ಬೆಂಗಳೂರು: ಜಾತಿಗಣತಿ ವರದಿ ಬಿಡುಗಡೆಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಅಹಿಂದಗೆ (Ahinda) ಮೀಸಲಾತಿ ಪ್ರಮಾಣ 75% ಹೆಚ್ಚಳ ಮಾಡಬೇಕು ಎಂಬ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಮಾಜಿ ಪ್ರಧಾನಿ ದೇವೇಗೌಡ (H.D Deve Gowda)ತಿರುಗೇಟು ನೀಡಿದ್ದಾರೆ.
ಜೆಡಿಎಸ್ (JDS) ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಭಾನುವಾರ 2-3 ಗಂಟೆ ಅವರ ಕಾರ್ಯಕ್ರಮ ನಡೀತು. ಸಿದ್ದರಾಮಯ್ಯ ನಾನು ರಾಜಕೀಯದಿಂದ ನಿವೃತ್ತಿ ಆಗೊಲ್ಲ. ಚುನಾವಣೆಗೆ ನಿಲ್ಲಲ್ಲ ಅಂದರು. ಅದಾದ ಕೂಡಲೇ ಅಹಿಂದಕ್ಕೆ 75% ಮೀಸಲಾತಿ ಕೊಡಬೇಕು ಅಂದರು. ಸಿದ್ದರಾಮಯ್ಯ 16 ವರ್ಷ ಬಜೆಟ್ ಮಂಡನೆ ಮಾಡಿದ್ರು. ಅಹಿಂದ ವರ್ಗಕ್ಕೆ ಎಷ್ಟು ಪ್ರಯೋಜನ ಆಗಿದೆ ಎಂದು ಸಿದ್ದರಾಮಯ್ಯ ಅವರೇ ಹೇಳಲಿ. ಇವರು ಸಿಎಂ ಆಗಿ ಯಾವ ಯಾವ ಜಾತಿಗೆ ಅನುಕೂಲ ಆಗಿದೆ ಹೇಳಲಿ ಎಂದರು. ಇದನ್ನೂ ಓದಿ: ಸರ್ಕಾರಿ ಬಂಗಲೆಗಾಗಿ ಹಾಲಿ, ಮಾಜಿ ಸಚಿವರ ಫೈಟ್ – ಮಹದೇವಪ್ಪ ವಾಸವಿರುವಾಗಲೇ ಜೆಸಿಬಿ ಘರ್ಜನೆ

ಜಾತಿಗಣತಿಗೆ ಮಾಡಲು ನಿ.ನ್ಯಾಯಾಧೀಶರ ಸಮಿತಿ ಮಾಡಿದ್ರು. ಹೇಳಲಿ ಯಾರ್ ಯಾರಿಗೆ ಅನುಕೂಲ ಮಾಡಿದ್ರು. ಜಮೀರ್‌ನ MLA ಮಾಡಿದ್ದು ಯಾರು? ರೋಷನ್ ಬೇಗ್ ಮಂತ್ರಿ ಮಾಡಿದ್ದು ಯಾರು? ಸಿಎಂ ಇಬ್ರಾಹಿಂನ್ನು ಕೇಂದ್ರ ಮಂತ್ರಿ ಮಾಡಿದ್ದು ಯಾರು? 26 ಜನ MLC ಗಳನ್ನು ನಾನು ಅಹಿಂದ ವರ್ಗದವರನ್ನು ಮಾಡಿದ್ದೆ. 7-8 ಮುಸ್ಲಿಂಮರನ್ನ MLC ಮಾಡಿದ್ದೆ ನಾನು. ಸಿದ್ದರಾಮಯ್ಯ ಏನು ಮಾಡಿದ್ರು ಹೇಳಲಿ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಿದ್ದು ಆಪ್ತರ ಬಂಗಲೆ ಜಟಾಪಟಿ| ಬಾಡಿಗೆ ಮನೆ ಸಿಕ್ಕಿದ ತಕ್ಷಣ ಸರ್ಕಾರಿ ಮನೆ ಖಾಲಿ ಮಾಡ್ತೇನೆ: ಮಹದೇವಪ್ಪ
