ರಾಮನಗರ: ಸುಳ್ಳು ಹೇಳುವುದರಲ್ಲಿ ಮತ್ತು ಅಸೂಯೆ ಪಟ್ಟುಕೊಳ್ಳುವುದರಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ (H.D.Kumaraswamy) ಪದ್ಮಶ್ರೀ ಕೊಡಿಸಬೇಕು ಎಂದು ಬಮೂಲ್ ಅಧ್ಯಕ್ಷ ಸಂಸದ ಡಿ.ಕೆ.ಸುರೇಶ್ (D.K.Suresh), ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಾಗಡಿ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಿ.ಕೆ.ಸುರೇಶ್, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಟೀಕೆಗೆ ತಿರುಗೇಟು ನೀಡಿದರು. ಅಭಿವೃದ್ಧಿ ಎಂದರೆ ಕೇವಲ ಕಟ್ಟಡಗಳಲ್ಲ, ರೈತರಿಗೆ ಮತ್ತು ಹಿಂದುಳಿದವರಿಗೆ ಶಕ್ತಿ ತುಂಬುವುದೇ ನಿಜವಾದ ಅಭಿವೃದ್ಧಿ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದ ನಮ್ಮ ಸರ್ಕಾರ ಬಂದು ಮೂರೂವರೆ ವರ್ಷವಾಗಿದೆ. ಜಾತಿ, ಪಕ್ಷಕ್ಕೆ ಸೀಮಿತ ಮಾಡದೇ ಪ್ರತಿ ಕುಟುಂಬಕ್ಕೆ ಐದು ಗ್ಯಾರಂಟಿಗಳ ಮೂಲಕ ಸುಮಾರು 76 ಸಾವಿರ ರೂ. ತಲುಪಿಸಿದ್ದೇವೆ. ಸರ್ಕಾರ ದಿವಾಳಿಯಾಗಿಲ್ಲ, ಬದಲಾಗಿ ಪ್ರತಿಯೊಬ್ಬರ ಮನೆಯ ಜ್ಯೋತಿ ಬೆಳಗಿದೆ. ಹಿಂದೆ 15 ಲಕ್ಷ ರೂ. ಕೊಡುತ್ತೇವೆ ಎಂದವರು ಭರವಸೆ ಈಡೇರಿಸಿದರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕಬ್ಬಿನ ಬೆಂಬಲ ಬೆಲೆಗೆ ಆಗ್ರಹಿಸಿ ಬೆಳಗಾವಿ ಅಧಿವೇಶನ ಸಮಯಯಲ್ಲೇ ಉಗ್ರ ಹೋರಾಟಕ್ಕೆ ಚೂನಪ್ಪ ಪೂಜೇರಿ ಕರೆ
ಹಿಂದೆ ಎಸ್.ಬಂಗಾರಪ್ಪ ಅವರು ರೈತರಿಗೆ ಉಚಿತ ವಿದ್ಯುತ್ ನೀಡಿದ್ದರು. ಈಗ ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಕೆಪಿಎಸ್ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ಸಚಿವ ಪುಟ್ಟರಂಗಶೆಟ್ಟಿ ಅವರ ಸಹಕಾರದಿಂದ ಹಾಲಿನ ದರ ಹೆಚ್ಚಿಸಿ ರೈತರಿಗೆ ಪ್ರತಿ ಲೀಟರ್ಗೆ 7 ರೂ. ಹೆಚ್ಚುವರಿ ಹಣ ನೀಡಲಾಗುತ್ತಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಮತ್ತು ವಿಸ್ಕಿ ಬೆಲೆ ಹೆಚ್ಚಾದಾಗ ಸುಮ್ಮನಿದ್ದವರು, ಈಗ ರೈತರಿಗೆ ಅನುಕೂಲ ಮಾಡಿಕೊಟ್ಟರೆ ಬೀದಿಗಿಳಿದು ಹೋರಾಟ ಮಾಡುತ್ತಾರೆ ಎಂದು ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಇಲ್ಲಿ ಒಂದೇ ಒಂದು ಸೇತುವೆ ನಿರ್ಮಿಸಲಿಲ್ಲ. 25 ವರ್ಷ ರಾಜಕೀಯ ಮಾಡಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಮಂಡ್ಯದಲ್ಲಿ ಪ್ರಚಾರ ಮಾಡುವಾಗ 10 ನಿಮಿಷದಲ್ಲಿ ಮೇಕೆದಾಟು ಯೋಜನೆಗೆ ಸಹಿ ಮಾಡಿಸುತ್ತೇನೆ ಎಂದಿದ್ದರು. ಈಗ ಯಾಕೆ ಆ ಬಗ್ಗೆ ಮಾತನಾಡುತ್ತಿಲ್ಲ? ಮೇಕೆದಾಟು ಯೋಜನೆಯಿಂದ ನಮ್ಮ ಜಿಲ್ಲೆಗಿಂತ ಹೆಚ್ಚಾಗಿ ಅವರ ಹುಟ್ಟಿದ ಜಿಲ್ಲೆ ಮತ್ತು ಈಗ ಸಂಸದರಾಗಿರುವ ಮಂಡ್ಯ ಜಿಲ್ಲೆಗೆ ಹೆಚ್ಚು ಅನುಕೂಲವಿದೆ. ರಾಮನಗರ, ಚನ್ನಪಟ್ಟಣದವರ ಋಣ ತೀರಿಸುವುದು ಬೇಡ, ಕನಿಷ್ಠ ಮಂಡ್ಯದವರ ಋಣವನ್ನಾದರೂ ತೀರಿಸಲಿ ಎಂದರು. ಇದನ್ನೂ ಓದಿ: ಬರ ಪರಿಹಾರ ಬಿಡುಗಡೆ ಮಾಡದೇ ಹೋದ್ರೆ ಕ್ಯಾಬಿನೆಟ್ನಲ್ಲಿ ಚರ್ಚಿಸಿ ನಿರ್ಧಾರ: ಡಾ. ಜಿ.ಪರಮೇಶ್ವರ
ಕೇಂದ್ರ ಸಚಿವರಾಗಿ ಒಂದೇ ಒಂದು ಕೈಗಾರಿಕೆ ತರಲಿಲ್ಲ. ನಾನು ಸವಾಲು ಹಾಕುತ್ತೇನೆ. ಮಂಡ್ಯ ಅಥವಾ ಮದ್ದೂರು ಬಳಿ 5 ಸಾವಿರ ಎಕರೆ ಜಾಗ ಕೊಡಿಸುತ್ತೇನೆ. ಅವರು ಕೈಗಾರಿಕೆ ಸ್ಥಾಪಿಸಲಿ. ಜಾಗ ಕೊಡಿಸದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಹಳ್ಳಿಹಳ್ಳಿಗೆ ಹೋಗಿ ಕೆಲಸ ಮಾಡುವುದು ಅಭಿವೃದ್ಧಿಯೇ ಹೊರತು, ಬಂದು ಟಿವಿ ಮುಂದೆ ಭಾಷಣ ಮಾಡಿ, ಕೇವಲ ‘ಡವ್’ ಮಾಡಿಕೊಂಡು ಹೋಗುವುದಲ್ಲ ಎಂದು ಟೀಕಿಸಿದರು.
