ಕನ್ನಡತಿ, ಕರಾವಳಿ ಬ್ಯೂಟಿ ಅನುಷ್ಕಾ ಶೆಟ್ಟಿ (Anushka Shetty) ಇದೀಗ ಮತ್ತೆ ಚಿತ್ರಮಂದಿರಗಳಲ್ಲಿ ಮೋಡಿ ಮಾಡ್ತಿದ್ದಾರೆ. ಮಿಸ್ ಶೆಟ ಮಿಸ್ಟರ್ ಶೆಟ್ಟಿ ಸಿನಿಮಾ ಮೂಲಕ ನಟಿ ಕಮ್‌ಬ್ಯಾಕ್ ಆಗಿದ್ದಾರೆ. ಹೀಗಿರುವಾಗ ‘ಬಾಹುಬಲಿ’ (Bahubali) ಅಂತಹ ಸೂಪರ್ ಸಕ್ಸಸ್‌ಫುಲ್ ಸಿನಿಮಾ ಕೊಟ್ರು ನಟನೆಯಿಂದ ಸ್ವೀಟಿ ದೂರವಾಗಿದ್ದು ಯಾಕೆ? ಎಂಬುದನ್ನ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.

‘ಬಾಹುಬಲಿ’ (Bahubali) ಅಂಥಹಾ ದೊಡ್ಡ ಹಿಟ್ ಸಿನಿಮಾ ನೀಡಿದ ಬಳಿಕ ಅದರ ಲಾಭ ತೆಗೆದುಕೊಳ್ಳಬೇಕು ಎಂದು ಹಲವರು ಬಯಸುವುದು ಸಹಜ. ಆದರೆ ನನಗೆ ಅದರ ಅವಶ್ಯಕತೆ ಇರಲಿಲ್ಲ. ನನಗೆ ನನ್ನ ವೃತ್ತಿ ಜೀವನದಿಂದ ಒಂದು ಬ್ರೇಕ್ ಬೇಕಿತ್ತು ಹಾಗಾಗಿ ಬ್ರೇಕ್ ತೆಗೆದುಕೊಂಡೆ. ಬಳಿಕ ಮತ್ತೆ ಸಿನಿಮಾಗಳಲ್ಲಿ ನಟಿಸಬೇಕು ಎನಿಸಿದಾಗ ‘ನಿಶ್ಯಬ್ಧಂ’ ಮತ್ತು ಈಗ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾದಲ್ಲಿ ನಟಿಸಿದ್ದೇನೆ ಎಂದು ಅನುಷ್ಕಾ ಶೆಟ್ಟಿ ಮಾತನಾಡಿದ್ದಾರೆ.
ಸಿನಿಮಾಗಳಲ್ಲಿ ನಟಿಸಬೇಕು ಎನಿಸಿದಾಗ ನಾನು ಕತೆಗಳನ್ನು ಕೇಳುತ್ತೇನೆ. ಒಳ್ಳೆಯ ಕತೆ ಸಿಕ್ಕರೆ ಭಾರತದ ಯಾವುದೇ ಭಾಷೆಯಾಗಿದ್ರು ನಟಿಸಲು ಸಿದ್ಧ ಎಂದಿದ್ದಾರೆ. ಪ್ರಸ್ತುತ ನವೀನ್ ಪೋಲಿಶೆಟ್ಟಿ ಜೊತೆ ನಟಿಸಿರುವ ‘ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ’ (Miss Shetty Mr Polishetty) ಸಿನಿಮಾ ಜವಾನ್ (Jawan) ಚಿತ್ರದ ಮುಂದೆ ಸೆ.7ರಂದು ರಿಲೀಸ್ ಆಗಿದ್ದು, ಅನುಷ್ಕಾ ಚಿತ್ರಕ್ಕೆ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ.


