ಲಕ್ನೋ: ಉತ್ತರ ಪ್ರದೇಶದ ಜೈಲಿನಲ್ಲಿ ಸಾಮಾನ್ಯ ಕೈದಿಗಳಿಗೆ ನೀಡುವ ಆಹಾರವನ್ನೇ ರಾಜಕೀಯ ನಾಯಕರ ಜೊತೆ ನಂಟುಹೊಂದಿರುವ ಡಾನ್‍ಗಳಿಗೂ ನೀಡಬೇಕೆಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೃಹ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಗೃಹ ಇಲಾಖೆಯ ಅಧಿಕಾರಿಗಳ ಜೊತೆ ಬುಧವಾರ ರಾತ್ರಿ ಯೋಗಿ ಸಭೆ ನಡೆಸಿದರು. ಈ ವೇಳೆ, ಎಲ್ಲ ದೋಷಿಗಳನ್ನು ಈಗ ಹೇಗೆ ಜೈಲಿನಲ್ಲಿ ನೋಡಿಕೊಳ್ಳಲಾಗುತ್ತದೋ ಅದೇ ರೀತಿಯಾಗಿ ಡಾನ್‍ಗಳನ್ನು ನೋಡಿಕೊಳ್ಳಬೇಕು. ಡಾನ್‍ಗಳಿಗೆ ಪ್ರತ್ಯೇಕ ಆಹಾರ, ವಿಶೇಷ ಸೌಲಭ್ಯಗಳನ್ನು ನೀಡಕೂಡದು ಎಂದು ಆದೇಶಿಸಿದ್ದಾರೆ.
Advertisement
ಕೈದಿಗಳ ಕೈಗೆ ಮೊಬೈಲ್ ಫೋನ್ ನೀಡಬಾರದು, ಎಲ್ಲ ಜೈಲುಗಳಲ್ಲಿ ಫೋನ್ ಜಾಮರ್ ಗಳನ್ನು ಅಳವಡಿಸಬೇಕು. ವೈದ್ಯಕೀಯ ಚಿಕಿತ್ಸೆಯ ನೆಪದಲ್ಲಿ ಕೈದಿಗಳು ನಿಯಮವನ್ನು ಉಲ್ಲಂಘಿಸಿದ್ದು ಕಂಡು ಬಂದಲ್ಲಿ ಜೈಲಿನ ಅಧಿಕಾರಿಗಳ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಯೋಗಿ ಎಚ್ಚರಿಕೆ ನೀಡಿದ್ದಾರೆ.
Advertisement
ಇದೇ ವೇಳೆ ಪೊಲೀಸ್ ಇಲಾಖೆಯಲ್ಲಿ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಗಳ ಜೊತೆ ನಂಟು ಹೊಂದಿರುವ ಮತ್ತು ಭ್ರಷ್ಟಾಚಾರದಲ್ಲಿ ಭಾಗಿಯಾಗುತ್ತಿರುವ ಸಿಬ್ಬಂದಿಯನ್ನು ಪತ್ತೆ ಹಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Advertisement
ಇದನ್ನೂ ಓದಿ: ಗ್ರಾಮಗಳಲ್ಲಿ 18 ಗಂಟೆ, ಜಿಲ್ಲಾ ಕೇಂದ್ರಗಳಲ್ಲಿ 24 ಗಂಟೆ ವಿದ್ಯುತ್: ಯೋಗಿ ಆದೇಶ
Advertisement
ಇದನ್ನೂ ಓದಿ: ಇನ್ಮುಂದೆ ಶ್ರೇಷ್ಠ ವ್ಯಕ್ತಿಗಳ ಜಯಂತಿಯಂದು ಶಾಲೆಗಳಿಗೆ ರಜೆ ಇಲ್ಲ: ಯೋಗಿ ಆದಿತ್ಯನಾಥ್
#WATCH: UP CM Yogi Adityanath speaking at a public meeting in Jhansi. https://t.co/i50vx7Y5IN
— ANI (@ANI_news) April 20, 2017
Problem of water scarcity will end in two years if all the schemes approved by Prime Minister for Bundelkhand are implemented: UP CM pic.twitter.com/SYXx3mpDvn
— ANI UP (@ANINewsUP) April 20, 2017