ತುಮಕೂರು: ದಸರಾ ವೇದಿಕೆಯಲ್ಲೇ ಡಿಸಿಎಂ ಜಿ. ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯಾಗಲಿ (G Parameshwara) ಎಂದು ಕಾರದ ಮಠದ ಶ್ರೀ ವೀರಬಸವ ಸ್ವಾಮೀಜಿ (Tumakuru) ಅವರು ಆಶೀರ್ವದಿಸಿದ್ದಾರೆ.
ಅಮರಶಿಲ್ಪಿ ಜಕಣಾಚಾರಿ ವೇದಿಕೆಯಲ್ಲಿ ಮಾತನಾಡಿದ ಶ್ರೀಗಳು, ಪರಮೇಶ್ವರ್ ಅವರ ನೇತೃತ್ವದಲ್ಲಿ ತುಮಕೂರು ದಸರಾ ಅತ್ಯಂತ ವೈಭವದಿಂದ ನಡೆಯುತ್ತಿದೆ. ಅವರು ಯಾವುದೇ ಸ್ವಾರ್ಥ, ಆಸೆ ಇಲ್ಲದೆ ದಸರಾ ಆಚರಣೆ ಮಾಡುತ್ತಿದ್ದಾರೆ. ಈಗ ಅವರ ಹುದ್ದೆ ಉಪ ಮುಖ್ಯಮಂತ್ರಿ. ಆ ʻಉಪʼ ಅನ್ನೋ ಪದ ಹೊರಟು ಹೋಗಿ, ʻಮುಖ್ಯಮಂತ್ರಿʼ ಮಾತ್ರ ಇರಲಿ ಅನ್ನೋದು ನನ್ನ ಆಶಯ. ಅವರು ಮುಖ್ಯಮಂತ್ರಿಗಳಾಗಲಿ ಎಂದು ಆಶೀರ್ವದಿಸಿದರು.
ಕಾರ್ಯಕ್ರಮದ ಕುರಿತು ಮಾತನಾಡಿದ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಮಹಾಸ್ವಾಮಿಗಳು, ತುಮಕೂರಿನ ಜನತೆ ಮೈಸೂರಿಗೆ ಹೋಗಿ ದಸರಾ ನೋಡಲು ಕಷ್ಟವಾಗುತ್ತದೆ, ಹಾಗಾಗಿ ತುಮಕೂರು ದಸರಾವನ್ನು ವಿಜೃಂಭಣೆಯಿಂದ ಆಚರಿಸಲು ಮುಂದಾಗಿದ್ದ ಕೀರ್ತಿ ಜಿ. ಪರಮೇಶ್ವರ್ ಅವರಿಗೆ ಸಲ್ಲುತ್ತದೆ. ಮೈಸೂರಿನ ಪ್ರತಿರೂಪವಾಗಿ ತುಮಕೂರು ಬೆಳೆಯುತ್ತಿರುವುದರ ಪ್ರತೀಕವೇ ತುಮಕೂರು ದಸರಾ. ತುಮಕೂರಿನ ದೀಪಾಲಂಕಾರ ನೋಡುವುದೇ ಚೆಂದ ಎಂದು ಅವರು ಬಣ್ಣಿಸಿದರು. ಇದನ್ನೂ ಓದಿ: ದಸರಾ ಉದ್ಘಾಟಿಸಲು ಬಂದಿಲ್ಲ, ನಾಡಿಗಾಗಿ ಪ್ರಾರ್ಥಿಸಲು ಬಂದಿದ್ದೇನೆ: ಗವಿಸಿದ್ದೇಶ್ವರ ಶ್ರೀ


