Connect with us

Bengaluru City

ಕೊರೊನಾ ಸ್ಫೋಟ – ರಾಜ್ಯದಲ್ಲಿ 13,493 ಸಕ್ರಿಯ ಪ್ರಕರಣಗಳು

Published

on

– ಇಂದು 1,715 ಪಾಸಿಟಿವ್, ಇಬ್ಬರು ಸಾವು
– ಬೆಂಗಳೂರು 1,039, ಉಡುಪಿ 170 ಯಾವ ಜಿಲ್ಲೆಯಲ್ಲಿ ಎಷ್ಟು?

ಬೆಂಗಳೂರು: ಕೊರೊನಾ ಪ್ರಕರಣಗಳ ಸಂಖ್ಯೆ ಎರಡು ಸಾವಿರದ ಸನಿಹಕ್ಕೆ ತಲುಪಿದ್ದು, ಇಂದು 1,715 ಜನಕ್ಕೆ ಸೋಂಕು ತಗುಲಿದೆ. ಮಹಾಮಾರಿ ಇಬ್ಬರನ್ನ ಬಲಿ ಪಡೆದುಕೊಂಡಿದ್ದು, ಇದುವರೆಗೂ 12,464 ಜನರು ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ 13,493 ಸಕ್ರಿಯ ಪ್ರಕರಣಗಳಿದ್ದು, 137 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 9,70,202ಕ್ಕೆ ಏರಿಕೆಯಾಗಿದೆ. ಇಂದು 1,048 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.1.68 ಮತ್ತು ಮರಣ ಪ್ರಮಾಣ ಶೇ.0.11ರಷ್ಟಿದೆ. ಇಂದು 1,01,840 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಕೊಪ್ಪಳದಲ್ಲಿಂದು ಯಾವುದೇ ಕೊರೊನಾ ಪ್ರಕರಣಗಳು ದಾಖಲಾಗಿಲ್ಲ. ಬೆಂಗಳೂರು ನಗರ ಬಳಿಕ ಉಡುಪಿಯಲ್ಲಿ ಅತ್ಯಧಿಕ ಕೊರೊನಾ ಪ್ರಕರಣಗಳು ದಾಖಲಾಗಿವೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 1 ಬಳ್ಳಾರಿ 11, ಬೆಳಗಾವಿ 20, ಬೆಂಗಳೂರು ಗ್ರಾಮಾಂತರ 32, ಬೆಂಗಳೂರು ನಗರ 1,039, ಬೀದರ್ 61, ಚಾಮರಾಜನಗರ 4, ಚಿಕ್ಕಬಳ್ಳಾಪುರ 9, ಚಿಕ್ಕಮಗಳೂರು 5, ಚಿತ್ರದುರ್ಗ 3, ದಕ್ಷಿಣ ಕನ್ನಡ 54, ದಾವಣಗೆರೆ 8, ಧಾರವಾಡ 24, ಗದಗ 5, ಹಾಸನ 40, ಹಾವೇರಿ 1, ಕಲಬುರಗಿ 41, ಕೊಡಗು 9, ಕೋಲಾರ 10, ಕೊಪ್ಪಳ 0, ಮಂಡ್ಯ 15, ಮೈಸೂರು 70, ರಾಯಚೂರು 6, ರಾಮನಗರ 1, ಶಿವಮೊಗ್ಗ 4, ತುಮಕೂರು 38, ಉಡುಪಿ 170, ಉತ್ತರ ಕನ್ನಡ 11, ವಿಜಯಪುರ 20 ಮತ್ತು ಯಾದಗಿರಿಯಲ್ಲಿ 3 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Click to comment

Leave a Reply

Your email address will not be published. Required fields are marked *