ನವದೆಹಲಿ: ದೇಶಾದ್ಯಂತ ಸದ್ದು ಮಾಡುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ(Cockroach Janata Party) ಎಕ್ಸ್ ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ.
CJP_2029 ಯೂಸರ್‌ನೇಮ್ ಹೊಂದಿರುವ ಈ ಖಾತೆಗೆ ಹೋದಾಗ ʻAccount Withheldʼ ಮಾಡಲಾಗಿದೆ ಎಂದು ತೋರಿಸಲಾಗುತ್ತದೆ. “@CJP_2029 has been withheld in IN in response to a legal demand” ಎಂದು ಕಾಣಿಸುತ್ತದೆ.
Now attempts being made to hack Instagram pic.twitter.com/doFskK9D7Z
— Abhijeet Dipke (@abhijeet_dipke) May 21, 2026
ಏನಿದು ಕಾಕ್ರೋಚ್ ಜನತಾ ಪಾರ್ಟಿ?
ಹಿರಿಯ ವಕೀಲರ ಹುದ್ದೆಯ ಪದನಾಮಕ್ಕೆ ಸಂಬಂಧಿಸಿದ ಅರ್ಜಿಯೊಂದರ ವಿಚಾರಣೆ ನಡೆಸುತ್ತಿದ್ದಾಗ ಉದ್ಯೋಗ ಸಿಗದ ಕೆಲವು ಯುವಕರು ವ್ಯವಸ್ಥೆಯ ವಿರುದ್ಧ ತಿರುಗಿಬೀಳುತ್ತಾರೆ. ಅವರು ಮಾಧ್ಯಮ, ಸಾಮಾಜಿಕ ಜಾಲತಾಣ ಅಥವಾ ಆರ್‌ಟಿಐ (RTI) ಕಾರ್ಯಕರ್ತರ ರೂಪದಲ್ಲಿ ಜಿರಳೆಗಳಂತೆ ಎಲ್ಲರ ಮೇಲೆ ದಾಳಿ ಮಾಡುತ್ತಾರೆ ಎಂದು ಸಿಜೆಐ ಸೂರ್ಯಕಾಂತ್ ನೇತೃತ್ವದ ನ್ಯಾಯಪೀಠ ಟೀಕಿಸಿತ್ತು. ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಅಬ್ಬರ – ಫಾಲೋವರ್ಸ್ ಸಂಖ್ಯೆಯಲ್ಲಿ BJPಯನ್ನೇ ಹಿಂದಿಕ್ಕಿದ CJP
As expected Cockroach Janta Party’s account has been withheld in India. pic.twitter.com/44ymllnSMJ
— Abhijeet Dipke (@abhijeet_dipke) May 21, 2026
ನ್ಯಾ. ಸೂರ್ಯಕಾಂತ್ ಹೇಳಿಕೆ ಬೆನ್ನಲ್ಲೇ ಕಾಕ್ರೊಚ್ ಹೆಸರಿನಲ್ಲಿ ರಾಜಕೀಯ ಪಕ್ಷದ ವೆಬ್‌ಸೈಟ್ ಮತ್ತು ಸೋಶಿಯಲ್ ಮೀಡಿಯಾ ಅಕೌಂಟ್ ತೆರೆಯಲಾಗಿತ್ತು. ಅಭಿಜೀತ್ ದಿಪ್ಕೆ ʼಕಾಕ್ರೋಚ್ ಜನತಾ ಪಾರ್ಟಿʼ ಯನ್ನುಎಕ್ಸ್‌ನಲ್ಲಿ ಸ್ಥಾಪಿಸಿ ಪ್ರಚಾರ ಮಾಡುತ್ತಿದ್ದಾರೆ. ಪ್ರಸುತ್ತ ರಾಜಕೀಯ ವ್ಯವಸ್ಥೆ ಪ್ರಶ್ನೆ ಮಾಡ್ತಿರುವ ದಿಪ್ಕೆ ಈ ವಿನೂತನ ಪ್ರಯತ್ನಕ್ಕೆ ದೇಶದ ಜೆನ್ ಜಿ ಗಳಿಂದ ಬೆಂಬಲ ವ್ಯಕ್ತವಾಗಿತ್ತಿದೆ.
COCKROACH JANTA PARTY EXPOSED 🚨
Founded by Abhijeet Dipke – a political communication strategist and former AAP social media volunteer who worked on meme-driven campaigns during Arvind Kejriwal’s successful Delhi elections – CJP cleverly embraces the insult, turning it into a… pic.twitter.com/xveEDIydph
— Jeet (@JeetN25) May 21, 2026
ಪುಣೆಯಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಮುಗಿಸಿರುವ ಇವರು, ಪ್ರಸ್ತುತ ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕ (Public Relations) ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. ಇವರು ಈ ಹಿಂದೆ (2020 ರಿಂದ 2023 ರವರೆಗೆ) ಆಮ್ ಆದ್ಮಿ ಪಕ್ಷದ (AAP) ಸೋಷಿಯಲ್ ಮೀಡಿಯಾ ಮತ್ತು ಡಿಜಿಟಲ್ ಪ್ರಚಾರ ತಂಡದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದರು.
ಅಭಿಜೀತ್ ದಿಪ್ಕೆ ಈ ಹಿಂದೆ ಆಪ್ ಪಕ್ಷದಲ್ಲಿ ಕೆಲಸ ಮಾಡಿದ ವ್ಯಕ್ತಿ ಎಂದು ಬಿಜೆಪಿ ಬೆಂಬಲಿತ ವ್ಯಕ್ತಿಗಳು ಎಕ್ಸ್‌ನಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ಅಭಿಜೀತ್ ದಿಪ್ಕೆ ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್ ಪಕ್ಷದ ವಿರುದ್ಧವೂ ಪೋಸ್ಟ್ ಹಾಕಿದ್ದರು. ಆದರೆ ಕಾಕ್ರೋಚ್ ಜನತಾ ಪಾರ್ಟಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕಾರಣ ಹಳೆಯ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ.
-> So Backup account of Cockroach janata party follows 5 People
2. Abhijeet dipke close associate of Former Delhi Dy Cm ( AAP party ) and advisor to kejriwal government
4. Meghnads who got 140 votes in delhi assembly 2025 😂
5. Arpit sharma whose father contested on AAP… pic.twitter.com/QINYHvMbeT
— SAI VARMA 🇮🇳 (@i__m_vengeance) May 20, 2026
ಖಾತೆ ಆರಂಭವಾದ ಕೆಲವೇ ದಿನಗಳಲ್ಲಿ ಇಷ್ಟೊಂದು ಬೆಂಬಲ ಸಿಗುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ, ಟರ್ಕಿ, ಸೌದಿ ಅರೇಬಿಯಾದಲ್ಲಿರಯವ ಜನರು ಫಾಲೋ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಒಟ್ಟಿನಲ್ಲಿ ಈಗ ಸಾಮಾಜಿಕ ಜಾಲತಾಣದಲ್ಲಿ Cockroach Janata Party ಪರ, ವಿರುದ್ಧ ಅಭಿಪ್ರಾಯ ವ್ಯಕ್ತವಾಗುತ್ತಿದೆ.

