– ವಿದ್ಯಾರ್ಥಿಗಳು, ಮಹಿಳೆಯರ ಮೇಲೆ ಹಲ್ಲೆ ಆರೋಪ
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ (CJP) ಶನಿವಾರ (ನಿನ್ನೆ) ಬೃಹತ್ ಪ್ರತಿಭಟನೆಗೆ ಕರೆ ನೀಡಿತ್ತು. ಈ ವೇಳೆ ಪ್ರತಿಭಟನೆ ಹತ್ತಿಕ್ಕಲು ಮುಂದಾಗಿದ್ದ (Delhi Police) ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಸುಮಾರು 20 ಎಫ್‌ಐಆರ್‌ಗಳನ್ನ ದೆಹಲಿ ಪೊಲೀಸರು ದಾಖಲಿಸಿದ್ದಾರೆ.
ಈ ಪ್ರಕರಣಗಳಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮತ್ತು ಕಾರ್ಯನಿರತ ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಿಸದಂತೆ ಅಡ್ಡಿಪಡಿಸಿದ ಆರೋಪಗಳು ಸೇರಿವೆ. ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಆರೋಪ ಸಹ ಕೇಳಿಬಂದಿದೆ. ಬಲಪಂಥೀಯ ಹಿಂದೂ ರಕ್ಷಾ ದಳದೊಂದಿಗೆ ಸಂಪರ್ಕ ಹೊಂದಿರುವ ನಾಲ್ವರು ಪುರುಷರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಪ್ರತಿಭಟನಾ ಸ್ಥಳದಲ್ಲಿದ್ದ ಹಲವು ಪ್ರತಿಭಟನಾಕಾರರು, ವಿರೋಧ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಸೇರಿದಂತೆ 7,000 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಯಿತು. ಕಲ್ಲು ತೂರಾಟದ ಹಲವಾರು ಘಟನೆಗಳು ವರದಿಯಾಗಿದ್ದು, 15ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಈ ಬಿರುಕಿನ ನಡುವೆಯೇ, ಸುಪ್ರೀಂ ಕೋರ್ಟ್ ಭಾನುವಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಶಾಂತಿಯುತವಾಗಿ ಸೇರುವ ಜನರನ್ನು ಅಕ್ರಮವಾಗಿ ಬಂಧಿಸಕೂಡದು ಎಂದು ಸೂಚಿಸಿದೆ.ಇದನ್ನೂ ಓದಿ: ಗುರುದ್ವಾರದ ಆವರಣಕ್ಕೆ ನುಗ್ಗಿ ಕಾರ್ಯಕರ್ತರಿಂದ ಪ್ರತಿಭಟನೆ – ಕೇಜ್ರಿವಾಲ್ ವಿರುದ್ಧ ಡಿಸಿಪಿಗೆ ದೂರು
ಸಿಜೆಪಿ ಟೀಕೆ
ದೆಹಲಿ ಪೊಲೀಸ್ ಮತ್ತು ಕೇಂದ್ರದ ವಿರುದ್ಧ ಕಿಡಿಕಾರಿರುವ ಸಿಜೆಪಿ ನಾಯಕರು, ಈ ಬೆಳವಣಿಗೆ ಮೂಲಕ ಸರ್ಕಾರ 1975ರ ಸರ್ವಾಧಿಕಾರಿ ಆಡಳಿತವನ್ನು ಮರಳಿ ತರುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ʻಉಪʼ ಪದ ಹೋಗಿ ʻಮುಖ್ಯಮಂತ್ರಿʼ ಆಗಲಿ; ಪರಮೇಶ್ವರ್‌ಗೆ ಕಾರದ ಮಠದ ಶ್ರೀಗಳ ಆಶೀರ್ವಾದ


