ಬಳ್ಳಾರಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ರ್‍ಯಾಂಕ್ ಪಡೆಯುವುದು ಸಾಮಾನ್ಯ ವಿಷಯವಲ್ಲ. ಆದರೆ ಇಂದು ಕಾಲೇಜಿನಲ್ಲಿ ಪ್ರವೇಶಾತಿ ಸಿಕ್ಕರೆ ಸಾಕು ಪಿಯುಸಿ ಕಲಾ ಮಾಧ್ಯಮದಲ್ಲಿ ರ್‍ಯಾಂಕ್ ಕಟ್ಟಿಟ್ಟ ಬುತ್ತಿ.
ಹೌದು. ಪಿಯು ಬೋರ್ಡ್ ಇಂದು ಅತಿ ಹೆಚ್ಚು ಅಂಕಗಳಿಸಿದ ಟಾಪ್ 10 ವಿದ್ಯಾರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ 9 ಸ್ಥಾನಗಳನ್ನು ಈ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡಿರುವುದು ವಿಶೇಷ. 2006ರಲ್ಲಿ ಸಣ್ಣದಾಗಿ ಆರಂಭವಾದ ಈ ಕಾಲೇಜಿನಲ್ಲಿ ಈಗ ಪ್ರವೇಶ ಪಡೆಯಲು ಕ್ಯೂ ನಿಲ್ಲಬೇಕು. ಅಷ್ಟೊಂದು ದೊಡ್ಡಮಟ್ಟದಲ್ಲಿ ರಾಜ್ಯದಲ್ಲೇ ಹೆಸರು ಮಾಡಿದೆ ಈ ಕಾಲೇಜು.
Advertisement
Advertisement
2006ರಲ್ಲಿ ಆರಂಭವಾದ ಕಾಲೇಜಿನಲ್ಲಿ ಅಂದು ಕೇವಲ 80 ವಿದ್ಯಾರ್ಥಿಗಳಿದ್ದರು. ಆದರೆ ಇಂದು ಈ ಕಾಲೇಜಿನಲ್ಲಿ ಬರೋಬ್ಬರಿ 4500 ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನೂರಕ್ಕೂ ಹೆಚ್ಚು ನುರಿತ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಇಲ್ಲಿ ಬೋಧಿಸುತ್ತಿದ್ದಾರೆ.
Advertisement
ಕಳೆದ 5 ವರ್ಷದಿಂದ ತಪ್ಪದೇ ಕಲಾ ಹಾಗೂ ಶಿಕ್ಷಣ ವಿಭಾಗದಲ್ಲಿ ಈ ಕಾಲೇಜಿಗೆ ರ್‍ಯಾಂಕ್ ದೊರೆಯುತ್ತಿದೆ. ಈ ವರ್ಷವು ಸಹ ಕಲಾ ವಿಭಾಗದ ಮೊದಲ ಹತ್ತು ರ್ಯಾಂಕ್‍ಗಳಲ್ಲಿ ಈ ಕಾಲೇಜಿಗೆ 9 ರ್‍ಯಾಂಕ್ ದೊರೆತಿವೆ. ಈ ವರ್ಷ 594 ಅಂಕ ಪಡೆಯುವ ಮೂಲಕ ಇಂದು ಕಾಲೇಜಿನ ವಿದ್ಯಾರ್ಥಿನಿ ಕುಸುಮಾ ಉಜ್ಜನಿ ರಾಜ್ಯಕ್ಕೆ ಮೊದಲ ರ್‍ಯಾಂಕ್ ಪಡೆದಿದ್ದಾಳೆ. ಈ ವಿದ್ಯಾರ್ಥಿನಿ ತಂದೆಯ ಜೊತೆಗೆ ಪಂಕ್ಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಾ ವಿದ್ಯಾಭ್ಯಾಸ ಮಾಡಿ ರಾಜ್ಯಕ್ಕೆ ಮೊದಲ ರ್‍ಯಾಂಕ್ ಪಡೆದಿರುವುದು ಮತ್ತೊಂದು ವಿಶೇಷವಾಗಿದೆ.
