ಬೆಂಗಳೂರು: 11 ವರ್ಷದ ಬಾಲಕಿಯ ಮೇಲೆ 65 ವರ್ಷದ ವೃದ್ಧನೊಬ್ಬ ಅತ್ಯಾಚಾರಕ್ಕೆ ಯತ್ನಿಸಿರುವ ಅಮಾನವೀಯ ಘಟನೆ ನಗರದ ಹೊರವಲಯದ ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
Advertisement
65 ವರ್ಷದ ನಾಗಪ್ಪ ಎಂಬಾತನೇ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕ ವೃದ್ಧ. ಎರಡು ದಿನಗಳ ಹಿಂದೆ ನಾಗಪ್ಪ ತನ್ನ ಪಕ್ಕದ ಮನೆಯ ಬಾಲಕಿಗೆ ಇಟ್ಟಿಗೆಗಳನ್ನು ಎತ್ತಲು ಸಹಾಯ ಮಾಡುವಂತೆ ನಟಿಸಿ ಶೌಚಾಲಯದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
Advertisement
Advertisement
ಈ ವೇಳೆ ಭಯಬೀತಳಾದ ಬಾಲಕಿ ಜೋರಾಗಿ ಕಿರುಚಿಕೊಂಡಿದ್ದಾಳೆ. ಕೂಡಲೇ ನೆರೆಹೊರೆಯವರು ಬಾಲಕಿಯನ್ನು ರಕ್ಷಿಸಿದ್ದಾರೆ. ಗ್ರಾಮದಲ್ಲಿ 2 ದಿನಗಳ ಕಾಲ ರಾಜಿ-ಪಂಚಾಯ್ತಿ ನಡೆಸಲಾಗಿದೆ. ಪಂಚಾಯ್ತಿ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಬಾಲಕಿಯ ಪೋಷಕರು ಪೊಲೀಸ್ ಠಾಣೆಯಲ್ಲಿ ನಾಗಪ್ಪನ ವಿರುದ್ಧ ದೂರು ದಾಖಲಿಸಿದ್ದಾರೆ.
Advertisement
ಇದೀಗ ಪೊಲೀಸರು ಆರೋಪಿ ನಾಗಪ್ಪನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಾಗಪ್ಪನ ವಿರುದ್ಧ ಪೋಕ್ಸೊ ಕಾಯ್ದೆಯಡಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿ ನಾಗಪ್ಪನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.