Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕನ್ನಡದಲ್ಲೂ ಸಿನಿಮಾ ರಿಲೀಸ್ ಆಗ್ತಿರೋದು ಖುಷಿ ಇದೆ: ಮುತ್ತಯ್ಯ ಮುರಳೀಧರನ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಕನ್ನಡದಲ್ಲೂ ಸಿನಿಮಾ ರಿಲೀಸ್ ಆಗ್ತಿರೋದು ಖುಷಿ ಇದೆ: ಮುತ್ತಯ್ಯ ಮುರಳೀಧರನ್

Cinema

ಕನ್ನಡದಲ್ಲೂ ಸಿನಿಮಾ ರಿಲೀಸ್ ಆಗ್ತಿರೋದು ಖುಷಿ ಇದೆ: ಮುತ್ತಯ್ಯ ಮುರಳೀಧರನ್

Public TV
Last updated: December 2, 2023 10:37 am
Public TV
Share
3 Min Read
Muttiah Muralitharan 3
SHARE

ವೈವಿಧ್ಯಮಯ ಮತ್ತು ಪ್ರಾದೇಶಿಕ ಪ್ರಾತಿನಿಧ್ಯವನ್ನು ಹೊಂದಿರುವ ಕಂಟೆಂಟ್‌ ಅನ್ನು ಜನರಿಗೆ ನೀಡುವಲ್ಲಿ JioCinema ಮುಂಚೂಣಿಯಲ್ಲಿದೆ. ಆ ಪ್ರಯತ್ನದ ಭಾಗವಾಗಿ ಇದೀಗ, ಮುತ್ತಯ್ಯ ಮುರಳೀಧರನ್‌ ಅವರ ಜೀವನವನ್ನಾಧರಿಸಿದ (Biopic), ಎಂ.ಎಸ್‌. ಶ್ರೀಪತಿ ನಿರ್ದೇಶಿಸಿರುವ ‘800’ ಸಿನಿಮಾ ಜಿಯೋ ಸಿನಿಮಾದಲ್ಲಿ ಬಿಡುಗಡೆಗೊಳ್ಳುತ್ತಿದೆ. ಇದೇ ಡಿಸೆಂಬರ್ 2ರಂದು ಒಟಿಟಿ ವೇದಿಕೆಯಲ್ಲಿ ಬಿಡುಗಡೆಗೊಳ್ಳುತ್ತಿರುವ ಈ ಸಿನಿಮಾ, ಶ್ರೀಲಂಕಾದ ಖ್ಯಾತ ಕ್ರಿಕೆಟ್ ಆಟಗಾರ ಮುತ್ತಯ್ಯ ಮುರಳೀಧರನ್ (Muttiah Muralitharan) ಅವರ ಬದುಕು ಮತ್ತು ಸಾಧನೆಗಳನ್ನು ಆಧರಿಸಿದ್ದು. ಟೆಸ್ಟ್‌ ಕ್ರಿಕೆಟ್‌ನಲ್ಲಿ 800 ವಿಕೆಟ್‌ಗಳನ್ನು ಪಡೆದುಕೊಂಡು ದಾಖಲೆ ನಿರ್ಮಿಸಿದ್ದ ಬೌಲರ್ ಬದುಕಿನ ತೆರೆ-ಮರೆಯ ಕಥೆಯನ್ನು ಹೇಳುವ ಈ ಸಿನಿಮಾ, ಕ್ರಿಕೆಟ್ ಪ್ರಿಯರಿಗಂತೂ ಮನರಂಜನೆಯ ಮೃಷ್ಟಾನ್ನವನ್ನೇ ಉಣಿಸುತ್ತದೆ.

