ಬೆಂಗಳೂರು: ಇಲ್ಲಿನ ಸಂಜಯ ನಗರದಲ್ಲಿ (Sanjay Nagar) ಡಿಜಿಟಲ್ ಕ್ರಿಪ್ಟೋ ಕರೆನ್ಸಿ (Crypto Surrency) ಎಕ್ಸ್‌ಚೇಂಜ್ ಹೆಸರಲ್ಲಿ 17.6 ಲಕ್ಷ ರೂ. ದರೋಡೆ ನಡೆದಿದೆ. ಈ ಸಂಬಂಧ ಪೊಲೀಸರು ಇಬ್ಬರು ಕಾಶ್ಮೀರ ಪ್ರಜೆಗಳು ಸೇರಿ 12 ಜನರನ್ನು ಬಂಧಿಸಿದ್ದಾರೆ.
ಮುಜಾಮಿಲ್(23), ಶೋಯೆಬ್(20), ಕರೀಂ(31), ವಾಸೀಂ(40), ಮೊಹಮ್ಮದ್ ಇಸ್ಮೈಲ್(29), ರೆಹಾನ್(27), ಆಯನ್(21), ಅಖಿಲ್ ಮೊಹಮ್ಮದ್(26), ತೌಸಿಫ್(32). ಲಿಯಾಕತ್ ಶರೀಫ್(33), ಅಫ್ಜಲ್ ಖಾನ್(27), ಇಮ್ರಾನ್ ಪಾಷಾ(40) ಬಂಧಿತರು. ಇದನ್ನೂ ಓದಿ: 72,186 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಅಸ್ತು – 6 ತಿಂಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ
ದೂರುದಾರ ವಿಶ್ವಾಸ್ ಕಾಫಿ ಶಾಪ್ ಆರಂಭಿಸಲು ತಯಾರಿ ನಡೆಸುತ್ತಿದ್ದರು. ಇದಕ್ಕಾಗಿ ಕಿಚನ್ ಟೈಲ್ಸ್ ಹಾಗೂ ಕಟ್‌ಲೇರಿ ವಸ್ತುಗಳನ್ನ ಹುಡುಕಾಡುತ್ತಿದ್ದರು. ಈ ವೇಳೆ ಆರೋಪಿಗಳು ಈ ವಸ್ತುಗಳನ್ನು ಚೀನಾ, ಜಪಾನ್‌ನಲ್ಲಿ ಖರೀದಿಸಿದರೆ ಕಡಿಮೆಗೆ ಸಿಗಲಿದೆ ಎಂದು ನಂಬಿಸಿದ್ರು. ಅದರಂತೆ ಕಳೆದ 9ನೇ ತಾರೀಖು ಹಣ ಎಕ್ಸ್‌ಚೇಂಜ್‌ಗೆ ತಂದಿದ್ದ ವೇಳೆ ಆರೋಪಿಗಳು ಬೈಕ್‌ನಲ್ಲಿ ಬಂದು ಹಣ ಕಸಿದುಕೊಂಡು ಎಸ್ಕೇಪ್ ಆಗಿದ್ದರು.
ಈ ಸಂಬಂಧ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಶ್ವಾಸ್ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು 12 ಜನರನ್ನು ಬಂಧಿಸಿದ್ದಾರೆ. ಈ ವೇಳೆ 13.90 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ 6 ದ್ವಿಚಕ್ರ ವಾಹನ, 1 ಕಾರು ಹಾಗೂ 13 ಮೊಬೈಲ್‌ಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.ಇದನ್ನೂ ಓದಿ: ಗೋವಾ ಬೀಚ್‌ನಲ್ಲಿ ಕೊಚ್ಚಿ ಹೋದ ಕನ್ನಡಿಗ – ಬಂಡೆ ಮೇಲೆ ಕುಳಿತಿದ್ದಾಗ ಅಲೆಗಳ ರಭಸಕ್ಕೆ ಮುಳುಗಿ ಸಾವು
