Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 7 ವರ್ಷದಲ್ಲಿ ರಾಜ್ಯಕ್ಕೆ 59,274 ಕೋಟಿ ಜಿಎಸ್‌ಟಿ ನಷ್ಟ: ಬಜೆಟ್‌ನಲ್ಲಿ ಕೇಂದ್ರಕ್ಕೆ ತಿವಿದ ಸಿದ್ದರಾಮಯ್ಯ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | 7 ವರ್ಷದಲ್ಲಿ ರಾಜ್ಯಕ್ಕೆ 59,274 ಕೋಟಿ ಜಿಎಸ್‌ಟಿ ನಷ್ಟ: ಬಜೆಟ್‌ನಲ್ಲಿ ಕೇಂದ್ರಕ್ಕೆ ತಿವಿದ ಸಿದ್ದರಾಮಯ್ಯ

Districts

7 ವರ್ಷದಲ್ಲಿ ರಾಜ್ಯಕ್ಕೆ 59,274 ಕೋಟಿ ಜಿಎಸ್‌ಟಿ ನಷ್ಟ: ಬಜೆಟ್‌ನಲ್ಲಿ ಕೇಂದ್ರಕ್ಕೆ ತಿವಿದ ಸಿದ್ದರಾಮಯ್ಯ

Public TV
Last updated: February 16, 2024 2:22 pm
Public TV
Share
3 Min Read
SIDDARAMAIAH DK SURESH
SHARE

ಬೆಂಗಳೂರು: ಬಜೆಟ್‌ ಭಾಷಣದಲ್ಲೂ ಸಿಎಂ ಸಿದ್ದರಾಮಯ್ಯ (CM Siddaramaiah) ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದು ಅವೈಜ್ಞಾನಿಕವಾಗಿ ಜಿಎಸ್‌ಟಿ (GST) ಜಾರಿ ಮಾಡಿದ ಪರಿಣಾಮ ರಾಜ್ಯಕ್ಕೆ (Karnataka) ಕಳೆದ ಏಳು ವರ್ಷಗಳ ಅವಧಿಯಲ್ಲಿ ಒಟ್ಟು 59,274 ಕೋಟಿ ರೂ. ನಷ್ಟವಾಗಿದೆ ಎಂದು ಕಿಡಿಕಾರಿದ್ದಾರೆ.

ಬಜೆಟ್‌ ಭಾಷಣದಲ್ಲಿ ಏನಿದೆ?
ಕರ್ನಾಟಕ ರಾಜ್ಯವು ದೇಶದಲ್ಲಿ ಅತಿ ಹೆಚ್ಚು ಜಿಎಸ್‌ಟಿ ತೆರಿಗೆ ಸಂಗ್ರಹಿಸುವ 2ನೇ ರಾಜ್ಯವಾಗಿದ್ದು, 2022-23ಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷದಲ್ಲಿ ಜಿಎಸ್‌ಟಿ ತೆರಿಗೆ ಸಂಗ್ರಹಣೆಯು 18%ರಷ್ಟು ಹೆಚ್ಚಳ ಕಂಡಿದೆ. ಸ್ವಂತ ತೆರಿಗೆ ರಾಜಸ್ವವು ಹಿಂದಿನ ವರ್ಷಕ್ಕೆ ಹೋಲಿಸಿದರೆ 2023-24ರಲ್ಲಿ 12%ರಷ್ಟು ಬೆಳವಣಿಗೆಯನ್ನು ಸಾಧಿಸಲಿದೆ.

