DistrictsKarnatakaKodaguLatestMain Post

ಕೊಡಗು ಜಿಲ್ಲೆಯಲ್ಲಿ ಬರೋಬ್ಬರಿ 103 ಕೆರೆಗಳ ಒತ್ತುವರಿ ಜಿಲ್ಲಾಡಳಿತದ ಸರ್ವೇ ಕಾರ್ಯದಲ್ಲಿ ಬಯಲು

ಮಡಿಕೇರಿ: ಪ್ರಕೃತಿಯ ತವರು ಪ್ರವಾಸಿಗರ ಹಾಟ್‌ಸ್ಪಾಟ್ ಎಂದು ಕರೆಸಿಕೊಳ್ಳುವ ಕೊಡಗು ಜಿಲ್ಲೆಯಲ್ಲೇ ಕೆರೆ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದು ಇದೀಗ ಜಿಲ್ಲಾಡಳಿತ ಸರ್ವೇ ಕಾರ್ಯದಿಂದ ಬಯಲಾಗಿದೆ.

ಕೊಡಗು ಜಿಲ್ಲೆಯ 3 ತಾಲೂಕುಗಳಲ್ಲಿ ಜಿಲ್ಲಾ ಸರ್ವೇ ಇಲಾಖೆ ನಡೆಸಿದ ಭೂಮಾಪನಾ ಸಂದರ್ಭ 547 ಕೆರೆಗಳ ಪೈಕಿ 509 ಕೆರೆಗಳ ಸರ್ವೇ ಮುಕ್ತಾಯಗೊಂಡಿದೆ. ಈ ಪೈಕಿ 103 ಕೆರೆಗಳನ್ನು ಒತ್ತುವರಿ ಮಾಡಲಾಗಿರುವುದು ಪತ್ತೆಯಾಗಿದೆ. ಈಗಾಗಲೇ 72 ಕೆರೆಗಳನ್ನು ಜಿಲ್ಲೆಯ ಕಂದಾಯ ಅಧಿಕಾರಿಗಳು ತೆರವುಗೊಳಿಸಿರುವುದು ಖಾತರಿಯಾಗಿದೆ.

ಸೋಮವಾರಪೇಟೆ, ಮಡಿಕೇರಿ ಹಾಗೂ ವೀರಾಜಪೇಟೆ ತಾಲೂಕುಗಳಲ್ಲಿ ಸರ್ವೇ ಮಾಡಲಾಗಿದ್ದು, ಭೂಮಾಪನಾ ಇಲಾಖೆಯನ್ವಯ ಕುಶಾಲನಗರ ಮತ್ತು ಪೊನ್ನಂಪೇಟೆ ನೂತನ ತಾಲೂಕುಗಳ ಭೂಮಾಪನಾ ಹಳೆಯ ದಾಖಲೆಗಳು ಈ 3 ತಾಲೂಕುಗಳಲ್ಲಿಯೇ ಸೇರಿರುವುದರಿಂದ ಇಡೀ ಜಿಲ್ಲೆಯ ಸರ್ವೇ ಕಾರ್ಯ ಮುಕ್ತಾಯಗೊಂಡಿದೆ. ರಾಜ್ಯ ಕೆರೆಗಳ ಸಂರಕ್ಷಣಾ ಪ್ರಾಧಿಕಾರದ ನಿರ್ದೇಶನದಂತೆ ಈ ಸರ್ವೇ ಕಾರ್ಯ ನಡೆದಿದೆ. ಇದನ್ನೂ ಓದಿ: ಇವನಿಂದ ನಾನೇನು ಕಲಿಯಬೇಕಾಗಿಲ್ಲ, ನನ್ನ ಸುದ್ದಿಗೆ ಇವನು ಬರಬೇಕಾಗಿಲ್ಲ – ಡಿ.ಕೆ.ಸುರೇಶ್‍ಗೆ ಏಕವಚನದಲ್ಲೇ ಹೆಚ್‍ಡಿಕೆ ವಾರ್ನಿಂಗ್

ಜಿಲ್ಲಾ ಮಾಪನಾ ಇಲಾಖೆಯ ಉಪನಿರ್ದೇಶಕ (ಡಿಡಿಎಲ್‌ಆರ್) ಪಿ ಶ್ರೀನಿವಾಸ್ ಪ್ರಕಾರ ಇನ್ನೂ 28 ಕೆರೆಗಳ ಸರ್ವೇ ಕಾರ್ಯ ನಡೆಸಬೇಕಾಗಿದೆ. ಇದರಲ್ಲಿ ಸೋಮವಾರಪೇಟೆಯ 10 ಹಾಗೂ ವೀರಾಜಪೇಟೆಯ 28 ಕೆರೆಗಳು ಸೇರಿವೆ. ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕಿನ ಕೆಲವೆಡೆ ಕೆರೆಗಳೇ ಮಾಯವಾಗಿರುವುದು ಕಂಡು ಬಂದಿದೆ.

