ಹಾವೇರಿ: ಪರ ಪುರುಷನ ಜೊತೆ ಅಕ್ರಮ ಸಂಬಂಧ (Illicit Relationship) ಶಂಕೆ ಹಿನ್ನೆಲೆ ಅಂಗನವಾಡಿಯಲ್ಲಿಯೇ ಅಕ್ಕನನ್ನು (Sister) ತಮ್ಮ ಕತ್ತು ಸೀಳಿ ಭೀಕರವಾಗಿ ಕೊಲೆಗೈದ ಘಟನೆ ಹಾವೇರಿ (Haveri) ಜಿಲ್ಲೆಯ ಶಿಗ್ಗಾವಿಯಲ್ಲಿ (Shiggaon) ನಡೆದಿದೆ.
ಸುಮಾ ಶಿವಶಂಕರ್ ವನಹಳ್ಳಿ (29) ಕೊಲೆಯಾದ ದುರ್ದೈವಿ. ಸುಮಾ ಶಿಗ್ಗಾವಿ ಪಟ್ಟಣದ ಮೌಲಾಲಿ ಗುಡ್ಡದಲ್ಲಿರೋ ಅಂಗನವಾಡಿ ಕೇಂದ್ರದಲ್ಲಿ ಆಯಾ ಕೆಲಸ ಮಾಡಿಕೊಂಡಿದ್ದಳು. ಬೆಳಗ್ಗೆ ಸುಮಾರು 10:15ಕ್ಕೆ ಸ್ವಂತ ತಮ್ಮ ಸಂಜು ಮಚ್ಚಿನಿಂದ ಸುಮಾಳ ಕುತ್ತಿಗೆ ಹಾಗೂ ಕೈಗೆ ಭೀಕರ ಹಲ್ಲೆ ಮಾಡಿದ್ದಾನೆ. ಇದನ್ನೂ ಓದಿ: ಪಹಲ್ಗಾಮ್ ಉಗ್ರರ ಬಳಿಯಿತ್ತು ಚೀನಾದ ಹೈಟೆಕ್ ಕ್ಯಾಮೆರಾ – ತನಿಖೆಗಿಳಿದ NIA
ಮಚ್ಚು ಬೀಸಿದ ರಭಸಕ್ಕೆ ಸುಮಾಳ ಕೈ ಕಟ್ ಆಗಿದೆ. ಕುತ್ತಿಗೆಗೂ ಗಂಭೀರ ಗಾಯಗಳಾದ ಹಿನ್ನೆಲೆ ಸುಮಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಘಟನಾ ಸ್ಥಳಕ್ಕೆ ಶಿಗ್ಗಾವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿಗ್ಗಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಕಪ್ಪೆಚಿಪ್ಪು ತೆಗೆಯುವಾಗ ದುರಂತ – ಭಟ್ಕಳದಲ್ಲಿ ನೆರವೇರಿದ ಮೃತ 11 ಮಂದಿಯ ಸಾಮೂಹಿಕ ಅಂತ್ಯಕ್ರಿಯೆ