 

ಗ್ಯಾರಂಟಿ ಯೋಜನೆಗಳಿಂದ ಜನರ ಆದಾಯ ಪ್ರಮಾಣ ಹೆಚ್ಚಾಗಿ, ರಾಜ್ಯದ ಸರಕು ಮತ್ತು ಸೇವಾ ತೆರಿಗೆಯನ್ನು ಪರಿಚಯಿಸುವ ಮೂಲಕ ರಾಜ್ಯಗಳ ತೆರಿಗೆ ಸಂಗ್ರಹಣೆಯು 14% ರಷ್ಟು ಬೆಳವಣಿಗೆ ಹೊಂದಲಿದ್ದು, ಒಂದು ವೇಳೆ ಅಂದಾಜಿಗಿಂತ ಕಡಿಮೆ ಸಂಗ್ರಹವಾದಲ್ಲಿ, ಕೇಂದ್ರ ಸರ್ಕಾರದಿಂದ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರಗಳಿಗೆ ಭರವಸೆ ನೀಡಲಾಗಿತ್ತು. 14% ರಷ್ಟು ಬೆಳವಣಿಗೆ ದರದಂತೆ 2017 ರಿಂದ 2023-24ರವರೆಗೆ ರಾಜ್ಯದಲ್ಲಿ ಒಟ್ಟು 4,92,296 ಕೋಟಿ ರೂ.ಗಳ ಜಿಎಸ್‌ಟಿ ತೆರಿಗೆ ಸಂಗ್ರಹಣೆಯಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ವಾಸ್ತವಿಕವಾಗಿ ರಾಜ್ಯದಲ್ಲಿ 3,26,764 ಕೋಟಿ ರೂ.ಗಳ ಜಿಎಸ್‌ಟಿ ತೆರಿಗೆ ಸ್ವೀಕೃತವಾಗಿದೆ.

ಜಿಎಸ್‌ಟಿ ತೆರಿಗೆ ಸಂಗ್ರಹಣೆಯಲ್ಲಿನ ಕೊರತೆ 1,65,532 ಕೋಟಿ ರೂ.ಗಳಿಗೆ ಎದುರಾಗಿ, ಕೇಂದ್ರ ಸರ್ಕಾರವು ರಾಜ್ಯಕ್ಕೆ ಕೇವಲ 1,06,258 ಕೋಟಿ ರೂ. ಪರಿಹಾರವನ್ನು ಮಾತ್ರ ಬಿಡುಗಡೆ ಮಾಡಿದೆ. ಜಿಎಸ್‌ಟಿ ತೆರಿಗೆಯ ಈ ಅವೈಜ್ಞಾನಿಕ ಅನುಷ್ಠಾನದಿಂದ ರಾಜ್ಯಕ್ಕೆ ಕಳೆದ ಏಳು ವರ್ಷಗಳ ಅವಧಿಯಲ್ಲಿ ಒಟ್ಟು 59,274 ಕೋಟಿ ರೂ.ಗಳ ನಷ್ಟವಾಗಿರುತ್ತದೆ. ಇದನ್ನೂ ಓದಿ: Karnataka Budget: ರಾಜ್ಯದ ಗ್ರಾಮೀಣ ರಸ್ತೆಗಳಿನ್ನು ಪ್ರಗತಿ ಪಥ, ಕಲ್ಯಾಣ ಪಥ.!

 

15ನೇ ಹಣಕಾಸು ಆಯೋಗವು 2020-21ಕ್ಕೆ ಅನ್ವಯವಾಗುವಂತೆ ನೀಡಿದ್ದ ಮಧ್ಯಂತರ ವರದಿಯ ಶಿಫಾರಸ್ಸಿನಿಂದ ರಾಜ್ಯಕ್ಕಾದ ಅನ್ಯಾಯವನ್ನು ಸರಿಪಡಿಸುವಲ್ಲಿ ವಿಫಲವಾಯಿತು. ಹಿಂದಿನ ಹಿಂದಿನ ಸರ್ಕಾರವು ಕೈಚೆಲ್ಲಿ ಕೂತಿದ್ದರ ಪರಿಣಾಮವಾಗಿ ಅಂತಿಮ ವರದಿಯ ಶಿಫಾರಸ್ಸಿನಲ್ಲಿಯೂ ಸಹ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಹೆಚ್ಚು ನಷ್ಟ ಅನುಭವಿಸಬೇಕಾಯಿತು.

