– ಬಂಗ್ಲಾ ಸಾಹಿಬ್ ಗುರುದ್ವಾರ ಸಮಿತಿಯಿಂದ ದೂರು
– ರಾಜಕೀಯ ಪ್ರತಿಭಟನೆಗೆ ಅನುಮತಿ ನೀಡಲ್ಲ
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ವಿರುದ್ಧ ನಡೆದ ಪ್ರತಿಭಟನೆ ವೇಳೆ ದೆಹಲಿ ಪೊಲೀಸರು(Delhi Police) ಗುರುದ್ವಾರ ಬಂಗ್ಲಾ ಸಾಹಿಬ್(Bangla Sahib Gurudwara) ಆವರಣ ಪ್ರವೇಶಿಸಿದ ಘಟನೆಗೆ ಸಂಬಂಧಿಸಿದಂತೆ, ಗುರುದ್ವಾರ ಆಡಳಿತ ಮಂಡಳಿಯು ಆಮ್ ಆದ್ಮಿ ಪಕ್ಷ (ಆಪ್) ಮತ್ತು ಅರವಿಂದ್ ಕೇಜ್ರಿವಾಲ್ ವಿರುದ್ಧ ಪೊಲೀಸರಿಗೆ ದೂರು ನೀಡಿದೆ.
ಈ ಕುರಿತು ಮಾಹಿತಿ ನೀಡಿರುವ ಬಂಗ್ಲಾ ಸಾಹಿಬ್ ಗುರುದ್ವಾರ ಸಮಿತಿ ಅಧ್ಯಕ್ಷ ಭೂಪಿಂದರ್ ಸಿಂಗ್ ಭುಲ್ಲರ್, “ನಿನ್ನೆ ಗುರುದ್ವಾರದೊಳಗೆ ನುಗ್ಗಿದ ಪ್ರತಿಭಟನಾಕಾರರೆಲ್ಲರೂ ಆಮ್ ಆದ್ಮಿ ಪಕ್ಷಕ್ಕೆ ಸೇರಿದವರಾಗಿದ್ದರು. ಗುರುದ್ವಾರ ಮತ್ತು ಅದರ ಆಡಳಿತ ಮಂಡಳಿಯ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ತಪ್ಪುದಾರಿಗೆಳೆಯುವ ವಿಡಿಯೋಗಳನ್ನು ಹರಡಿದ್ದಕ್ಕಾಗಿ ನಾವು ಆಮ್ ಆದ್ಮಿ ಪಕ್ಷ ಹಾಗೂ ಅರವಿಂದ್ ಕೇಜ್ರಿವಾಲ್ ವಿರುದ್ಧ ಔಪಚಾರಿಕ ದೂರು ದಾಖಲಿಸಿದ್ದೇವೆ,” ಎಂದು ತಿಳಿಸಿದ್ದಾರೆ.
Delhi: On Delhi Police entering Gurudwara Bangla Sahib during protests against CEC Gyanesh Kumar, Bangla Sahib Gurudwara chairman Bhupinder Singh Bhullar says, “All the protesters who entered the gurdwara yesterday belonged to the Aam Aadmi Party. We have filed this complaint against the Aam Aadmi Party and Arvind Kejriwal.”
— IANS (@ians_india) October 11, 2026
ದೆಹಲಿ ಸಿಖ್ ಗುರುದ್ವಾರ ಮ್ಯಾನೇಜ್ಮೆಂಟ್ ಕಮಿಟಿ (DSGMC) ಅಧ್ಯಕ್ಷ ಸರ್ದಾರ್ ಹರ್ಮೀತ್ ಸಿಂಗ್ ಕಲ್ಕಾ ಮತ್ತು ಇತರ ಪದಾಧಿಕಾರಿಗಳೊಂದಿಗೆ ಸಂಸತ್ ರಸ್ತೆ (ಪಾರ್ಲಿಮೆಂಟ್ ಸ್ಟ್ರೀಟ್) ಡಿಸಿಪಿ ಕಚೇರಿಗೆ ತೆರಳಿ ದೂರು ಸಲ್ಲಿಸಲಾಗಿದೆ. ಗುರುದ್ವಾರದ ಪಾವಿತ್ರ್ಯತೆಗೆ ಧಕ್ಕೆ ತಂದಿರುವ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಬೆಂಬಲಿಗರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ. ಇದನ್ನೂ ಓದಿ: ಬಂಧನವಲ್ಲ, ನನ್ನನ್ನು ಕಿಡ್ನ್ಯಾಪ್ ಮಾಡಿದ್ದರು – ಬಿಡುಗಡೆ ಬಳಿಕ ಧ್ರುವ್ ರಾಠಿ ಹೇಳಿದ್ದೇನು?
Delhi’s📍Bangla Sahib Gurudwara 🙏
AAP and 🪳have caused Gurudwara and the Sikh faith to be disrespected.
For starters, they brought in a large number of youths from Punjab. Accommodated them inside the Gurudwara.
Up to this point, still it was acceptable. — 1/3 👇🏻 Pls read https://t.co/HlYgY0IQff
— शून्य 🚩 (@Dave_Gaur) October 10, 2026
ಶನಿವಾರ ಏನಾಗಿತ್ತು?
ಜಂತರ್ ಮಂತರ್ನಲ್ಲಿ ನಿನ್ನೆ(ಅ.10) ರಂದು ಪ್ರತಿಭಟನೆ ನಡೆಸಲು ಯೋಜಿಸಿದ್ದ ನೂರಾರು ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರನ್ನು ದೆಹಲಿ ಪೊಲೀಸರು ತಡೆದು ಬ್ಯಾರಿಕೇಡ್ಗಳನ್ನು ಹಾಕಿದ್ದರು. ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ಹಲವು ಪ್ರತಿಭಟನಾಕಾರರು ಗುರುದ್ವಾರ ಬಂಗ್ಲಾ ಸಾಹಿಬ್ನ ಒಳಗೆ ಆಶ್ರಯ ಪಡೆದಿದ್ದರು. ಗುರುದ್ವಾರದ ಗೇಟ್ ಬಳಿ ಮತ್ತು ಆವರಣದ ಸಮೀಪ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಲಾರಂಭಿಸಿದಾಗ, ದೆಹಲಿ ಪೊಲೀಸರು ಸುಮಾರು 50ಕ್ಕೂ ಹೆಚ್ಚು ಜನರನ್ನು ಎಳೆದುಕೊಂಡು ಹೋಗಿ ವಶಕ್ಕೆ ಪಡೆದಿದ್ದರು. ಪ್ರತಿಭಟನಕಾರರಿಗೆ ಗುರುದ್ವಾರದಲ್ಲಿ ಆಶ್ರಯ ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಗುರಿಯಾಗಿತ್ತು.

