ಬೀಜಿಂಗ್: ಕಟ್ಟಡದ ಮೇಲಿನಿಂದ ನಾಯಿಯೊಂದು ಆಕಸ್ಮಿಕವಾಗಿ ಜಾರಿ ಕೆಳಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮೇಲೆ ಬಿದ್ದ ಪರಿಣಾಮ ಆಕೆ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿರುವ ಘಟನೆ ಚೀನಾದ ಶಾಂಘೈ ಪ್ರದೇಶದಲ್ಲಿ ನಡೆದಿದೆ.
Advertisement
ಮಹಿಳೆಯೊಬ್ಬರು ಹೊರಗಿನಿಂದ ತನ್ನ ಸ್ನೇಹಿತೆಯ ಜೊತೆ ಕಟ್ಟಡದ ಒಳ ಪ್ರವೇಶಿಸಿಸುವ ವೇಳೆ ಆಕಸ್ಮಾತ್ ನಾಯಿಯೊಂದು ಕಟ್ಟಡದ ಮೇಲಿನಿಂದ ಮಹಿಳೆಯ ತಲೆ ಮೇಲೆ ಬಿದ್ದಿದೆ. ಪರಿಣಾಮವಾಗಿ ಅವರು ಸ್ಥಳದಲ್ಲೇ ಕುಸಿದು ಬಿದಿದ್ದಾರೆ. ಈ ದೃಶ್ಯಗಳು ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
ಪ್ರಜ್ಞೆ ತಪ್ಪಿ ಬಿದ್ದ ಮಹಿಳೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, 12 ನಿಮಷಗಳ ಬಳಿಕ ಮಹಿಳೆ ಮರಳಿ ಎಚ್ಚರಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಘಟನೆಯ ವೇಳೆ ಮಹಿಳೆ ಜೊತೆಗಿದ್ದ ಸ್ನೇಹಿತೆ ಮಗುವನ್ನು ಎತ್ತಿಕೊಂಡಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ. ಆದರೆ ಈ ವೇಳೆ ಅದೃಷ್ಟವಶಾತ್ ಮಗು ಎತ್ತಿಕೊಂಡಿದ್ದ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ.
Advertisement
https://www.facebook.com/shanghaiist/videos/10156872638066030/
Advertisement