ಚೆನ್ನೈ: ತಮಿಳುನಾಡು ಸಿಎಂ ಜೋಸೆಫ್ ವಿಜಯ್ (Joseph Vijay) ಅವರಿಂದು ತಮ್ಮ 52ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವಿಜಯ್ಗೆ ಪ್ರಧಾನಿ ಮೋದಿ, ಕಮಲ್ ಹಾಸನ್ ಸೇರಿದಂತೆ ಗಣ್ಯರು ಶುಭಾಶಯ ಕೋರಿದ್ದಾರೆ.
ಮೇ ತಿಂಗಳಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ವಿಜಯ್ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಎಡಪ್ಪಾಡಿ ಕೆ. ಪಳನಿಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಹಾಗೂ ನಟ ಕಮಲ್ ಹಾಸನ್ ಸೇರಿದಂತೆ ದೇಶದ ಹಲವಾರು ಪ್ರಮುಖ ನಾಯಕರು ವಿಜಯ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಸೇನೆಗೆ 10 ಲಕ್ಷ ದೇಣಿಗೆ ನೀಡಿದ ಕ್ಯಾನ್ಸರ್ ಪೀಡಿತ ನಿವೃತ್ತ ಶಿಕ್ಷಕಿ
ಎಕ್ಸ್ ಖಾತೆಯಲ್ಲಿ ಶುಭಾಶಯ ತಿಳಿಸಿರುವ ಪ್ರಧಾನಿ ಮೋದಿ, ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ದೇವರು ಆರೋಗ್ಯ ಹಾಗೂ ದೀರ್ಘಾಯುಷ್ಯ ನೀಡಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.
Birthday greetings to the Chief Minister of Tamil Nadu, Thiru C. Joseph Vijay Ji. I pray for his long and healthy life.@TVKVijayHQ
— Narendra Modi (@narendramodi) June 22, 2026
ಇನ್ನೂ ನಟ ಕಮಲ್ ಹಾಸನ್ ಅವರು ಶುಭಾಶಯ ತಿಳಿಸಿದ್ದು, ಕೋಟ್ಯಂತರ ಹೃದಯಗಳನ್ನು ಗೆದ್ದಿರುವ, ತಮಿಳುನಾಡಿನ ಮುಖ್ಯಮಂತ್ರಿಗಳು, ತಮಿಳಗ ವೆಟ್ರಿ ಕಳಗಂ ಪಕ್ಷದ ಅಧ್ಯಕ್ಷರು ಹಾಗೂ ನನ್ನ ಪ್ರೀತಿಯ ತಮ್ಮನಾದ ವಿಜಯ್ ಅವರಿಗೆ ಜನ್ಮದಿನದ ಶುಭಾಶಯಗಳು ಎಂದು ತಿಳಿಸಿದ್ದಾರೆ.
மாண்புமிகு தமிழ்நாடு முதலமைச்சர், தமிழக வெற்றிக் கழகத்தின் தலைவர், பல கோடி இதயங்களின் அன்பைப் பெற்றிருக்கும் அன்புத் தம்பி விஜய் @TVKVijayHQ அவர்களுக்கு மனமார்ந்த பிறந்தநாள் வாழ்த்துகள். @CMOTamilnadu pic.twitter.com/uHY1CCVe1Z
— Kamal Haasan (@ikamalhaasan) June 22, 2026
ಖ್ಯಾತ ನಟರಾದ ಜೋಸೆಫ್ ವಿಜಯ್ ಅವರು 1974ರ ಜೂನ್ 22ರಂದು ಚಲನಚಿತ್ರ ನಿರ್ದೇಶಕ ಚಂದ್ರಶೇಖರ್ ಮತ್ತು ಶೋಭಾ ದಂಪತಿಗೆ ಜನಿಸಿದರು. ಟಿವಿಕೆ ಪಕ್ಷವನ್ನು ಸ್ಥಾಪಿಸಿದ ಕೇವಲ ಎರಡು ವರ್ಷಗಳಲ್ಲೇ ವಿಜಯ್ 234 ಸದಸ್ಯರ ತಮಿಳುನಾಡು ವಿಧಾನಸಭೆಯಲ್ಲಿ ತಮ್ಮ ಪಕ್ಷವನ್ನು ಮುನ್ನಡೆಸಿ 107 ಸ್ಥಾನಗಳಲ್ಲಿ ಗೆಲುವು ಸಾಧಿಸಿದರು. ಸ್ಪಷ್ಟ ಬಹುಮತಕ್ಕೆ ಬೇಕಾದ 118 ಸ್ಥಾನಗಳ ಕೊರತೆಯಿದ್ದರೂ, ಅವರು ಕಾಂಗ್ರೆಸ್, ವಿಸಿಕೆ ಮತ್ತು ಐಯುಎಂಎಲ್ ಪಕ್ಷಗಳ ಬೆಂಬಲದೊಂದಿಗೆ ಮೈತ್ರಿ ಸರ್ಕಾರವನ್ನು ರಚಿಸಿದರು.ಇದನ್ನೂ ಓದಿ: ಲಕ್ನೋದಲ್ಲಿ ಧಗಧಗನೆ ಹೊತ್ತಿ ಉರಿದ ಕೋಚಿಂಗ್ ಸೆಂಟರ್ – ಪಾರಾಗಲು ಕಟ್ಟಡದ ಮೇಲಿಂದ ಜಿಗಿದ ವಿದ್ಯಾರ್ಥಿಗಳು
