ಬಳ್ಳಾರಿ: ಈ ಬಾರಿಯ ಹಂಪಿಯ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಭರ್ಜರಿಯಾಗಿ ನಡೆಯುತ್ತಿದೆ. ಹಂಪಿ ಉತ್ಸವದ ಎರಡನೇ ದಿನದ ಉತ್ಸವದಲ್ಲಿ ಗಾಯತ್ರಿ ವಿದ್ಯಾಪೀಠದ ವೇದಿಕೆಯಲ್ಲಿ ಅಕ್ಷರಶಃ ಲಕ್ಷಾಂತರ ಪ್ರೇಕ್ಷಕರು ಹುಚ್ಚೆದ್ದು ಕುಣಿದರು.
ಸ್ಯಾಂಡಲ್‍ವುಡ್ ದೂದ ಪೇಡಾ ದಿಗಂತ್ ಹಾಗು ಗುಳಿಕೆನ್ನೆ ಬೆಡಗಿ ಐಂದ್ರಿತಾ ರೇ ರಾಜಾ-ರಾಣಿ ಉಡುಪಿನಲ್ಲಿ ಕಂಗೊಳಿಸಿದರು. ವೇದಿಕೆಯ ಮೇಲೆ 21 ದೇಶಗಳ ವಿಶ್ವ ಸುಂದರಿಯರ ಮಾರ್ಜಾಲ ನಡಿಗೆ ಎಲ್ಲರ ಮನಸೂರೆಗೊಂಡಿತು. ತ್ರೀ ಈಡಿಯಟ್ಸ್ ನ ಬೆಹತಿ ಹವಾ ಕಾ ಜೋಕಾ ಥಾವೋ ಹಾಡಿನಿಂದ ಗಾಯನ ಆರಂಭಿಸಿದ ಗಾಯಕ ಶಾನ್ ಕನ್ನಡದ ಎನೋ ಓಂಥರಾ, ಈ ಪ್ರೀತಿಯೂ ಹಾಗೂ ಕುಡಿ ನೋಟವೋ ಮನಮೋಹಕ ಎಂದು 2 ಗಂಟೆಗಳ ಕಾಲ ಸಂಗೀತ ಕಾರ್ಯಕ್ರಮ ನೀಡಿದರು.
Advertisement
ಇದೇ ವೇದಿಕೆಯಲ್ಲಿ ಗುರು ಗೀತಾಂಜಲಿ ತಂಡದ ವಿದ್ಯಾಲಾಲ್ ಕಥಕ್ ನೃತ್ಯ ಮಾಡಿ ಎಲ್ಲರ ಗಮನ ಸೆಳೆದರು. ವಿಕೆಂಡ್ ಶನಿವಾರವಾದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ಹಂಪಿ ಉತ್ಸವದಲ್ಲಿ ಭಾಗವಹಿಸಿ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದ್ದು ವಿಶೇಷವಾಗಿತ್ತು.
Advertisement
Advertisement
Advertisement