ರಾಜ್ಯದ ಜಿಎಸ್‌ಡಿಪಿ ಲೆಕ್ಕಾಚಾರ ಮಾಡುವ ವಿಧಾನದಲ್ಲಿ ಬದಲಾವಣೆ ಹಾಗೂ 1971ರ ಬದಲು 2011ರ ಜನಗಣತಿ ವರದಿಯ ಬಳಕೆಯಿಂದಾಗಿ ಅಭಿವೃದ್ಧಿಶೀಲ ರಾಜ್ಯಗಳಿಗೆ ಭಾರೀ ನಷ್ಟವುಂಟಾಗಿದೆ. 14ನೇ ಹಣಕಾಸು ಆಯೋಗ ಶಿಫಾರಸ್ಸು ನೀಡಿದ್ದ ಹಂಚಿಕೆಯ ಸೂತ್ರವನ್ನು ಪಾಲಿಸಿದ್ದರೆ ಕರ್ನಾಟಕ ರಾಜ್ಯಕ್ಕೆ 2,77,350 ಕೋಟಿ ರೂ.ಗಳ ತೆರಿಗೆ ಪಾಲು ಸ್ವೀಕೃತವಾಗುತ್ತಿತ್ತು. ಆದರೆ 15 ಹಣಕಾಸು ಆಯೋಗದ ಶಿಫಾರಸ್ಸಿನಿಂದ ರಾಜ್ಯಕ್ಕೆ 2,15,253 ಕೋಟಿ ರೂ.ಗಳು ಮಾತ್ರ ಹಂಚಿಕೆಯಾಗಲಿದೆ ಎಂದು ಸರ್ಕಾರ ಅಂದಾಜಿಸಲಾಗಿದೆ. 15ನೇ ಹಣಕಾಸು ಆಯೋಗದ ಆರು ವರ್ಷದ ಅವಧಿಯಲ್ಲಿ ಕೇಂದ್ರದಿಂದ ರಾಜ್ಯಗಳಿಗೆ ಹಂಚಿಕೆಯಾಗುವ ಒಟ್ಟು ತೆರಿಗೆ ಹಂಚಿಕೆಯಲ್ಲಿ, ರಾಜ್ಯಕ್ಕೆ 62,098 ಕೋಟಿ ರೂ.ಗಳಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

 

ಇದಲ್ಲದೆ15ನೇ ಹಣಕಾಸು ಆಯೋಗವು ಮೊದಲನೆಯ ವರದಿಯಲ್ಲಿ 2020-21ನೇ ವರ್ಷಕ್ಕೆ 5,495 ಕೋಟಿ ರೂ. ವಿಶೇಷ ಅನುದಾನ ಒದಗಿಸುವಂತೆ ಹಾಗೂ ಅಂತಿಮ ವರದಿಯಲ್ಲಿ ಬೆಂಗಳೂರಿನ ಅಭಿವೃದ್ಧಿಗೆ 6,000 ಕೋಟಿ ರೂ. ರಾಜ್ಯ ಕೇಂದ್ರಿತ ಅನುದಾನವನ್ನು ಶಿಫಾರಸ್ಸು ಮಾಡಿತ್ತು. ಆದರೆ ಈ ಶಿಫಾರಸ್ಸುಗಳನ್ನು ಕೇಂದ್ರ ಸರ್ಕಾರವು ತಿರಸ್ಕರಿಸಿರುತ್ತದೆ. ರಾಜ್ಯದಲ್ಲಿ ಡಬಲ್ ಇಂಜಿನ್ ಎಂದು ಹೇಳಿಕೊಳ್ಳುವ ಸರ್ಕಾರ ಇದ್ದರೂ ಸಹ ಕೇಂದ್ರದಿಂದ ಒಟ್ಟು 11,495 ಕೋಟಿ ರೂ.ಗಳ ವಿಶೇಷ ಅನುದಾನ ಪಡೆಯುವಲ್ಲಿ ಹಿಂದಿನ ಸರ್ಕಾರವು ಅಸಮರ್ಥವಾಗಿರುತ್ತದೆ.  ಇದನ್ನೂ ಓದಿ: ಕಿಕ್‍ ಪ್ರಿಯರಿಗೆ ಶಾಕ್- ಅಬಕಾರಿಗೆ ಬಿಗ್‌ ಟಾರ್ಗೆಟ್‌: ಹಿಂದಿನ ಬಜೆಟ್‌ನಲ್ಲಿ ಗುರಿ ಎಷ್ಟಿತ್ತು?

