DistrictsKarnatakaLatestMain PostYadgir

ಸ್ಥಳೀಯ ಸಂಸ್ಥೆ ಚುನಾವಣೆ- ಮತದಾರರನ್ನು ಸೆಳೆಯಲು ಮಾಟ-ಮಂತ್ರ

ಯಾದಗಿರಿ: ಇಂದು ಕಕ್ಕೇರಾ ಪುರಸಭೆಗೆ ಮತದಾನ ಹಿನ್ನೆಲೆ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಬಾನಾಮತಿ ಮಾಟ-ಮಂತ್ರದ ಮೊರೆ ಹೋಗಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಅಡ್ಡದಾರಿ ಹಿಡಿದಿರುವ ಆರೋಪ ಕೇಳಿಬಂದಿದೆ.

ಕಕ್ಕೇರಾ ಪುರಸಭೆಯ 23 ನೇ ವಾರ್ಡ್ ನ ಜಂಗಣ್ಣರದೊಡ್ಡಿಯಲ್ಲಿ ಮಾಟ-ಮಂತ್ರ ಸದ್ದು ಕೇಳಿಬಂದಿದ್ದು, ಮತಗಟ್ಟೆಯ ಬಳಿ ನಿಂಬೆಹಣ್ಣು ಇತರೆ ಮಾಟ-ಮಂತ್ರದ ವಸ್ತುಗಳು ಪತ್ತೆಯಾಗಿವೆ. ಇಂದು ಮತದಾನದ ಹಿನ್ನೆಲೆ ನಿನ್ನೆ ರಾತ್ರಿಯೇ ಕೆಲವು ಕೀಡಿಗೇಡಿಗಳು ಬಾನಾಮತಿ ಮಾಟ-ಮಂತ್ರ ಮಾಡಿದ್ದಾರೆ. ಮಾಟದ ವಸ್ತುಗಳನ್ನು ಕಂಡು ಸ್ಥಳೀಯರು ಬೆರಗಾಗಿದ್ದಾರೆ.

ಗ್ರಾಮ ಪಂಚಾಯ್ತಿ ಸಿಬ್ಬಂದಿ ನಿಂಬೆಹಣ್ಣು, ಇತರೆ ವಸ್ತುಗಳನ್ನು ಸ್ವಚ್ಛ ಮಾಡಿದ್ದಾರೆ. ಇನ್ನೂ 23ನೇ ವಾರ್ಡ್ ನಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಭಾರೀ ಸ್ಪರ್ಧೆ ಇದೆ. ಕಾಂಗ್ರೆಸ್-ಬಿಜೆಪಿಯಿಂದ ಚಿಕ್ಕಪ್ಪ-ಮಗ ಸ್ಪರ್ಧಿಸಿದ್ದಾರೆ. ಇದನ್ನೂ ಓದಿ: ತಾಂಜೇನಿಯಾದ ಹುಡುಗನ ನೃತ್ಯಕ್ಕೆ ನೋರಾ ಫತೇಹಿ ಬೌಲ್ಡ್- ವೀಡಿಯೋ ವೈರಲ್

Leave a Reply

Your email address will not be published.

Back to top button