ಬೆಂಗಳೂರು: ನಗರದ ಪ್ರತಿಷ್ಠಿತ ಕ್ರೆಸೆಂಟ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸಕ್ಕಾಗಿ ಕಾಂಗ್ರೆಸ್‌ನ (Congress) ಹಾಲಿ ಹಾಗೂ ಮಾಜಿ ಸಚಿವರ ನಡುವೆ ತೀವ್ರ ತಿಕ್ಕಾಟ ಶುರುವಾಗಿದೆ.
ಹೌದು, ಕ್ರೆಸೆಂಟ್ ರಸ್ತೆಯ ನಂ. 2 ಸರ್ಕಾರಿ ಬಂಗಲೆಯನ್ನು ತಮ್ಮ ವಶಕ್ಕೆ ಪಡೆಯಲು ಸಾರಿಗೆ ಸಚಿವ ಬೈರತಿ ಸುರೇಶ್(Byrathi Suresh) ಹಾಗೂ ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ(Mahadevappa) ನಡುವೆ ತೆರೆಮರೆಯ ಜಟಾಪಟಿ ಆರಂಭವಾಗಿದೆ.
ಸಚಿವರಾಗಿದ್ದ ಅವಧಿಯಿಂದಲೂ ಡಾ. ಎಚ್.ಸಿ. ಮಹದೇವಪ್ಪ ಇದೇ ಬಂಗಲೆಯಲ್ಲಿ(Residence) ವಾಸ್ತವ್ಯ ಹೂಡಿದ್ದಾರೆ. ನಿಯಮಾವಳಿಗಳ ಪ್ರಕಾರ ಸರ್ಕಾರಿ ನಿವಾಸವನ್ನು ತೆರವುಗೊಳಿಸಲು ಅವರಿಗೆ ಇನ್ನೂ ಸಮಯಾವಕಾಶವಿದೆ. ಆದರೆ ಅಷ್ಟರಲ್ಲೇ ಈ ನಿವಾಸವನ್ನು ತಮ್ಮ ಸುಪರ್ದಿಗೆ ಪಡೆಯಲು ಮುಂದಾಗಿರುವ ಸಚಿವ ಬೈರತಿ ಸುರೇಶ್ ಮಹದೇವಪ್ಪ ಅವರು ಬಂಗಲೆಯಲ್ಲೇ ಇರುವಾಗಲೇ ಏಕಾಏಕಿ ನವೀಕರಣ ಕಾಮಗಾರಿ ಶುರುಮಾಡಿಸಿದ್ದಾರೆ. ಇದನ್ನೂ ಓದಿ: ಬೈ ಬೈ ಪಪ್ಪಾ ಎಂದು ಚೆನಾಬ್ ನದಿಗೆ ಜಿಗಿದ ಯುವತಿ – ವಿಡಿಯೋ ವೈರಲ್
ಸಚಿವರಿಗೆ ಮನೆ ಖಾಲಿ ಮಾಡಲು 90 ದಿನಗಳ ಕಾಲಾವಕಾಶವಿದೆ. ಹೀಗಿದ್ದರೂ ಮಹದೇವಪ್ಪ ಅವರು ಮನೆಯಲ್ಲಿ ಇರುವಾಗಲೇ ಬಂಗಲೆಯ ಆವರಣಕ್ಕೆ ಜೆಸಿಬಿ ತರಿಸಿ ಅಲ್ಲಿದ್ದ ಮೀಟಿಂಗ್ ಹಾಲ್ ಅನ್ನು ನೆಲಸಮ ಮಾಡಿಸಲಾಗಿದೆ. ಅಷ್ಟೇ ಅಲ್ಲದೆ ಬೈರತಿ ಸುರೇಶ್ ಅವರ ಸೂಚನೆಯ ಮೇರೆಗೆ ಬಂಗಲೆಗೆ ಪೇಂಟಿಂಗ್ ಹಾಗೂ ನವೀಕರಣ ಕಾರ್ಯಗಳು ಭರದಿಂದ ಸಾಗುತ್ತಿವೆ. ಇದನ್ನೂ ಓದಿ: ಡಿಕೆಶಿ ಪ್ರಜಾಸೇವಾ ಆಂದೋಲನದಲ್ಲಿ `ಕೈ’ ಶಾಸಕನ ದರ್ಪ – ಸಮಸ್ಯೆ ಹೇಳಲು ಬಂದವರ ಮೇಲೆ ಧಿಮಾಕು
ಮಹದೇವಪ್ಪ ಅವರು ಮನೆಯಲ್ಲಿದ್ದರೂ ಬೈರತಿ ಸುರೇಶ್ ಅವರನ್ನು ಭೇಟಿ ಮಾಡಿ ಮತನಾಡಿಸಿಲ್ಲ ಎಂಬ ಆರೋಪ ಸಹ ಕೇಳಿ ಬಂದಿದೆ. ಇನ್ನೊಂದೆಡೆ ನಿವಾಸವನ್ನು ಎರಡೇ ದಿನಗಳಲ್ಲಿ ಖಾಲಿ ಮಾಡುವಂತೆ ಸಚಿವ ಬೈರತಿ ಸುರೇಶ್ ಹಾಗೂ ಅವರ ಬೆಂಬಲಿಗರು ಮಹದೇವಪ್ಪ ಅವರ ಮನೆ ಸಿಬ್ಬಂದಿಗೆ ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾಗಿದೆ. ಮಾಜಿ ಸಚಿವರು ನಿಯಮಬದ್ಧವಾಗಿ ತೆರವು ಮಾಡುವ ಮೊದಲೇ ಈ ರೀತಿ ಕಾಮಗಾರಿ ಆರಂಭಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