15ನೇ ಹಣಕಾಸು ಆಯೋಗಕ್ಕೆ ಸರಿಯಾದ ವಿಶ್ಲೇಷಣೆಯೊಂದಿಗೆ ಜ್ಞಾಪನಾ ಪತ್ರದ (Memorandum) ಮೂಲಕ ಹಕ್ಕೊತ್ತಾಯ ಮಂಡಿಸಿದ್ದರೂ, ರಾಜ್ಯಕ್ಕೆ ನ್ಯಾಯ ಸಿಕ್ಕಿರುವುದಿಲ್ಲ. ಈ ಅನ್ಯಾಯವು ಮರುಕಳಿಸದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಸಚಿವ ಸಂಪುಟದ ಮಾರ್ಗದರ್ಶನದೊಂದಿಗೆ ವಿಷಯ ತಜ್ಞರನ್ನು ಒಳಗೊಂಡ ತಾಂತ್ರಿಕಕೋಶವನ್ನು ರಚಿಸಿ ರಾಜ್ಯಕ್ಕೆ ಹೆಚ್ಚು ತೆರಿಗೆ ಪಾಲು ಮತ್ತು ಅನುದಾನಗಳನ್ನು ಪಡೆಯಲು ಒಂದು ಜ್ಞಾಪನಾ ಪತ್ರವನ್ನು ಸಿದ್ದಪಡಿಸಿ ಸಮರ್ಥವಾದ ಮತ್ತು ವೈಜ್ಞಾನಿಕವಾಗಿ ವಿಶ್ಲೇಷಿಸಿದ ಅಂಕಿಅಂಶಗಳೊಂದಿಗೆ 16ನೇ ಹಣಕಾಸು ಆಯೋಗಕ್ಕೆ ಸಲ್ಲಿಸಲು ನಿರ್ಧರಿಸಲಾಗಿದೆ.

ಕೇಂದ್ರ ಸರ್ಕಾರವು ಸೆಸ್ ಮತ್ತು ಸರ್‌ಚಾರ್ಜ್‌ಗಳನ್ನು ಹೆಚ್ಚಿಸುತ್ತಿದ್ದು, ಅವುಗಳನ್ನು ರಾಜ್ಯಗಳೊಂದಿಗೆ ಹಂಚಿಕೆ ಮಾಡುವುದಿಲ್ಲ. ಕೇಂದ್ರ ಸರ್ಕಾರವು ವಿಧಿಸುವ ಸೆಸ್ ಮತ್ತು ಸರ್‌ಚಾರ್ಜ್‌ಗಳು 2017-18 ರಿಂದ 2023-24ರ ಅವಧಿಯಲ್ಲಿ 153% ನಷ್ಟು ಹೆಚ್ಚಾಗಿರುತ್ತದೆ. ಸೆಸ್ ಮತ್ತು ಸರ್‌ಚಾರ್ಜ್‌ಗಳನ್ನು ರಾಜ್ಯಗಳೊಂದಿಗೆ ಹಂಚಿಕೆ ಮಾಡಿದ್ದರೆ, ರಾಜ್ಯಗಳಿಗೆ ಒಟ್ಟು 11,34,301 ಕೋಟಿ ರೂ.ಗಳು ಹಂಚಿಕೆಯಾಗುತ್ತಿತ್ತು. ಇದರಿಂದ ಕರ್ನಾಟಕ ರಾಜ್ಯಕ್ಕೆ ಮಾತ್ರ ಕಳೆದ ಏಳು ವರ್ಷಗಳ ಅವಧಿಯಲ್ಲಿ ಒಟ್ಟು 45,322 ಕೋಟಿ ರೂ.ಗಳ ನಷ್ಟ ಉಂಟಾಗಿದೆ.

