– ಪಾಕಿಸ್ತಾನಿ ಗುಪ್ತಚರ ಜಾಲದೊಂದಿಗೆ ಸಂಪರ್ಕ ಹೊಂದಿರುವ ಶಂಕೆ
ನವದೆಹಲಿ: ವಾಟ್ಸಪ್ ಬೇಹುಗಾರಿಗೆ ಆತಂಕ ಹಿನ್ನೆಲೆಯಲ್ಲಿ ರಕ್ಷಣಾ ವಲಯದಲ್ಲಿ ಹೈ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.
ವಾಟ್ಸಾಪ್ ಮೂಲಕ ಗೂಢಚರ್ಯೆ ನಡೆಸಿರುವ ಶಂಕೆ ಹಿನ್ನೆಲೆ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ರಕ್ಷಣಾ ಮತ್ತು ಭದ್ರತಾ ವ್ಯವಸ್ಥೆಯಾದ್ಯಂತ ರಾಷ್ಟ್ರೀಯ ಮಟ್ಟದ ಆಡಿಟ್ ಆರಂಭವಾಗಿದೆ.
ಸೇನೆ ಸೇರಿದಂತೆ ಪ್ರಮುಖ ರಕ್ಷಣಾ ಸಂಸ್ಥೆಗಳ ಭದ್ರತಾ ವ್ಯವಸ್ಥೆಯ ಪರಿಶೀಲನೆ ನಡೆಸಲಾಗಿದೆ. ವಾಟ್ಸಾಪ್ ಸಂವಹನ ಮತ್ತು ಡಿಜಿಟಲ್ ಸಾಧನಗಳ ಬಳಕೆ ಮೇಲೆ ನಿಗಾ ವಹಿಸಲಾಗಿದೆ.
ಪಾಕಿಸ್ತಾನಿ ಗುಪ್ತಚರ ಜಾಲದೊಂದಿಗೆ ಸಂಪರ್ಕ ಹೊಂದಿರುವ ಶಂಕೆ ಹೊಂದಲಾಗಿದೆ. ಸೂಕ್ಷ್ಮ ರಕ್ಷಣಾ ಮಾಹಿತಿಗಳ ಸೋರಿಕೆ ತಡೆಯಲು ಕಟ್ಟುನಿಟ್ಟಿನ ಕ್ರಮವಹಿಸಲಾಗಿದೆ.
ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ವಿರುದ್ಧ ಗೂಢಚರ್ಯೆ ಆರೋಪ ಕೇಳಿಬಂದಿದೆ. ವಾಟ್ಸಪ್ ಮೂಲಕ ಪಾಕಿಸ್ತಾನಿ ಗುಪ್ತಚರ ಸಂಪರ್ಕದ ಶಂಕೆ ವ್ಯಕ್ತವಾಗಿದೆ.
ಯುದ್ಧ ಯೋಜನೆ, ಡ್ರೋನ್ ಸಾಮರ್ಥ್ಯ, ಯುದ್ಧವಿಮಾನಗಳ ನಿಯೋಜನೆ ಕುರಿತ ಮಾಹಿತಿ ಸೋರಿಕೆ ಆರೋಪ ಕೇಳಿಬಂದಿದೆ. ಸಹೋದ್ಯೋಗಿಗಳ ಮೊಬೈಲ್ಗಳಿಗೆ ಸ್ಪೈವೇರ್ ಅಳವಡಿಸಲು ಯತ್ನಿಸಿದ ಆರೋಪ ಕೂಡ ಇದೆ.