Muttiah Muralitharan 4

ವಿವೇಕ್‌ ರಂಗಾಚಾರಿ ನಿರ್ಮಾಣದ ಈ ಸಿನಿಮಾ ತಮಿಳು, ತೆಲುಗು, ಮಲಯಾಳಂ, ಹಿಂದಿ, ಬೆಂಗಾಲಿ ಭಾಷೆಗಳ ಜೊತೆಗೆ ಕನ್ನಡದಲ್ಲಿಯೂ ವೀಕ್ಷಣೆಗೆ ಲಭ್ಯವಿರುವುದು ವಿಶೇಷ. ಸ್ಪಿನ್ನರ್ ಖ್ಯಾತ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಕ್ರಿಕೆಟ್‌ ಬದುಕಿನ ಸಾಧನೆಗಳನ್ನು ಹೇಳುವ ‘800’ ಸಿನಿಮಾ, ಅವರ ಖಾಸಗಿ ಬದುಕಿನ ಸಂಕಷ್ಟಗಳನ್ನೂ ನೋಡುಗರ ಎದುರಿಗೆ ತೆರೆದಿಡುತ್ತದೆ. ಹಲವು ಸಂಕಷ್ಟಗಳು, ವಿವಾದಗಳನ್ನು ಹಾದು ಕ್ರಿಕೆಟ್‌ ಜಗತ್ತಿನ ಲೆಜೆಂಡ್ ಆದ ಸ್ಪೂರ್ತಿಕಥೆಯನ್ನು ಹೇಳುತ್ತದೆ.  ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ, ಎಸ್ಟೆಟ್‌ ಕೆಲಸಗಾರರಾಗಿ ದಕ್ಷಿಣ ಭಾರತದಿಂದ ಶ್ರೀಲಂಕಾಗೆ ವಲಸೆ ಬರುವ ಮುತ್ತಯ್ಯ ಮುರಳೀಧರನ್ ಅವರ ತಾತನ ಕುಟುಂಬ ನಂತರ ಅಲ್ಲಿಯೇ ನೆಲೆಗೊಳ್ಳುತ್ತದೆ. ಬಾಲ್ಯದಿಂದಲೇ ಕ್ರಿಕೆಟ್ ವ್ಯಾಮೋಹ ಬೆಳೆಸಿಕೊಂಡಿದ್ದ ಮುತ್ತಯ್ಯ, ಬದುಕಿನುದ್ದಕ್ಕೂ ತಮ್ಮ ನೆಚ್ಚಿನ ಕ್ರೀಡೆಗೆ ಮತ್ತು ತಮ್ಮ ತಾಯ್ನೆಲಕ್ಕೆ ತೋರಿದ ಬದ್ಧತೆ ಅನನ್ಯವಾದದ್ದು. ವೈಯಕ್ತಿಕ ಬದುಕಿನ ಸಂಕಷ್ಟ-ಸವಾಲುಗಳ ನಡುವೆಯೂ ಕ್ರಿಕೆಟ್‌ ಜಗತ್ತಿನಲ್ಲಿ ಅವರು ನಿರ್ಮಿಸಿದ ದಾಖಲೆಗಳು, ಕ್ರೀಡಾಪ್ರೇಮಿಗಳಿಗಷ್ಟೇ ಅಲ್ಲ,ಸಾಧನೆಯ ಹಾದಿ ಹಿಡಿಯುವ ಹಂಬಲ ಇರುವ ಎಲ್ಲರಿಗೂ ಸ್ಫೂರ್ತಿಯನ್ನು ನೀಡುವಂಥದ್ದು.

Muttiah Muralitharan 1

‘800’ ಸಿನಿಮಾದಲ್ಲಿ, ತಮಿಳಿನ ಯುವನಟ ಮಧುರ್ ಮಿತ್ತಲ್, ಮುತ್ತಯ್ಯ ಮುರಳೀಧರನ್ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಮಹಿಮಾ ನಂಬಿಯತಾರ್, ನಾಸರ್, ಆರುಲ್‌ದಾಸ್‌ ಮುಖ್ಯಭೂಮಿಕೆಯಲ್ಲಿದ್ದಾರೆ. ಮುತ್ತಯ್ಯ ಮುರಳೀಧರನ್ ಪಾತ್ರಕ್ಕೆ ಜೀವತುಂಬುವ ಅವಕಾಶ ಸಿಕ್ಕಿರುವುದು ಮಧುರ್ ಮಿತ್ತಲ್ ಅವರಿಗೆ ಸಾಕಷ್ಟು ಖುಷಿಕೊಟ್ಟಿದೆ. ತಮ್ಮ ಸಿನಿಮಾ ಜಿಯೋ ಸಿನಿಮಾದಲ್ಲಿ ಪ್ರೀಮಿಯರ್ ಆಗುತ್ತಿರುವ ಕುರಿತೂ ಅವರು ಅಷ್ಟೇ ಎಕ್ಸೈಟ್ ಆಗಿದ್ದಾರೆ.

