ಚಿಕ್ಕಮಗಳೂರು: ಬಾವಿ ಕ್ಲೀನ್ ಮಾಡುವಾಗ ಆಮ್ಲಜನಕದ ಕೊರತೆಯಿಂದ ಉಸಿರುಗಟ್ಟಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ನಗರದ (Chikkamagaluru) ಉಂಡೇದಾಸರಹಳ್ಳಿ ಬಡಾವಣೆಯಲ್ಲಿ ನಡೆದಿದೆ.
ಮೃತನನ್ನು ಮೋಹನ್ (40) ಎಂದು ಗುರುತಿಸಲಾಗಿದೆ. ದರ್ಶನ್ ಎಂಬವರ ಮನೆಯ ಬಾವಿ ಕ್ಲೀನ್ ಮಾಡಲು ಮೋಹನ್ ತೆರಳಿದ್ದರು. ಬಾವಿಯ ಒಳಗೆ ಇಳಿದಾಗ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು, ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ ಮತ್ತೆ ರೌಡಿ ಹಬೀದ್ ಪಾಷಾ ಆಕ್ಟೀವ್ – ಸುಪಾರಿ ಗ್ಯಾಂಗ್ ಪೊಲೀಸ್ ಬಲೆಗೆ
ಸ್ಥಳಕ್ಕೆ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪರ ಪುರುಷನ ಜೊತೆ ಅಕ್ರಮ ಸಂಬಂಧ ಶಂಕೆ – ಅಕ್ಕನ ಕತ್ತು ಸೀಳಿ ಕೊಂದ ತಮ್ಮ
