ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಹಾಗೂ ಮಾಜಿ ಸಚಿವ ಕೆ.ಎನ್ ರಾಜಣ್ಣ ನಡುವೆ ಪ್ರತಿಷ್ಠೆಯ ಕದನಕ್ಕೆ ಅಪೆಕ್ಸ್ ಬ್ಯಾಂಕ್ ಚುನಾವಣೆ (Apex Bank Election) ಸಾಕ್ಷಿಯಾಗುವ ಸಾಧ್ಯತೆ ಇದೆ.
ಮಾಜಿ ಸಚಿವ ಕೆ.ಎನ್ ರಾಜಣ್ಣ (KN Rajanna) ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಡಿಸಿಎಂ ಸಂಬಂಧಿ ಎಂಎಲ್‌ಸಿ ರವಿ ಅವರೂ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಡಿಕೆಶಿ ಆಪ್ತ ಶಿವಮೊಗ್ಗದ ಮಂಜುನಾಥ್ ಗೌಡ ಸಹಾ ನಾಮಪತ್ರ ಸಲ್ಲಿಸಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಕಾಲದಲ್ಲಿ ಅವ್ರೇ ಮಹಿಳಾ ಅಧಿಕಾರಿಗೆ ಹೆದರಿಸಿದ್ದರು: ಹೆಚ್.ಸಿ ಮಹದೇವಪ್ಪ
ಪ್ರತಿ ಡಿಸಿಸಿ ಬ್ಯಾಂಕ್‌ನಿಂದ ಓರ್ವ ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ ನೇಮಕ ಆಗಲಿದ್ದಾರೆ. ತುಮಕೂರು ಡಿಸಿಸಿ ಬ್ಯಾಂಕ್‌ನಿಂದ ಕೆ.ಎನ್ ರಾಜಣ್ಣ, ಬೆಂಗಳೂರು ಗ್ರಾಮಾಂತರ ಡಿಸಿಸಿ ಬ್ಯಾಂಕ್‌ನಿಂದ ಎಂಎಲ್‌ಸಿ ರವಿ, ಶಿವಮೊಗ್ಗದಿಂದ ಮಂಜುನಾಥ್ ಗೌಡ (Shivamogga Manjunath Gowda) ನಾಮಪತ್ರ ಸಲ್ಲಿಸಿದ್ದಾರೆ.

ನಿರ್ದೇಶಕ ಸ್ಥಾನಕ್ಕೆ ಒಟ್ಟು 28 ಮಂದಿ ನಾಮಪತ್ರ ಸಲ್ಲಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ ಕೆ.ಎನ್ ರಾಜಣ್ಣ ಸ್ಪರ್ಧೆ ಬಹುತೇಕ ಫಿಕ್ಸ್ ಆಗಿದೆ. ಡಿಸಿಎಂ ಬಣದಿಂದ ರವಿ ಅಥವಾ ಮಂಜುನಾಥ್ ಗೌಡ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ರಾಜಣ್ಣಗೆ ಕೌಂಟರ್ ಕೊಡಲು ಡಿಸಿಎಂ ಡಿಕೆಶಿ ಬಣ ಮುಂದಾಗಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಜೆಡಿಎಸ್ ಬಗ್ಗೆ ಪ್ರಿಯಾಂಕ್ ಖರ್ಗೆ ಸರ್ಟಿಫಿಕೇಟ್ ಕೊಡೋದು ಬೇಡ – ಹೆಚ್‌ಡಿಕೆ ವಾಗ್ದಾಳಿ
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ರಾಜಣ್ಣ ನಾವೂ ಒಮ್ಮೆ ಅಧ್ಯಕ್ಷರಾಗಬೇಕೆಂದು ಹಠ ಹಿಡಿದಿರುವ ರವಿ ಹಾಗೂ ಮಂಜುನಾಥಗೌಡ ಹೀಗಾಗಿ ಜಿದ್ದಾಜಿದ್ದಿನ ಸ್ಪರ್ಧೆಗೆ ಕಾರಣವಾಗುತ್ತಾ ಅಪೆಕ್ಸ್ ಬ್ಯಾಂಕ್ ಚುನಾವಣೆ? ಎಂಬ ಕುತೂಹಲ ಹೆಚ್ಚಿಸಿದೆ. ಇದನ್ನೂ ಓದಿ: ಫ್ರೀ ಗ್ಯಾರಂಟಿಯಿಂದ BJP ನೇತೃತ್ವದ ಮಧ್ಯಪ್ರದೇಶ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ – ಬಾಕಿ ಸಾಲ 4.64 ಲಕ್ಷ ಕೋಟಿಗೆ ಏರಿಕೆ!