Muttiah Muralitharan 2

‘ನಾನು ಚಿಕ್ಕಂದಿನಿಂದಲೂ ಕ್ರಿಕೆಟ್‌ ಅಭಿಮಾನಿಯಾಗಿದ್ದವನು. ಮುರಳೀಧರನ್ ಅವರ ಅಮೋಘ ಆಟವನ್ನು ನೋಡುತ್ತಲೇ ಬೆಳೆದವನು. ಈಗ ಅವರದ್ದೇ ಪಾತ್ರಕ್ಕೆ ತೆರೆಯ ಮೇಲೆ ಜೀವ ತುಂಬುವ ಅವಕಾಶ ಸಿಕ್ಕಿರುವುದು ನಿಜಕ್ಕೂ ನನಗೆ ಸಂದ ಬಹುದೊಡ್ಡ ಸಮ್ಮಾನ. ಈ ಪಾತ್ರಕ್ಕೆ ಗಟ್ಟಿತನವಿದೆ. ಇದೊಂದು ಸತತ ಪರಿಶ್ರಮ ಮತ್ತು ಬದ್ಧತೆಯ ಬದುಕನ್ನು ಬದುಕಿದ ವ್ಯಕ್ತಿಯ ಪಾತ್ರ. ಒಬ್ಬ ಕ್ರಿಕೆಟರ್ ಆಗಿ ಮುರಳೀಧರನ್ ಕೋಟ್ಯಂತರ ಜನರನ್ನು ಪ್ರಭಾವಿಸಿದ್ದಾರೆ. ಇಂಥ ಸಾಧಕನ ಬದುಕನ್ನು ಜನರಿಗೆ  ಪರಿಚಯಿಸುವುದೂ ಅಷ್ಟೇ ಮುಖ್ಯ. ಈ ಕೆಲಸವನ್ನು ‘800’ ತುಂಬ ಪರಿಣಾಮಕಾರಿಯಾಗಿ ಮಾಡಿದೆ. ಈಗ ಈ ಸಿನಿಮಾ ಜಿಯೋ ಸಿನಿಮಾದಲ್ಲಿ ಬಿಡುಗಡೆಯಾಗುತ್ತಿರುವುದು ನಿಜಕ್ಕೂ ನನಗೆ ತುಂಬ ಖುಷಿಯ ಸಂಗತಿ’ ಎನ್ನುತ್ತಾರೆ ನಟ ಮಧುರ್ ಮಿತ್ತಲ್.

