ನವದೆಹಲಿ: ದೇಶದ 11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಸರಾಸರಿ ಲೈಂಗಿಕ ಪಾಲುದಾರರನ್ನು ಹೊಂದಿದ್ದಾರೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ಸಮೀಕ್ಷಾ ವರದಿ ಹೇಳಿದೆ.
ತಮ್ಮ ಸಂಗಾತಿ ಅಲ್ಲದ ಹಾಗೂ ತಮ್ಮೊಂದಿಗೆ ವಾಸಿಸದ ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಮಹಿಳೆಯರ ಪ್ರಮಾಣ ಶೇ.4 ರಷ್ಟಿದೆ. ಇದೇ ರೀತಿಯ ಪುರುಷರ ಪ್ರಮಾಣ ಕೇವಲ ಶೇ 0.5 ಮಾತ್ರ ಇದೆ ಎಂದು ಸಮೀಕ್ಷೆಯಲ್ಲಿ ಕಂಡುಬಂದಿದೆ.
1.1 ಲಕ್ಷ ಮಹಿಳೆಯರು ಹಾಗೂ 1 ಲಕ್ಷ ಪುರುಷರನ್ನೊಳಗೊಂಡು ನಡೆಸಲಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ರಾಜಸ್ಥಾನ, ಹರಿಯಾಣ, ಚಂಡೀಗಢ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಮಧ್ಯ ಪ್ರದೇಶ, ಅಸ್ಸಾಂ, ಕೇರಳ, ಲಕ್ಷದ್ವೀಪ, ಪುದುಚೇರಿ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಮಹಿಳೆಯರ ಲೈಂಗಿಕ ಪಾಲುದಾರರ ಸಂಖ್ಯೆ ಪುರುಷರಿಗಿಂತ ಹೆಚ್ಚಾಗಿದೆ. ಇದನ್ನೂ ಓದಿ: ನ್ಯೂಯಾರ್ಕ್ನಲ್ಲಿ ಗಾಂಧಿ ಪ್ರತಿಮೆ ಧ್ವಂಸ – ಎರಡು ವಾರಗಳಲ್ಲಿ 2ನೇ ಬಾರಿಗೆ ಕೃತ್ಯ
ರಾಜಸ್ಥಾನದಲ್ಲಿ ಮಹಿಳೆಯರು ಹೊಂದಿರುವ ಲೈಂಗಿಕ ಪಾಲುದಾರರ ಪ್ರಮಾಣ ಶೇ.3.1 ರಷ್ಟಿದೆ. ಇದು ಪುರುಷರಲ್ಲಿ ಶೇ.1.8 ಆಗಿದೆ. ಆದರೆ ಕಳೆದ 1 ವರ್ಷದ ಅವಧಿಯಲ್ಲಿ ತಮ್ಮ ಸಂಗಾತಿಗಳಲ್ಲದವರು ಅಥವಾ ಲಿವ್ ಇನ್ ರಿಲೇಶನ್ನಲ್ಲಿ ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಪುರುಷರ ಪ್ರಮಾಣ ಶೇ.4 ರಷ್ಟಿದ್ದರೆ. ಇದು ಮಹಿಳೆಯರಲ್ಲಿ ಶೇ0.5ರಷ್ಟಿದೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ ಕರ್ತವ್ಯ ಲೋಪ ಆರೋಪ – 1,500 ಪುಟಗಳ ದಾಖಲೆ ಸಲ್ಲಿಸಿದ ಸಾ.ರಾ.ಮಹೇಶ್
2019-21ರ ಅವಧಿಯಲ್ಲಿ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5ರಲ್ಲಿ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿಂದ ದೇಶದ 707 ಜಿಲ್ಲೆಗಳನ್ನು ಸಮೀಕ್ಷೆಗೆ ಒಳಪಡಿಸಿದೆ. ರಾಷ್ಟ್ರೀಯ ವರದಿಯು ಸಾಮಾಜಿಕ-ಆರ್ಥಿಕ ಮತ್ತು ಇತರ ಹಿನ್ನೆಲೆಗೆ ಸಂಬಂಧಿಸಿದ ಡೇಟಾವನ್ನು ಸಹ ಒದಗಿಸುತ್ತದೆ. ಇದು ನೀತಿ ನಿರೂಪಣೆ ಮತ್ತು ಪರಿಣಾಮಕಾರಿ ಕಾರ್ಯಕ್ರಮ ಅನುಷ್ಠಾನಕ್ಕೆ ಉಪಯುಕ್ತವಾಗಿದೆ.