ಚಿಕ್ಕಬಳ್ಳಾಪುರ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕು ಚೊಕ್ಕಹಳ್ಳಿ (Chokkahalli) ಗ್ರಾಮದ ಬಾಡಿಗೆ ಮನೆಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ತಾಲೂಕು ಇನಮಿಂಚೇನಹಳ್ಳಿಯ ನಿವಾಸಿ ಚೈತ್ರಾ ಮೃತ ಮಹಿಳೆ. ಚೈತ್ರಾ 7-8 ವರ್ಷಗಳ ಹಿಂದೆ ಗಂಡನನ್ನ ಬಿಟ್ಟು ಬೇರೆ ಮನೆಯಲ್ಲಿ ವಾಸವಾಗಿದ್ದರು. 10 ಹಾಗೂ 12 ವರ್ಷದ ಮಕ್ಕಳೊಂದಿಗೆ ಚೈತ್ರಾ ಬೇರೆ ವಾಸವಾಗಿದ್ದರು. ಇದನ್ನೂ ಓದಿ: ಭಾರತದಲ್ಲೇ ನಿರ್ಮಿತ ಬುಲೆಟ್ ರೈಲಿನ ಬಾಡಿ ಫ್ರೇಮ್ ಸಿದ್ಧ – ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಕೋಲಾರ ಮೂಲದ ಪ್ರಿಯಕರ ಶಬ್ಬೀರ್ ಎಂಬಾತನ ವಿರುದ್ಧ ಹಲ್ಲೆ, ಕೊಲೆ ಆರೋಪ ಕೇಳಿಬಂದಿದೆ. ಚೈತ್ರಾಳನ್ನ ಪಕ್ಕದ ಮನೆಯವರ ಸಹಾಯದಿಂದ ಆಸ್ಪತ್ರೆಗೆ ಕಳುಹಿಸಿ ಶಬ್ಬೀರ್ ಎಸ್ಕೇಪ್ ಆಗಿದ್ದಾನೆ. ಚೈತ್ರಾಳ ಮೊಬೈಲ್ ತೆಗೆದುಕೊಂಡು ಪ್ರಿಯಕರ ಶಬ್ಬೀರ್ ಪರಾರಿಯಾಗಿದ್ದಾನೆ. ನಂದಿಗಿರಿಧಾಮ ಪೊಲೀಸರು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯುವುದು ಗ್ಯಾರಂಟಿ ಆದ್ಮೇಲೆ ಪಾದಯಾತ್ರೆ ಫಿಕ್ಸ್ ಆಗಿದೆ – ಯತ್ನಾಳ್
