ಗೃಹಲಕ್ಷ್ಮಿ ಯೋಜನೆಗೆ ಜೀವಿತ ಪ್ರಮಾಣಪತ್ರ – ಹೊಸ ನಿಯಮಕ್ಕೆ ಆಶೋಕ್ ಆಕ್ರೋಶ

1 Min Read

ಬೆಂಗಳೂರು: ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಪಡೆಯಲು ಮನೆ ಒಡತಿಯರು ಬದುಕಿರೋ‌ ಸರ್ಟಿಫಿಕೇಟ್ (Life Certificate) ಕೊಡಬೇಕು ಎಂಬ ನಿಯಮ ಜಾರಿ ಮಾಡಲು ಮುಂದಾಗಿರೋ ಸರ್ಕಾರದ ನಡೆಗೆ ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಕಿಡಿಕಾರಿದ್ದಾರೆ.

ವಿಧಾನಸೌಧದಲ್ಲಿ ಈ ಬಗ್ಗೆ ‌ಪ್ರತಿಕ್ರಿಯೆ ನೀಡಿದ ಅವರು, ಈ ಸರ್ಕಾರ ಬಂದ ಮೇಲೆ 2 ಲಕ್ಷ ಕೋಟಿ ರೂ. ಸಾಲ ಮಾಡಿದೆ. ಈ ಬಜೆಟ್‌ಗೆ ಮೂರು ಲಕ್ಷ ಕೋಟಿ ರೂ. ಸಾಲ ಆಗುತ್ತೆ. ಅವರ ಬಳಿ ಹಣ ಇಲ್ಲ. ಈಗಾಗಲೇ ‌ರೇಷನ್ ಕಾರ್ಡ್ ಕಟ್ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ರೇಷನ್ ಕಾರ್ಡ್ ಕಟ್ ಮಾಡ್ತಾ ಇದ್ದಾರೆ. ಈ ಮೂಲಕ ಗ್ಯಾರಂಟಿ ಕಟ್ ಮಾಡೋಕೆ ಮುಂದಾಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಆರ್‌ಸಿಬಿ ಪಂದ್ಯ ಆಡಿಸಲು ನಮ್ಮ ಕಡೆಯಿಂದ ಕ್ಲಿಯರೆನ್ಸ್ ಸಿಕ್ಕಿಲ್ಲ: ಪರಮೇಶ್ವರ್

ಫುಟ್ ಪಾತ್ ವ್ಯಾಪಾರಿಗಳ ಕಾರ್ಡ್ ರದ್ದು ಮಾಡಿದ್ದಾರೆ. ‌ಕಾಂಗ್ರೆಸ್ ‌ತುಘಲಕ್ ಸರ್ಕಾರ ಮಾಡ್ತಿದೆ. ಇದು ಪಾಪರ್ ಸರ್ಕಾರ. ಮುಂದೆ ಇನ್ನು ‌ಕಟ್ ಕಟ್ ಕಟ್ ಮಾಡಿ ಬಡವರ ವಿರೋಧಿ ಆಗಿ ಕೆಲಸ ಮಾಡುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮೆಟ್ರೋ ಜಟಾಪಟಿ| ʻಕಾಂಗ್ರೆಸ್‌ ಸರ್ಕಾರ ಖಾಲಿ ಟ್ರಂಕ್‌ ಸರ್ಕಾರʼ ಟ್ರಂಕ್‌ ಹಿಡ್ಕೊಂಡು ಬಂದ ತೇಜಸ್ವಿ ಸೂರ್ಯ ವಶಕ್ಕೆ

Share This Article