ಹಾಸನ: ಜಿಲ್ಲಾಧಿಕಾರಿ ಕೆ.ಎಸ್ ಲತಾಕುಮಾರಿ (KS Lathakumari) ಅವರು ತಮ್ಮ ವಾಟ್ಸಪ್ ಸ್ಟೇಟಸ್‌ನಲ್ಲಿ ರಾಷ್ಟ್ರ ಲಾಂಛನ, ಧ್ಯೇಯವಾಕ್ಯ ʻಸತ್ಯಮೇವ ಜಯತೇʼ (ಸತ್ಯವೇ ಗೆಲ್ಲುವುದು) ಜೊತೆಗೆ ಎರಡು ಸಾಲುಗಳನ್ನ ಹಾಕಿಕೊಳ್ಳುವ ಮೂಲಕ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರಿಗೆ ಟಾಂಗ್ ಕೊಟ್ರಾ ಎನ್ನುವ ಚರ್ಚೆ ಶುರುವಾಗಿದೆ.

ನೀವು ನನ್ನ ಮೇಲೆ ಸುಳ್ಳಿನ ದಾಳಿ ಮಾಡಬಹುದು (You Can attack me with Lies). ಆದರೆ ನೀವು ನನ್ನನ್ನು ಸುಳ್ಳಿನಿಂದ ಕುಗ್ಗಿಸಲು (ದುರ್ಬಲಗೊಳಿಸಲು) ಸಾಧ್ಯವಿಲ್ಲ ( but you cannot break me with lies). ಸುಳ್ಳು ದಾಳಿ ಮಾಡಿದ್ರೆ ಸತ್ಯ ರಕ್ಷಣೆ ಮಾಡುತ್ತೆ ಎಂದು ತಮ್ಮ ವೈಯುಕ್ತಿಕ ನಂಬರ್‌ನ ವಾಟ್ಸಪ್‌ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಾರೆ.

ನಿನ್ನೆಯಷ್ಟೇ ಕೆಪಿಎಸ್‌ಸಿ ಅಕ್ರಮ ಮಾಡಿದ್ದಾರೆ ಎಂದು ಆರೋಪಿಸಿ ಡಿಸಿ ವಿರುದ್ದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದರು. ಇದರ ಬೆನ್ನಲ್ಲೆ ವಾಟ್ಸಪ್ ಸ್ಟೇಟಸ್ ಮೂಲಕ ಕೇಂದ್ರ ಸಚಿವರಿಗೆ ತಿರುಗೇಟು ಕೊಟ್ರಾ ಎಂಬ ಚರ್ಚೆಗಳು ಜೋರಾಗಿವೆ.

