ಲಕ್ನೋ: ತವರಿಗೆ ಹೋಗಿದ್ದ ಪತ್ನಿ ಕರ್ವಾ ಚೌತ್ (Karwa Chauth) ಉಪವಾಸದ ಹಬ್ಬಕ್ಕೆ ಮನೆಗೆ ಬಾರದೇ ಇದ್ದುದ್ದಕ್ಕೆ ಅಸಮಾಧಾನಗೊಂಡ 24 ವರ್ಷದ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.
ಉತ್ತರ ಪ್ರದೇಶದ ಭೂತಾ ಪೊಲೀಸ್ ಠಾಣಾ (Bhuta Police Station) ವ್ಯಾಪ್ತಿಯ ಗುಗಾ ಗ್ರಾಮದ ನಿವಾಸಿ ಪ್ರಮೋದ್ ಕುಮಾರ್ (24) ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶಮಿ ಬೆಂಕಿ ಬೌಲಿಂಗ್‌ಗೆ ನೀಲಿ ತಾರೆ ಫಿದಾ – ಕೇಂದ್ರ ಲಸ್ಟ್ ರಿಯಾಕ್ಷನ್ ಸಿಕ್ಕಾಪಟ್ಟೆ ವೈರಲ್
Advertisement
Advertisement
ಪ್ರಮೋದ್ ಪತ್ನಿ ಪ್ರೀತಿ (Love) ಎರಡು ತಿಂಗಳ ಹಿಂದೆ ತನ್ನ ತಾಯಿಯ ಮನೆಗೆ ಹೋಗಿದ್ದಳು. ಆದ್ರೆ ಕರ್ವಾ ಚೌತ್ ಪ್ರಮುಖ ಉಪವಾಸದ ಹಬ್ಬ. ಅಂದು ಮಹಿಳೆಯರು ಉಪವಾಸದ ವ್ರತ ಮಾಡಿ ಗಂಡನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಆದ್ರೆ ಹಬ್ಬದಂದು ಪತ್ನಿ ಮನೆಗೆ ಬಂದಿಲ್ಲ ಎಂದು ಪ್ರಮೋದ್ ಅಸಮಾಧಾನಗೊಂಡಿದ್ದ ಎಂದು ಅಜ್ಜ ಬಾಬುರಾಮ್ ತಿಳಿಸಿದ್ದಾರೆ. ಇದನ್ನೂ ಓದಿ: World Cup 2023: ಮತ್ತೆ ಶತಕ ಮಿಸ್ – ಕ್ಯಾಬಿನ್‌ನಲ್ಲಿ ಕುಳಿತು ಕಣ್ಣೀರಿಟ್ಟ ಕೊಹ್ಲಿ
Advertisement
Advertisement
ಬುಧವಾರವೂ ಹೆಂಡತಿಯನ್ನು ಮನೆಗೆ ಕಳುಹಿಸಿಕೊಡುವಂತೆ ಅತ್ತೆಯೊಂದಿಗೆ ಫೋನ್‌ನಲ್ಲಿ ಜಗಳವಾಡಿದ್ದ. ಗುರುವಾರ ಬೆಳಗ್ಗೆ ನೋಡುವಷ್ಟರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮರುದಿನ ಬೆಳಗ್ಗೆ ತುಂಬಾ ಹೊತ್ತಾದರೂ ಪ್ರಮೋದ್ ತನ್ನ ರೂಮ್‌ನಿಂದ ಹೊರಗೆ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಕುಟುಂಬಸ್ಥರು ರೂಮ್ ಬಾಗಿಲು ತೆಗೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: World Cup 2023: ಲಂಕಾಗೆ ಬೆಂಕಿ ಹಚ್ಚಿ ನಂ.1 ಪಟ್ಟಕ್ಕೇರಿದ ಶಮಿ
ಬುಧವಾರ ದೇಶದ ವಿವಿಧ ರಾಜ್ಯಗಳಲ್ಲಿ ಆಚರಿಸಿದ ಕರ್ವಾ ಚೌತ್ ಹಬ್ಬದಲ್ಲಿ ಗಂಡನ ಸುರಕ್ಷತೆ ಮತ್ತು ದೀರ್ಘಾಯುಷ್ಯಕ್ಕಾಗಿ ಸೂರ್ಯೋದಯದಿಂದ ಚಂದ್ರೋದಯದವರೆಗೆ ಮಹಿಳೆಯರು ಉಪವಾಸ ಆಚರಿಸಿದ್ದರು. ಭಾರತದ ಪಬ್ಜಿ ಪ್ರೇಮಿಗಾಗಿ ದೇಶಕ್ಕೆ ಅಕ್ರಮ ಪ್ರವೇಶ ಮಾಡಿರುವ ಸೀಮಾ ಹೈದರ್ ಕೂಡ ಈ ಹಬ್ಬವನ್ನು ಸಂಪ್ರದಾಯದಂತೆ ಆಚರಿಸಿದ್ದರು.
Web Stories