Bengaluru CityCinemaKarnatakaLatestMain PostSandalwoodSouth cinema

68ನೇ ರಾಷ್ಟ್ರ ಪ್ರಶಸ್ತಿ ಪಡೆದ ಸ್ಯಾಂಡಲ್‌ವುಡ್ ತಾರೆಯರು

68ನೇ ಸಾಲಿನ ರಾಷ್ಟ್ರ ಪ್ರಶಸ್ತಿ (68th National Film Awards) ಪಡೆಯಲಿರುವ ಪ್ರತಿಭಾನ್ವಿತರ ಪಟ್ಟಿಯನ್ನ ಈ ಹಿಂದೆಯೇ ಬಿಡುಗಡೆ ಮಾಡಲಾಗಿತ್ತು. ನಿನ್ನೆ (ಸೆ.30) ನವದೆಹಲಿಯ ವಿಗ್ಯಾನ್ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಜೇತರಿಗೆ ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ನಮ್ಮ ಕನ್ನಡದ ಪ್ರತಿಭಾನ್ವಿತ ಕಲಾವಿದರು ಕೂಡ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದಾರೆ.

68ನೇ ಚಲನಚಿತ್ರ ರಾಷ್ಟ್ರ ಪ್ರಶಸ್ತಿ ಇಂದು ನವದೆಹಲಿಯಲ್ಲಿ (New Dehli) ಪ್ರದಾನ ಮಾಡಲಾಯಿತು. ಭಿನ್ನ ಕಥಾಹಂದರ ಹೊಂದಿರುವ ಕನ್ನಡದ `ಡೊಳ್ಳು'(Dollu)  ಚಿತ್ರಕ್ಕಾಗಿ ಪವನ್ ಒಡೆಯರ್ ಮತ್ತು ಸಾಗರ್ ಪುರಾಣಿಕ್, ಉತ್ತಮ ಸಿನಿಮಾಗಾಗಿ `ತಲೆದಂಡ’ (Thaledanda Film) ಚಿತ್ರ, ಸಾಂಸ್ಕೃತಿಕ ವಿಭಾಗದಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶನದ `ನಾದದ ನವನೀತ’ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ಇದನ್ನೂ ಓದಿ:ಐಶ್ವರ್ಯ ಪಿಸ್ಸೆ ನಂತರ ದೀಪಿಕಾ ದಾಸ್ ಅಂದ್ರೆ ನನಗಿಷ್ಟ ಎಂದ ಸೈಕ್ ನವಾಜ್

ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನ ತಮಿಳು ಚಿತ್ರ `ಸೂರರೈ ಪೋಟ್ರು’ (Sorarai Potru) ಲಭಿಸಿದೆ. ಇನ್ನು ಬಾಲಿವುಡ್ ನಟ ಅಜಯ್ ದೇವಗನ್ (Ajay Devagun), ಕಾಲಿವುಡ್ ನಟ ಸೂರ್ಯ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಿ ಗೌರವಿಸಲಾಯ್ತು. `ಸೂರರೈ ಪೋಟ್ರು’ ಚಿತ್ರದ ನಟನೆಗಾಗಿ ಅಪರ್ಣಾ ಬಾಲಮುರಳಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಿದ್ದಾರೆ. ಸಂಗೀತ ಸಂಯೋಜಕ-ಚಲನಚಿತ್ರ ನಿರ್ಮಾಪಕ ವಿಶಾಲ್ ಭಾರದ್ವಾಜ್ ಅವರು `1232 ಕೆಎಂ’ ಸಾಕ್ಷ್ಯಚಿತ್ರದಲ್ಲಿ `ಮರೇಂಗೆ ತೋ ವಹಿನ್ ಜಾ ಕರ್’ ಹಾಡಿಗಾಗಿ ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನ ಪಡೆದರು.

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಹೀಗಿದೆ:

ಅತ್ಯುತ್ತಮ ಪರಿಸರ ಸಂರಕ್ಷಣಾ ಚಿತ್ರ: ತಲೆದಂಡ (ಕನ್ನಡ)

ವಿಶಿಷ್ಟ ಕಥಾಹಂದರ ಸಿನಿಮಾ: ಡೊಳ್ಳು (ಕನ್ನಡ)

ಸಾಂಸ್ಕೃತಿಕ ವಿಭಾಗದ ಸಿನಿಮಾ: ನಾದದ ನವನೀತ (ಕನ್ನಡ)

ಅತ್ಯುತ್ತಮ ನಟ: ಅಜಯ್ ದೇವಗನ್ ಮತ್ತು ಸೂರ್ಯ

ಅತ್ಯುತ್ತಮ ನಟಿ: ಅಪರ್ಣಾ ಬಾಲಮುರಳಿ

ಅತ್ಯುತ್ತಮ ಕನ್ನಡ ಸಿನಿಮಾ: ಡೊಳ್ಳು

ಅತ್ಯುತ್ತಮ ಕಥಾಚಿತ್ರ: ಸೂರರೈ ಪೋಟ್ರು

ಅತ್ಯುತ್ತಮ ಜನಪ್ರಿಯ ಚಿತ್ರ: ತಾನಾಜಿ

ಅತ್ಯುತ್ತಮ ನಿರ್ದೇಶಕ: ಸಚ್ಚಿದಾನಂದನ್

ಅತ್ಯುತ್ತಮ ಸಿನಿಮಾಸ್ನೇಹಿ ರಾಜ್ಯ: ಮಧ್ಯ ಪ್ರದೇಶ

ಅತ್ಯುತ್ತಮ ಆಡಿಯೋಗ್ರಫಿ: ಡೊಳ್ಳು ಕನ್ನಡ ಸಿನಿಮಾ

ಅತ್ಯುತ್ತಮ ಚಿತ್ರಕಥೆ: ಶಾಲಿನಿ ಉಷಾ ನಾಯರ್, ಸುಧಾ ಕೊಂಗರು (ಸೂರರೈ ಪೋಟ್ರು)

ಅತ್ಯುತ್ತಮ ಹಿನ್ನೆಲೆ ಗಾಯಕಿ: ನಂಚಮ್ಮ (ಅಯ್ಯಪ್ಪನುಂ ಕೋಶಿಯುಂ)

ಅತ್ಯುತ್ತಮ ಹಿನ್ನೆಲೆ ಗಾಯಕ: ರಾಹುಲ್ ದೇಶಪಾಂಡೆ (ಮಿ ವಸಂತ್ ರಾವ್)

ಅತ್ಯುತ್ತಮ ಮಕ್ಕಳ ಸಿನಿಮಾ: ಸುಮಿ (ಮರಾಠಿ)

Live Tv

Leave a Reply

Your email address will not be published. Required fields are marked *

Back to top button