಣ್ತುಂಬಿಕೊಳ್ಳುತ್ತಿದ್ದ ಸಫಾರಿಗರು ಈಗ ಕರಿ ಚಿರತೆ, ಬಿಳಿ ಜಿಂಕೆಯಂತಹ ಅಪರೂಪದ ಸೈಟಿಂಗ್‌ಗೆ ಫಿದಾ ಆಗಿದ್ದಾರೆ. ಇದನ್ನೂ ಓದಿ: ಹಾರ್ಮುಜ್ ದಾಟಿದ 45,000 ಟನ್ ಎಲ್‌ಪಿಜಿ ಹೊತ್ತ ಭಾರತದ ‘ಸರ್ವಶಕ್ತಿ’ ಹಡಗು

