ಬಾಗಲಕೋಟೆ: ಹಣದ ಮುಂದೆ ಮಾನವೀಯತೆಯ ಮೌಲ್ಯಗಳು ಹಾಗೂ ಸಂಬಂಧಗಳೂ ಉಳಿಯೋದಿಲ್ಲ ಅನ್ನೋದಕ್ಕೆ ಬಾಗಲಕೋಟೆ ಜಿಲ್ಲೆಯ ಹೊನ್ನಾಕಟ್ಟಿ ಗ್ರಾಮದಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಹಣಕ್ಕಾಗಿ ಪತಿಯ ಶವವನ್ನೇ ರಾತ್ರೋ ರಾತ್ರಿ ಬಿಟ್ಟು ಪತ್ನಿ ಪರಾರಿಯಾಗಿದ್ದಾಳೆ.
Advertisement
ಇದನ್ನೂ ಓದಿ: ಗಂಡನ ಕಾಮದಾಟ ಬೇಸತ್ತು ಸುಪಾರಿ ಕೊಟ್ಟು ಗಂಡನನ್ನೇ ಕೊಲ್ಲಿಸಿದ್ಳು!
Advertisement
ರೇಣುಕಾ ಎಂಬ ಮಹಿಳೆ ಹಣಕ್ಕಾಗಿ ಪತಿಯ ಶವವನ್ನು ಬಿಟ್ಟು ಹೋದ ಪತ್ನಿ. ಸೋಮವಾರ ರಾತ್ರಿ ರೇಣುಕಾ ಪತಿ ಶಿವಲಿಂಗಪ್ಪ ಬೇವಿನಮಟ್ಟಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಶಿವಲಿಂಗಪ್ಪ ಅವರು ನಾಲ್ಕು ವರ್ಷದ ಹಿಂದೆ ತಮ್ಮ 13 ಎಕರೆ ಜಮೀನನ್ನು ಸುಮಾರು 80 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ್ದರು. ಸೋಮವಾರ ಶಿವಲಿಂಗಪ್ಪ ಮರಣ ಹೊಂದಿದ ನಂತರ ಮನೆಯಲ್ಲಿನ ಹಣ ಲಪಟಾಯಿಸಿ ರೇಣುಕಾ ರಾತ್ರೋ ರಾತ್ರಿ ಮಗನೊಂದಿಗೆ ಗ್ರಾಮದಿಂದ ಕಾಲ್ಕಿತ್ತಿದ್ದಾಳೆ.
Advertisement
Advertisement
ರೇಣುಕಾಳಿಗೆ ಗ್ರಾಮಸ್ಥರು ಬುದ್ಧಿ ಹೇಳಲು ಹೋದ್ರೆ ಅವರ ಮೇಲೆಯೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಬೆದರಿಕೆ ಹಾಕಿ ಪರಾರಿಯಾಗಿದ್ದಾಳೆ. ಹೀಗಾಗಿ ಗ್ರಾಮದ ಜನತೆಯೇ ದುಡ್ಡು ಸೇರಿಸಿ ಶಿವಲಿಂಗಪ್ಪರ ಅಂತ್ಯಕ್ರಿಯೆ ಮಾಡಿ, ನಂತರ ಪತ್ನಿ ರೇಣುಕಾಳ ಮೇಲೆ ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.