TAGGED:budgetgstkarnatakasiddaramaiahಕರ್ನಾಟಕಕರ್ನಾಟಕ ಬಜೆಟ್ಜಿಎಸ್‍ಟಿಬಜೆಟ್ಸಿದ್ದರಾಮಯ್ಯ
Share This Article
Facebook Whatsapp Whatsapp Telegram

Cinema news

Rajath Kishan
ಬೆದರಿಕೆ, ನಿಂದನೆ ಆರೋಪ – ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ FIR
Bengaluru City Cinema Districts Karnataka Latest Sandalwood Top Stories
colors kannada New serial rani
ರಾಣಿ – ಅಮ್ಮ ಮಗಳ ಭಾವುಕ ಪಯಣ..!
Cinema Latest Sandalwood Top Stories
Vijay trisha
ಡಿವೋರ್ಸ್ ಕೇಸ್ ಮಧ್ಯೆ ಒಂದೇ ಬಣ್ಣದ ಉಡುಗೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ವಿಜಯ್-ತ್ರಿಶಾ
Cinema Latest National Top Stories
Samantha Ruth Prabhu
ಶಿವಮೊಗ್ಗ | ಹೊಸನಗರದಲ್ಲಿ ಹೋಳಿಯಾಡಿದ ಸಮಂತಾ
Cinema Latest Shivamogga South cinema Top Stories

You Might Also Like

donald trump
Latest

ಅಮೆರಿಕದ ರಕ್ಷಣಾ ಸಂಸ್ಥೆಗಳಿಗೆ ಶಸ್ತ್ರಾಸ್ತ್ರ ಉತ್ಪಾದನೆ ನಾಲ್ಕು ಪಟ್ಟು ಹೆಚ್ಚಿಸುವಂತೆ ಟ್ರಂಪ್ ಆದೇಶ

Public TV
By Public TV
6 minutes ago
Death threat to dog Satish FIR filed against Rajat chamarajpet police station
Crime

ಡಾಗ್‌ ಸತೀಶ್‌ಗೆ ಕೊಲೆ ಬೆದರಿಕೆ – ರಜತ್‌ ಮೇಲೆ ಬಿತ್ತು ಮತ್ತೊಂದು ಕೇಸ್‌

Public TV
By Public TV
1 hour ago
Priyank Kharge 1
Bidar

ಕೇಂದ್ರದ ಅನ್ಯಾಯದಿಂದ ಸಾಲದ ಹೊರೆ – ಸಾಲರಾಮಯ್ಯ ಎಂದ ಬಿಜೆಪಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು

Public TV
By Public TV
2 hours ago
Pak man convicted in US over Iran linked plot to kill Trump Biden faces life sentence
Crime

ಟ್ರಂಪ್, ಬೈಡೆನ್ ಹತ್ಯೆಗೆ ಇರಾನ್ ಜೊತೆ ಸಂಚು – ಪಾಕ್ ವ್ಯಕ್ತಿಗೆ ಅಮೆರಿಕದಲ್ಲಿ ಶಿಕ್ಷೆ

Public TV
By Public TV
2 hours ago
russia iran flag
Latest

ಅಮೆರಿಕ – ಇರಾನ್‌ ಯುದ್ಧಕ್ಕೆ ರಷ್ಯಾ ಎಂಟ್ರಿ?

Public TV
By Public TV
2 hours ago
IRIS Lavan
Latest

ದೇನಾ ಮುಳುಗುವ ಮೊದಲೇ ಇರಾನಿನ ಮತ್ತೊಂದು ನೌಕಾ ಹಡಗಿಗೆ ಆಶ್ರಯ ನೀಡಿತ್ತು ಭಾರತ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?