ಕೊಡಗು ಜಿಲ್ಲೆಯಲ್ಲಿ ಕೆರೆಗಳ ತೆರವು ಕಾರ್ಯಾ ಚರಣೆಯನ್ನು ಜಿಲ್ಲಾಧಿಕಾರಿ ಡಾ. ಸತೀಶ್ ಬಿಸಿ ಖಚಿತಪಡಿಸಿದ್ದಾರೆ. ಮಡಿಕೇರಿ ತಹಶೀಲ್ದಾರ್ ಮಹೇಶ್, ವೀರಾಜಪೇಟೆ ತಹಶೀಲ್ದಾರ್ ಯೋಗಾನಂದ್ ಹಾಗೂ ಸೋಮವಾರಪೇಟೆ ತಹಶೀಲ್ದಾರ್ ಗೋವಿಂದರಾಜ್ ಉಸ್ತುವಾರಿಯಲ್ಲಿ ತೆರವು ಕಾರ್ಯಾಚರಣೆ ನಡೆಯತ್ತಿರುವುದಾಗಿ ಜಿಲ್ಲಾಧಿಕಾರಿ ಸತೀಶ್ ತಿಳಿಸಿದ್ದಾರೆ. ಇನ್ನೂ ಕೊಡಗಿನಲ್ಲಿ ನಡೆದ ಕೆರೆಗಳ ಭೂಮಾಪನಾ ಕಾರ್ಯದ ಕುರಿತು ನೀಡಿದ ವಿವರಗಳನ್ನು ಪರಿಶೀಲಿಸಿದ್ದಾರೆ.

ಜಿಲ್ಲೆಯಲ್ಲಿ 547 ಕೆರೆಗಳ ಪೈಕಿ ಮಡಿಕೇರಿ ತಾಲೂಕಿನಲ್ಲಿ 74, ಸೋಮವಾರಪೇಟೆ ತಾಲೂಕಿನಲ್ಲಿ 208 ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 265 ಕೆರೆಗಳಿವೆ. ಇವುಗಳೆಲ್ಲಾ ಚಿಕ್ಕ ಕೆರೆಗಳಾಗಿವೆ. ಒಟ್ಟು ವಿಸ್ತೀರ್ಣ 426.61 ಎಕರೆ. ಇನ್ನುಳಿದಂತೆ ನೀರಾವರಿ ಇಲಾಖೆಯ ಅಧೀನದಲ್ಲಿ ಬೃಹತ್ ಕೆರೆಗಳಿದ್ದು, ಅವುಗಳ ಭೂಮಾಪನಾ ಕಾರ್ಯ ಕೈಗೊಂಡಿಲ್ಲ. ಇದನ್ನೂ ಓದಿ: ಮೇಕೆದಾಟು ಹೋರಾಟಕ್ಕೆ ಸರ್ಕಾರ ಸಹಕಾರ ಕೊಡಬೇಕಿತ್ತು: ಸಲೀಂ ಅಹ್ಮದ್

 

ಪ್ರಸ್ತುತ ಜಿಲ್ಲೆಯ ಗ್ರಾಮಾಂತರ ವಿಭಾಗ ಹಾಗೂ ಪಟ್ಟಣ ವಿಭಾಗಗಳಲ್ಲಿ ಸರ್ವೇ ಕಾರ್ಯ ನಡೆಸಲಾಗಿದೆ. ಪಟ್ಟಣ ಪ್ರದೇಶಗಳಲ್ಲಿ 11 ಕೆರೆಗಳಿವೆ. ಮಡಿಕೇರಿ ನಗರದಲ್ಲಿ 4, ವೀರಾಜಪೇಟೆಯಲ್ಲಿ 4, ಕುಶಾಲನಗರದಲ್ಲಿ 2 ಹಾಗೂ ಸೋಮವಾರಪೇಟೆಯಲ್ಲಿ 1 ಕೆರೆಗಳಿವೆ. ಇದೀಗ 509 ಕೆರೆಗಳ ಭೂಮಾಪನಾ ಕಾರ್ಯ ಮುಕ್ತಾಯಗೊಂಡಿದೆ. ಆ ಪೈಕಿ ಮಡಿಕೇರಿ ತಾಲೂಕಿನಲ್ಲಿ 15, ಸೋಮವಾರಪೇಟೆ ತಾಲೂಕಿನಲ್ಲಿ 70 ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 18 ಕೆರೆಗಳ ಜಾಗಗಳನ್ನು ಅತಿಕ್ರಮಣ ಮಾಡಿರುವುದು ಸ್ಪಷ್ಟಗೊಂಡಿದೆ.

ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ನೂರಾರು ಜನರು ಕೆರೆ ಒತ್ತುವರಿ ಮಾಡಿಕೊಂಡು ಕಟ್ಟಡ ವ್ಯವಸಾಯ ಮಾಡಿಕೊಂಡು ಬದುಕು ನಡೆಸುತ್ತಿದ್ದ ಜನರಿಗೆ ಇದೀಗ ಒತ್ತುವರಿ ಜಾಗ ತೆರವುಗೊಳ್ಳುವ ಅತಂಕ ಎದುರಾಗಿದೆ.

Leave a Reply

Your email address will not be published. Required fields are marked *

Back to top button