ಅಗರ್ತಲಾ: ತ್ರಿಪುರದ ಭಾರತ-ಬಾಂಗ್ಲಾದೇಶ (India – Bangladesh) ಅಂತರರಾಷ್ಟ್ರೀಯ ಗಡಿಯಲ್ಲಿ ಇಬ್ಬರು ಶಂಕಿತ ಬಾಂಗ್ಲಾದೇಶಿ ಕಳ್ಳಸಾಗಣೆದಾರರನ್ನು ಗಡಿ ಭದ್ರತಾ ಪಡೆಯ (BSF) ಸಿಬ್ಬಂದಿ ಹೊಡೆದುರುಳಿಸಿದ್ದಾರೆ.
ಭದ್ರತಾ ಪಡೆಗಳ ದಾಳಿಗೆ ಬಲಿಯಾದವರನ್ನು ನಬೀರ್ ಹುಸೇನ್ (40) ಮತ್ತು ಎಂಡಿ ಮುರ್ಸಲಿನ್ (22) ಎಂದು ಗುರುತಿಸಲಾಗಿದೆ. ಬಿಎಸ್‌ಎಫ್ ಪಡೆಗಳು ಗಸ್ತಿನಲ್ಲಿದ್ದಾಗ ಶಂಕಿತ ಬಾಂಗ್ಲಾದೇಶಿ ಕಳ್ಳಸಾಗಣೆದಾರರ ಗುಂಪು ಕಳ್ಳಸಾಗಣಿಕೆ ಮಾಡುತ್ತಿರುವುದು ಪತ್ತೆಯಾಗಿತ್ತು. ಈ ವೇಳೆ ಗಡಿಯ ಕಡೆಗೆ ಹೋಗದಂತೆ ಭದ್ರತಾ ಪಡೆ ಸಿಬ್ಬಂದಿ ಎಚ್ಚರಿಕೆ ನಿಡಿದರು. ಆದರೂ ಎಚ್ಚರಿಕರಯನ್ನು ನಿರ್ಲಕ್ಷಿಸಿ ಕಳ್ಳಸಾಗಣಿಕೆ ದಾರರು ಗಡಿಯ ಕಡೆ ಸಾಗಿದ್ದರು. ಅಲ್ಲದೇ ಬಿಎಸ್‌ಎಫ್ ಸಿಬ್ಬಂದಿಯ ಮೇಲೆ ಕಲ್ಲು ಮತ್ತು ಇಟ್ಟಿಗೆಗಳನ್ನು ಎಸೆದಿದ್ದಾರೆ. ಇದನ್ನೂ ಓದಿ: ಪ್ರೀತಿಸಿದವನೊಂದಿಗೆ ಮದುವೆಯಾಗಲು ಕುಟುಂಬಸ್ಥರ ವಿರೋಧ – ಯುವತಿ ಆತ್ಮಹತ್ಯೆ
ಆರಂಭದಲ್ಲಿ ಸಂಯಮದಿಂದ ನಡೆದುಕೊಂಡ ಭದ್ರತಾ ಪಡೆ ಸಿಬ್ಬಂದಿ, ಪರಿಸ್ಥಿತಿ ಕೈಮೀರಿದಾಗ ಆತ್ಮರಕ್ಷಣೆಗಾಗಿ ಕೆಲವು ಸುತ್ತು ಗುಂಡು ಹಾರಿಸಿದರು ಇದರಿಂದಾಗಿ ಇಬ್ಬರು ಗಾಯಗೊಂಡರು. ಗಾಯಾಳುಗಳನ್ನು ತಕ್ಷಣ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು. ಅಲ್ಲಿ ವೈದ್ಯರು ಇಬ್ಬರೂ ಸಾವನ್ನಪ್ಪಿದ್ದನ್ನು ದೃಢಪಡಿಸಿದ್ದಾರೆ.
ಮರಣೋತ್ತರ ಪರೀಕ್ಷೆ ನಡೆಸಿ ಶವಗಳನ್ನು ಗಡಿಯಲ್ಲಿ ಎರಡೂ ದೇಶಗಳ ಅಧಿಕಾರಿಗಳ ಸಮ್ಮುಖದಲ್ಲಿ ಔಪಚಾರಿಕವಾಗಿ ಬಾಂಗ್ಲಾದೇಶದ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಈ ಘಟನೆಯು ಭಾರತ-ಬಾಂಗ್ಲಾದೇಶ ಗಡಿಯಲ್ಲಿ ನಿರಂತರ ಭದ್ರತಾ ಸವಾಲುಗಳನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. 4,000 ಕಿ.ಮೀ. ಉದ್ದದ ಭಾರತ-ಬಾಂಗ್ಲಾದೇಶ ಗಡಿಯಲ್ಲಿ – ನೆರೆಯ ದೇಶದೊಂದಿಗೆ ತ್ರಿಪುರ ಹಂಚಿಕೊಂಡಿರುವ 856 ಕಿ.ಮೀ. ಪ್ರದೇಶ ಸೇರಿದಂತೆ – ಗಡಿ ಕಣ್ಗಾವಲು ಮತ್ತು ವ್ಯಾಪಕ ಬೇಲಿಯನ್ನು ಬಲಪಡಿಸಲಾಗಿದೆ. ಅದರ ಹೊರತಾಗಿಯೂ ಒಳನುಸುಳುವಿಕೆ, ಮಾನವ ಕಳ್ಳಸಾಗಣೆ ಮತ್ತು ಮಾದಕ ದ್ರವ್ಯ, ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ನಡೆಯುತ್ತಲೇ ಇದೆ. ಇದನ್ನೂ ಓದಿ: ತಮ್ಮನ ʻಪ್ರೀತಿʼಗೆ ಅಣ್ಣನಿಗೆ ಶಿಕ್ಷೆ- ಅರ್ಚಕನ ಕಿಡ್ನಾಪ್, ಅಮಾನುಷ ಹಲ್ಲೆ!

