ಲಕ್ನೋ: ಉತ್ತರ ಪ್ರದೇಶದ (Uttar Pradesh) ಮಥುರಾದಲ್ಲಿ ನಡೆದ ಮದುವೆಯೊಂದು ಇದೀಗ ದೇಶಾದ್ಯಂತ ಸಖತ್ ಟ್ರೆಂಡ್ ಆಗಿದೆ. ಇಬ್ಬರು ವರರಿಗೆ ಬರೋಬ್ಬರಿ 1 ಕೋಟಿ ರೂಪಾಯಿ ಮೌಲ್ಯದ, ಸುಮಾರು 100 ಅಡಿ ಉದ್ದದ ನೋಟಿನ ಹಾರಗಳನ್ನ (Cash Garlands) ಉಡುಗೊರೆಯಾಗಿ ನೀಡಲಾಗಿದ್ದು, ಈ ಅದ್ಧೂರಿ ದೃಶ್ಯದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
A wedding procession in Uttar Pradesh’s Mathura has gone viral after a Rajasthan sarpanch presented two grooms with extravagant garlands made of Rs 500 currency notes.
#Bisleri
#FSSAI
“Rashtrapati Bhavan”
PAHs
“18.5 Cr”
“हरिहर मिलन”
Christchurch
“Daryl Mitchell”
“Tata Steel” https://t.co/3HhH0Y10jT— 7_viral__ (@7_viral__) November 23, 2026
ರಾಜಸ್ಥಾನದ ಸರಪಂಚ್ ಆಗಿರುವ ವರರ ಬಾವ ಈ ದುಬಾರಿ ಉಡುಗೊರೆಯನ್ನ ನೀಡಿದ್ದು, ಮದುವೆ (Wedding) ಸಮಾರಂಭದಲ್ಲಿ ಎಲ್ಲರ ಗಮನ ಸೆಳೆದಿದೆ.
ಮಥುರಾದ ನಾಗ್ಲಾ ಫೊಂಡಾ ಗ್ರಾಮದಲ್ಲಿ ಶನಿವಾರ ಈ ಘಟನೆ ನಡೆದಿದೆ. ಗ್ರಾಮದ ಸಂಬಂಧಿಗಳಾದ ಪ್ರಶಾಂತ್ ಮತ್ತು ಕನ್ಹಾ ರಾಘವ್ ಎಂಬ ಇಬ್ಬರು ಸೋದರ ಸಂಬಂಧಿಗಳ ಮದುವೆ, ಗೋವರ್ಧನ್ನ ಮುಡ್ಸೇರಸ್ ಗ್ರಾಮದ ಇಬ್ಬರು ಯುವತಿಯರೊಂದಿಗೆ ನಿಶ್ಚಯವಾಗಿತ್ತು.
ಈ ಸಂದರ್ಭದಲ್ಲಿ ಇಬ್ಬರು ವರರಿಗೆ ತಲಾ 1 ಕೋಟಿ ಮೌಲ್ಯದ ನೋಟಿನ ಹಾರಗಳನ್ನ ಉಡುಗೊರೆಯಾಗಿ ನೀಡಲಾಗಿದೆ. ಸಂಪೂರ್ಣವಾಗಿ 500 ಮುಖಬೆಲೆಯ ನೋಟುಗಳಿಂದ ತಯಾರಿಸಲಾದ ಈ ಹಾರಗಳು ಸುಮಾರು 100 ಅಡಿ ಉದ್ದವಿತ್ತು ಎನ್ನಲಾಗಿದೆ.
ಹಾರಗಳ ಗಾತ್ರ ಮತ್ತು ತೂಕ ಎಷ್ಟಿತ್ತೆಂದರೆ, ಅವುಗಳನ್ನು ಹಿಡಿದುಕೊಳ್ಳಲು ಕೆಲವರು ಸಾಲಲ್ಲಿ ನಿಂತಿದ್ದರು. ಹೀಗಾಗಿ ಇಬ್ಬರು ವರರನ್ನು ಮನೆಯ ಮೇಲ್ಛಾವಣಿಗೆ ಕರೆದೊಯ್ದು, ಅಲ್ಲಿಯೇ ಅವರ ಕೊರಳಿಗೆ ಬೃಹತ್ ನೋಟಿನ ಹಾರಗಳನ್ನು ಹಾಕಲಾಗಿದೆ. ಈ ಅಪರೂಪದ ಕ್ಷಣವನ್ನು ಹಲವರು ತಮ್ಮ ಮೊಬೈಲ್ಗಳಲ್ಲಿ ಸೆರೆಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ಭಾರೀ ವೈರಲ್ ಆಗಿವೆ.


