Connect with us

ಹಿಂದಿ ಬರ್ತಿಲ್ಲಾ ಅಂತಾ ಉಬರ್ ಚಾಲಕನನ್ನು ಥಳಿಸಿದ ಯುವಕರು

ಹಿಂದಿ ಬರ್ತಿಲ್ಲಾ ಅಂತಾ ಉಬರ್ ಚಾಲಕನನ್ನು ಥಳಿಸಿದ ಯುವಕರು

ಬೆಂಗಳೂರು: ನಗರದ ಉಬರ್ ಚಾಲಕರೊಬ್ಬರಿಗೆ ಹಿಂದಿ ಭಾಷೆ ಬಂದಿಲ್ಲ ಎಂದು ಮೂವರು ಯುವಕರು ಹಲ್ಲೆಗೈದಿರುವ ಘಟನೆ ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜಗದೀಶ್ ಹಲ್ಲೆಗೊಳಗಾದ ಉಬರ್ ಚಾಲಕ. ಶನಿವಾರ ರಾತ್ರಿ ಹೆಬ್ಬಾಳದಿಂದ ಮೂವರು ಯುವಕರನ್ನು ಜಗದೀಶ್ ಪಿಕ್ ಮಾಡಿ, ಐಸಿಸ್ ಹೋಟೆಲ್ ಬಳಿ ಕರೆ ತಂದಿದ್ದಾರೆ. ಕಾರಿನಿಂದ ಇಳಿದು ಹೋಗುತ್ತಿರುವರಿಗೆ ಜಗದೀಶ್ ಕಾರ್ ಬಾಡಿಗೆಯನ್ನು ಕೇಳಿದ್ದಾರೆ.

ಈ ವೇಳೆ ಮೂವರು ಯುವಕರು ಚಾಲಕನಿಗೆ ಹಿಂದಿ ಭಾಷೆಯಲ್ಲಿ ಮಾತನಾಡುವಂತೆ ಧಮ್ಕಿ ಹಾಕಿದ್ದಾರೆ. ಜಗದೀಶ್ ಅವರಿಗೆ ಹಿಂದಿ ಬರಲ್ಲ ಎಂದಾಗ ಗಲಾಟೆ ಮಾಡಿಕೊಂಡ ಯುವಕರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಘಟನೆ ಸಂಬಂಧ ಶೇಷಾದ್ರಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Advertisement
Advertisement