Connect with us

Bollywood

ಕರಣ್ ಜೋಹರ್ ಜೊತೆ ಇರುವ ತನ್ನ ಸಂಬಂಧದ ರಹಸ್ಯ ಬಿಚ್ಚಿಟ್ಟ ಶಾರೂಖ್ ಖಾನ್!

Published

on

ಮುಂಬೈ: ನಿರ್ದೇಶಕ ಕರಣ್ ಜೋಹರ್ ನಟ ಶಾರೂಖ್ ಖಾನ್ ಅವರ ಜೊತೆ ಮಾಡಿರುವ ಎಲ್ಲಾ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿದೆ. ಆದರೆ ಈಗ ಈ ಇಬ್ಬರು ಜೊತೆಯಾಗಿ ಸಿನಿಮಾ ಮಾಡಿ ಹಲವು ವರ್ಷಗಳು ಆಗಿದೆ. ಈ ಹಿಂದೆ 2010ರಲ್ಲಿ ಕರಣ್ ಅವರ ನಿರ್ದೇಶನದಲ್ಲಿ ಬಿಡುಗಡೆಯಾದ ‘ಮೈ ನೇಮ್ ಈಸ್ ಖಾನ್’ ಚಿತ್ರದಲ್ಲಿ ಶಾರೂಖ್ ನಟಿಸಿದ್ದರು.

ಇತ್ತೀಚಿಗೆ ನಡೆದ ‘ಇಫ್ತೆಫಾಕ್’ ಚಿತ್ರದ ಪ್ರೆಸ್ ಮೀಟ್ ನಲ್ಲಿ ಶಾರೂಖ್ ಖಾನ್ ಆಗಮಿಸಿದ್ದರು. ಆಗ ಅಲ್ಲಿದ ಮಾಧ್ಯಮದವರು ನಿಮ್ಮ ಹಾಗೂ ಕರಣ್ ಅವರ ಸಿನಿಮಾ ಯಾವಾಗ ಬರಲಿದೆ ಎಂದು ಶಾರೂಖ್ ಅವರಿಗೆ ಪ್ರಶ್ನೆ ಕೇಳಿದ್ದಾರೆ. ನಾವು ಸಾಕಷ್ಟು ಚಿತ್ರದ ಕಥೆ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಆದರೆ ಯಾವುದು ಈಗ ಫೈನಲ್ ಆಗಿಲ್ಲ ಎಂದು ಶಾರೂಖ್ ಉತ್ತರಿಸಿದ್ದಾರೆ.

ತಮ್ಮ ಪ್ರೊಡಕ್ಷನ್ ವೆಂಚರ್ ಬಗ್ಗೆ ಮಾತನಾಡುತ್ತಾ ಕರಣ್, “ನಾನು ಹಾಗೂ ಶಾರೂಖ್ ಕೇವಲ ಒಳ್ಳೆಯ ಸ್ನೇಹಿತರು ಅಥವಾ ಒಳ್ಳೆ ಕುಟುಂಬದವರು ಅಷ್ಟೇ ಅಲ್ಲ ಒಳ್ಳೆಯ ಸಹದ್ಯೋಗಿ ಕೂಡ” ಎಂದು ಮಾಧ್ಯಮದವರಿಗೆ ತಿಳಿಸಿದರು.

ಕರಣ್ ಹಾಗೂ ಶಾರೂಖ್ ನಡುವೆ ಜಗಳ ನಡೆದಿದೆ. ಅವರ ಮಧ್ಯೆ ಭಿನ್ನಾಭಿಪ್ರಾಯ ಇದೆ ಎಂದು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತಿತ್ತು. ಈಗ ಇವರಿಬ್ಬರು ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುವ ಮೂಲಕ ಇಬ್ಬರ ಸಂಬಂಧದ ಬಗ್ಗೆ ಹರಡಿದ್ದ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.

ಕರಣ್ ಅವರಿಂದ ನನಗೆ ಯಾವುದೇ ತೊಂದರೆ ಇಲ್ಲ. ನಾನು ಯಾವಾಗಲೂ ಅವರನ್ನು ಪ್ರೀತಿಯಿಂದ ನೋಡುತ್ತೇನೆ. ಅವರ ಪ್ರೀತಿಯ ಹಲವು ಮುಖಗಳನ್ನು ನಾನು ನೋಡಿದ್ದೇನೆ. ನನಗೆ ಸ್ನೇಹಿತನಿಂದ ಒಬ್ಬ ಸಹೋದರನ ರೀತಿಯಲ್ಲಿ ಅವರು ನನಗೆ ನೋಡುತ್ತಾರೆ ಎಂದು ಶಾರೂಖ್ ಖಾನ್ ಕರಣ್ ಅವರನ್ನು ಹೊಗಳಿದರು.

Click to comment

Leave a Reply

Your email address will not be published. Required fields are marked *