ಜಿಯೋ ಸಿನಿಮಾ ಒಟಿಟಿ ವೇದಿಕೆಯ ಮೂಲಕ ತಮ್ಮ ಜೀವನವನ್ನಾಧರಿಸಿದ ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿರುವುದು ಮುತ್ತಯ್ಯ ಮುರಳೀಧರನ್ ಅವರನ್ನೂ ರೋಮಾಂಚಿತಗೊಳಿಸಿದೆ. ‘ನನ್ನ ಬದುಕಿನ ಕಥೆ, ಸ್ಫೂರ್ತಿದಾಯಕ ಸಿನಿಮಾ ಆಗುತ್ತಿರುವುದು ನಿಜಕ್ಕೂ ನನ್ನಲ್ಲಿ ವಿನೀತಭಾವ ಹುಟ್ಟಿಸಿದೆ. ಇದಕ್ಕೆ ಕಾರಣರಾದವರಿಗೆ ನಾನು ಕೃತಜ್ಞನಾಗಿದ್ದೇನೆ. ಈ ಸಿನಿಮಾಗೆ ತುಂಬ ಒಳ್ಳೆಯ ಪ್ರತಿಸ್ಪಂದನ ಸಿಗುತ್ತದೆ ಎಂಬ ನಂಬಿಕೆ ನನಗಿದೆ. ತಮ್ಮ ಕನಸನ್ನು ನನಸಾಗಿಸಿಕೊಳ್ಳುವ ದಾರಿಯಲ್ಲಿರುವ ಅಸಂಖ್ಯ ಯವ ಪ್ರತಿಭಾವಂತರಿಗೆ ಈ ಸಿನಿಮಾ ಸ್ಫೂರ್ತಿ ನೀಡಲಿ ಎಂದು ನಾನು ಹಾರೈಸುತ್ತೇನೆ. ನನ್ನ ಪಾಲಿಗೆ ಕ್ರಿಕೆಟ್‌ ಎನ್ನುವುದು ಬದುಕಿನ ಕ್ರಮವೇ ಆಗಿತ್ತು. ದೇಶಕ್ಕಾಗಿ ಆಡುವ ಅವಕಾಶ ಸಿಕ್ಕಿದ್ದು ನನಗೆ ಸಂದ ದೊಡ್ಡ ಗೌರವ’’ ಎಂದು ಮುರಳೀಧರನ್‌ ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ. ಕ್ರಿಕೆಟ್ ಲೋಕದಲ್ಲಿ ದಂತಕಥೆಯಾದ ಮುತ್ತಯ್ಯ ಮುರಳೀಧರನ್ ಬದುಕಿನ ಕಥೆ, ‘800’ ಸಿನಿಮಾವನ್ನು ಡಿಸೆಂಬರ್ 2ರಿಂದ ಎಕ್ಸ್ ಕ್ಲ್ಯೂಸಿವ್ ಆಗಿ JioCinemaದಲ್ಲಿ ವೀಕ್ಷಿಸಬಹುದು.

TAGGED:800BiopicMuttiah Muralitharanಬಯೋಪಿಕ್ಮುತ್ತಯ್ಯ ಮುರಳೀಧರನ್
Share This Article
Facebook Whatsapp Whatsapp Telegram

Cinema news

Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories
Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema
vijay thalapathy
ನಟ ವಿಜಯ್‌ ವಿರುದ್ಧ ಪ್ರಕರಣ ದಾಖಲು
Cinema Latest South cinema Top Stories

You Might Also Like

karwar murder case accused
Court

ಅಳಿಯನ ಕೊಂದ ಮಾವನಿಗೆ ಜೀವಾವಧಿ ಶಿಕ್ಷೆ

Public TV
By Public TV
17 minutes ago
Shivamogga Court
Court

ಶಿವಮೊಗ್ಗ | ಲಂಚ ಪಡೆಯುವಾಗ ಸಿಕ್ಕಿಬಿದ್ದ ಅಧಿಕಾರಿಗೆ 2 ವರ್ಷ ಜೈಲು

Public TV
By Public TV
47 minutes ago
bjp and congress leaders canvass for davangere south constituency by election
Davanagere

ಉಪಚುನಾವಣಾ ಕಣದಲ್ಲಿ ಅಬ್ಬರದ ಪ್ರಚಾರ – ʻಕೈʼ, ಕಮಲ ನಾಯಕರಿಂದ ಮತಬೇಟೆ

Public TV
By Public TV
1 hour ago
Priyank Kharge 1
Bengaluru City

ಗ್ರಾಮ ಪಂಚಾಯಿತಿಗಳ ತೆರಿಗೆ ಸಂಗ್ರಹ ಸತತವಾಗಿ ಏರುಮುಖ; 1560.76 ಕೋಟಿ ರೂ. ಕರ ಸಂಗ್ರಹ: ಪ್ರಿಯಾಂಕ್‌ ಖರ್ಗೆ

Public TV
By Public TV
1 hour ago
Chalavadi Narayanswamy
Bagalkot

ಪ್ರತಿ ಹಳ್ಳಿಗೆ 5-10 ಲಕ್ಷ ಹಣ ಹಂಚುತ್ತಿರುವ ಕಾಂಗ್ರೆಸ್: ಛಲವಾದಿ ಆರೋಪ

Public TV
By Public TV
1 hour ago
Koppal Crime
Latest

21 ವರ್ಷದ ಬಳಿಕ ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?