ಬಡ ಕುಟುಂಬಕ್ಕೆ 1 ಲಕ್ಷ ಘೋಷಣೆ ಮಾಡಿದ ಬೆನ್ನಲ್ಲೇ ವಿಜಯ್ ದೇವರಕೊಂಡ ಎಡವಟ್ಟು

Public TV
1 Min Read
samantha 1 11

ವಿಜಯ್ ದೇವರಕೊಂಡ-ಸಮಂತಾ (Samantha) ಆಕಾಶ ನೋಡುವಂತಾಗಿದೆ. ಇನ್ನೇನು ಗೆದ್ದೇ ಬಿಟ್ಟೆವು ಎಂದು ಆಕಾಶಕ್ಕೇರಿದ್ದ ಜೋಡಿಯನ್ನು ದೇವರು ನೆಲಕ್ಕೆ ಇಳಿಸಿದ್ದಾನೆ. ಏಕಾಏಕಿ ಏನಾಯಿತು ಖುಷಿ(Kushi Fim) ಸಿನಿಮಾಗೆ ? ಎಪ್ಪತ್ತು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದ ಚಿತ್ರ ಅದ್ಯಾಕೆ ಡಿಸಾಸ್ಟರ್ ಪಟ್ಟಿ ಸೇರಿತು? ಏನಿದರ ಹಿಂದಿನ ಹಕೀಕತ್ತು? ಇಲ್ಲಿದೆ ಮಾಹಿತಿ.

Samantha Ruth Prabhu with Vijay Devarakonda 1‘ಖುಷಿ’ ಸಿನಿಮಾ ಐದು ದಿನಗಳ ಹಿಂದೆ ದೇಶ ವಿದೇಶದಲ್ಲಿ ತೆರೆ ಕಂಡಿತ್ತು. ವಿಜಯ್(Vijay Devarakonda)- ಸಮಂತಾ ಜೋಡಿ ಪಕ್ಕಾ ಕ್ಲಿಕ್ ಆಗುತ್ತದೆ. ಇದನ್ನೇ ಎಲ್ಲರೂ ನಂಬಿದ್ದರು. ಸಮಂತಾ ಚಿಕಿತ್ಸೆಗಾಗಿ ಅಮೆರಿಕಾಕ್ಕೆ ಹೋಗಿದ್ದರು. ಅಲ್ಲೂ ಪ್ರಚಾರ ಮಾಡಿದರು. ಇಲ್ಲಿ ದೇವರಕೊಂಡ ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತಿದರು. ಹಾಡು, ಟ್ರೈಲರ್ ಎಲ್ಲಾ ಮೋಡಿ ಮಾಡಿತು. ಸಿನಿಮಾ ತೆರೆ ಕಂಡ ದಿನ ಮೂವತ್ತು ಕೋಟಿ ಬಾಚಿತು. ಈಗ ಎಪ್ಪತ್ತು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆಯಿತು. ಗೆದ್ದೇ ಬಿಟ್ಟಿದ್ದರು. ಸೋಮವಾರ (ಸೆ.4) ಮಕಾಡೆ ಮಲಗಿತಲ್ಲ. ಚಿತ್ರದ ಕಲೆಕ್ಷನ್ ಈಗ ಕೊಂಚ ಡಲ್ ಆಗಿದೆ.‌ ಇದನ್ನೂ ಓದಿ:ರಶ್ಮಿಕಾ, ಶ್ರೀಲೀಲಾ ಬಳಿಕ ತೆಲುಗಿನಲ್ಲಿ ಬಂಪರ್ ಆಫರ್ ಗಿಟ್ಟಿಸಿಕೊಂಡ ಆಶಿಕಾ ರಂಗನಾಥ್

ಇದು ಲವ್‌ಸ್ಟೋರಿ. ನಿರ್ದೇಶಕ ಅದಕ್ಕೆ ಹೊಸ ಬಣ್ಣ ಹಚ್ಚಿದ್ದು ಇಷ್ಟವಾಗಲಿಲ್ಲವಾ ? ವಿಜಯ್-ಸಮಂತಾ ಜೋಡಿಯನ್ನು ಜನ ಮೆಚ್ಚಲಿಲ್ಲವಾ? ಉತ್ತರ ಕಷ್ಟ. ಈಗ ಎಲ್ಲವೂ ಮುಗಿದಿದೆ. ಖುಷಿ ಅಟ್ಟರ್ ಫ್ಲಾಪ್ ಲಿಸ್ಟ್‌ಗೆ ಜಮೆಯಾಗಿದೆ. ಸಿನಿಮಾ ಗೆದ್ದಿತೆಂದು ವಿಜಯ್ ನೂರು ಬಡ ರೈತ ಕುಟುಂಬಕ್ಕೆ ತಲಾ 41 ಲಕ್ಷ ಹಂಚುವುದಾಗಿ ಘೋಷಿಸಿದ್ದರು. ಈಗ ಕ್ಲೈಮಾಕ್ಸ್ ಎಡವಟ್ಟಾಗಿದೆ. ಕೊಟ್ಟ ಮಾತು ಉಳಿಸಿಕೊಳ್ಳುತ್ತಾರಾ ರೌಡಿ ಬಾಯ್ ಎಂದು ಕಾಯಬೇಕಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article