Advertisement
ಟಾಪ್ – 10 ವಿದ್ಯಾರ್ಥಿಗಳು ಮತ್ತು ಅಂಕಗಳು
1. ಕುಸುಮಾ ಉಜ್ಜಿನಿ – 594
2. ಹೊಸಮನಿ ಚಂದ್ರಪ್ಪ- 591
3. ನಾಗರಾಜ್ – 591
4. ಓಮೇಶ್ – 591
5. ಸಚಿನ್ ಕೆಜಿ – 589
6. ಸುರೇಶ್ ಎಚ್ – 589
8. ಹರಿಜನ ಸೊಪ್ಪಿನ ಉಚ್ಚಂಗೆಮ್ಮ – 588
9. ಕೋನಾಪುರ ಮಠದ ನಂದೀಶ್ – 588.
10. ಅಂಗಡಿ ಸರಸ್ವತಿ -587
ಇಂದು ಪಿಯು ಕಾಲೇಜಿನ ಓದಿದ ನೇತ್ರಾವತಿ 579 ಅಂಕ ಪಡೆದು 2015ರಲ್ಲಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಪಡೆದಿದ್ದಳು. 2016ರಲ್ಲಿ ಅನಿತಾ ಪಿ 585 ಅಂಕ ಪಡೆದು ರಾಜ್ಯಕ್ಕೆ ಮೊದಲಿಗಳಾಗಿ ಹೊರಹೊಮ್ಮಿದ್ದಳು. 2017ರಲ್ಲಿ ಚೈತ್ರಾ 589 ಅಂಕ ಪಡೆದು ಫಸ್ಟ್ ರ್‍ಯಾಂಕ್ ಗಳಿಸಿದ್ದಳು. 2018ರಲ್ಲಿ ಸ್ವಾತಿ ಎಸ್ 595 ಅಂಕ ಪಡೆದು ಕಲಾವಿಭಾಗದಲ್ಲಿ ರಾಜ್ಯಕ್ಕೆ ಫಸ್ಟ್ ರ್‍ಯಾಂಕ್ ಪಡೆದಿದ್ದಳು.
ಈ ವರ್ಷ ಸೇರಿದಂತೆ ಕಳೆದ ಐದು ವರ್ಷದಿಂದ ಈ ಕಾಲೇಜಿನ ವಿದ್ಯಾರ್ಥಿನಿಯರೇ ರ್‍ಯಾಂಕ್ ಪಡೆದುಕೊಂಡೇ ಬರುತ್ತಿದ್ದಾರೆ. ನುರಿತ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ಪಾಠ ಮಾಡುವುದು ಹಾಗೂ ವಿದ್ಯಾರ್ಥಿಗಳಿಗೆ ಪರೀಕ್ಷೆ ಪೂರ್ವವಾಗಿ ಮೇಲಿನಿಂದ ಮೇಲೆ ಪೂರ್ವ ಪರೀಕ್ಷೆಗಳನ್ನು ನಡೆಸುವುದು. ರ್‍ಯಾಂಕ್ ಪಡೆಯಲು ಬರವಣಿಗೆ ಹೇಗಿರಬೇಕು ಅನ್ನೋ ಬಗ್ಗೆ ಮನದಟ್ಟು ಮಾಡಿಕೊಡುತ್ತಾರೆ. ಪಠ್ಯಕ್ಕೆ ಸಂಭದಿಸಿದ ವಿಷಯವಲ್ಲದೇ ಸಾಮಾನ್ಯ ಜ್ಞಾನದ ಬಗ್ಗೆಯೂ ವಿದ್ಯಾರ್ಥಿಗಳಿಗೆ ಪಾಠ ಮಾಡಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡುತ್ತಿರುವುದು ಕಾಲೇಜಿನ ವಿಶೇಷವಾಗಿದೆ.
ವಿದ್ಯಾರ್ಥಿಗಳಿಗೆ ರ್‍ಯಾಂಕ್ ಕೊಡಿಸುವುದರ ಜೊತೆ ಬಡ ವಿದ್ಯಾರ್ಥಿಗಳಿಗೂ ಸಹ ಈ ಕಾಲೇಜಿನಲ್ಲಿ ಹಲವರಿಗೆ ಉಚಿತವಾಗಿ ಪ್ರವೇಶಾತಿ ನೀಡಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿದೆ.