Bengaluru CityDistrictsKarnatakaLatestLeading NewsMain Post

ಬೆಂಗಳೂರಿನಲ್ಲಿ ಎಲ್ಲಿ-ಎಷ್ಟು ಮಳೆಯಾಗಿದೆ?

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ನಿನ್ನೆ ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಬೆಂಗಳೂರಿನ ಜನ ಹೈರಾಣಾಗಿದ್ದಾರೆ. ಬೆಂಗಳೂರು ಉತ್ತರ ಭಾಗದಲ್ಲಿ ಅತಿಹೆಚ್ಚು ಮಳೆಯಾಗಿದ್ದು, ಹಲವೆಡೆ ರಸ್ತೆ ಸಂಚಾರ ಬಂದ್‌ ಆಗಿದೆ. ರಸ್ತೆಗಳು ನದಿಗಳಂತಾಗಿದ್ದು, ವಾಹನ ಸಂಚಾರಕ್ಕೂ ಪರದಾಡುತ್ತಿದ್ದಾರೆ.

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ಪೈಕಿ ಉತ್ತರ ಬೆಂಗಳೂರಿನ ಅತಿದೊಡ್ಡ ಮಾನ್ಯತಾ ಟೆಕ್ ಪಾರ್ಕ್ ಸಹ ಜಲಾವೃತಗೊಂಡಿದ್ದು, ಇಂದು ಕೆಲವು ನೌಕರರು ತಮ್ಮ ಕಚೇರಿಗೆ ತಲುಪಲಾಗದೇ ಮನೆಗೆ ಮರಳಿದ್ದಾರೆ. ಈ ನಡುವೆ ಕಳೆದ 24 ಗಂಟೆಯಲ್ಲಿ ಬೆಂಗಳೂರಿನ ವಿವಿಧ ವಲಯಗಳಲ್ಲಿ ಎಷ್ಟು ಪ್ರಮಾಣದ ಮಳೆಯಾಗಿದೆ ಎಂಬುದನ್ನು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಅತ್ಯಾಚಾರದಂತಹ ಘಟನೆ ನಡೆಯುತ್ತಲೇ ಇರುತ್ತೆ: ಜಾರ್ಖಂಡ್ ಸಿಎಂ ಹೇಳಿಕೆಗೆ ತೀವ್ರ ವಿರೋಧ

ಎಲ್ಲಿ-ಎಷ್ಟು ಮಿ.ಮೀ ಮಳೆಯಾಗಿದೆ?
ಸಂಪಂಗಿರಾಮನಗರ(2) (ಪೂರ್ವವಲಯ) – 148.50
ಎಚ್‌ಎಲ್‌ ವಿಮಾನ ನಿಲ್ದಾಣ (1) (ಮಹದೇವಪುರ ವಲಯ) – 142
ವರ್ತೂರು – 141
ಪುಲಕೇಶಿನಗರ (ಪೂರ್ವವಲಯ) – 139
ರಾಜಮಹಲ್ ಗುಟ್ಟಹಳ್ಳಿ (ಪಶ್ಚಿಮ ವಲಯ) – 138
ದೊಡ್ಡನೆಕ್ಕುಂದಿ (ಮಹದೇವಪುರ ವಲಯ) – 133.50
ಮಾರತ್ತಹಳ್ಳಿ (ಪೂರ್ವವಲಯ) – 129
ಕೊನೆನ ಅಗ್ರಹಾರ (ಜಿಪಿ) – 114.50
ವಿದ್ಯಾಪೀಠ (ದಕ್ಷಿಣ ವಲಯ) – 114.50

ಹಂಪಿ ನಗರ (ದಕ್ಷಿಣ ವಲಯ) – 104
ಎಚ್‌ಎಎಲ್‌ ವಿಮಾನ ನಿಲ್ದಾಣ-2 (ಮಹದೇವಪುರ ವಲಯ) – 102.50
ವಿಶ್ವೇಶ್ವರಪುರಂ (ದಕ್ಷಿಣ ವಲಯ) – 98
ಹೊರಮಾವು(2) (ಮಹದೇವಪುರ ವಲಯ) – 94
ಹಗದೂರು (ಮಹದೇವಪುರ ವಲಯ) – 93.50
ಗಾಳಿಯಾಂಜನೇಯ ದೇವಸ್ಥಾನ ವಾರ್ಡ್ (ದಕ್ಷಿಣ ವಲಯ) – 93.50
ಬೆಳ್ಳಂದೂರು(2) (ಮಹದೇವಪುರ ವಲಯ) – 89

ಕೊಟ್ಟಿಗೆಪಾಳ್ಯ (ಆರ್‌ನಗರ ವಲಯ) – 89
ಯಲಹಂಕ (ಯಲಹಂಕ ವಲಯ) – 87
ಬಾಣಸವಾಡಿ (ಪೂರ್ವವಲಯ) – 87
ಕೋರಮಂಗಲ (ದಕ್ಷಿಣ ವಲಯ) – 83
ನಾಗರಭಾವಿ (ಪಶ್ಚಿಮ ವಲಯ) – 79
ನಾಗಪುರ (ಪಶ್ಚಿಮ ವಲಯ) – 75.50
ನಾಯಂಡಹಳ್ಳಿ (ಪಶ್ಚಿಮ ವಲಯ) – 75.50
ಅತ್ತೂರು (ಯಲಹಂಕ ವಲಯ) – 74
ಯಲಹಂಕ- ಕೆಎಸ್‌ಎನ್‌ಡಿಎಂಎಸ್‌ (ಯಲಹಂಕ ವಲಯ) – 72.50

ಯಾನಂದನಗರ (ಪಶ್ಚಿಮ ವಲಯ) – 71.50
ಚೌಡೇಶ್ವರಿ ವಾರ್ಡ್ (ಯಲಹಂಕ ವಲಯ) – 70.50
ವಿಶ್ವನಾಥ ನಾಗೇನಹಳ್ಳಿ (ಪೂರ್ವವಲಯ) – 69
ಹೆಮ್ಮಿಗೆಪುರ(1) (ಆರ್‌ಆರ್‌ ನಗರ ವಲಯ) – 69
ಎಚ್‌ಆರ್‌ಎಸ್‌ ಲೇಔಟ್ (ಬೊಮ್ಮನಹಳ್ಳಿ ವಲಯ) – 67
ಸಿಂಗಸಂದ್ರ(1) (ಬೊಮ್ಮನಹಳ್ಳಿ ವಲಯ) – 66.50
ವಿದ್ಯಾರಣ್ಯಪುರ (ಯಲಹಂಕಜೋನ್) – 66
ಎಚ್.ಗೊಲ್ಲಹಳ್ಳಿ (ಜಿಪಿ) – 64.50

Live Tv

Leave a Reply

Your email address will not be published.

Back to top button